ಶುಕ್ರವಾರ, ಫೆಬ್ರವರಿ 24, 2023

Mavinakayi neer gojju recipe in Kannada | ಮಾವಿನಕಾಯಿ ನೀರ್ ಗೊಜ್ಜು ಮಾಡುವ ವಿಧಾನ

 

Mavinakayi neer gojju recipe in Kannada

Mavinakayi neer gojju recipe in Kannada | ಮಾವಿನಕಾಯಿ ನೀರ್ ಗೊಜ್ಜು ಮಾಡುವ ವಿಧಾನ 

ಮಾವಿನಕಾಯಿ ನೀರ್ ಗೊಜ್ಜು ವಿಡಿಯೋ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಸಣ್ಣ ಗಾತ್ರದ ಮಾವಿನಕಾಯಿ
  2. 2 - 4 ಹಸಿರು ಮೆಣಸಿನ ಕಾಯಿ (ನಿಮ್ಮ ಖಾರಕ್ಕೆ ತಕ್ಕಂತೆ)
  3. ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಟೀಸ್ಪೂನ್ ಸಾಸಿವೆ
  2. 1/2 ಟೀಸ್ಪೂನ್ ಜೀರಿಗೆ 
  3. 1 ಒಣಮೆಣಸಿನಕಾಯಿ
  4. 7 - 8 ಎಸಳು ಬೆಳ್ಳುಳ್ಳಿ
  5. ಒಂದು ದೊಡ್ಡ ಚಿಟಿಕೆ ಇಂಗು 
  6. 4 - 5 ಕರಿಬೇವು
  7. 1 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
  8. 1 ಟೇಬಲ್ ಚಮಚ ಅಡುಗೆ ಎಣ್ಣೆ

ಮಾವಿನಕಾಯಿ ನೀರ್ ಗೊಜ್ಜು ಮಾಡುವ ವಿಧಾನ:

  1. ಮಾವಿನಕಾಯಿ ಸಿಪ್ಪೆ ತೆಗೆದು ಕತ್ತರಿಸಿ. 
  2. ಒಂದು ಪಾತ್ರೆಗೆ ಕತ್ತರಿಸಿದ ಮಾವಿನಕಾಯಿ ಮತ್ತು ಹಸಿರು ಮೆಣಸಿನ ಕಾಯಿ ಸೇರಿಸಿ. 
  3. ಒಂದು ಕಪ್ ನೀರು ಹಾಕಿ ಮಾವಿನಕಾಯಿ ಮೆತ್ತಗಾಗುವವರೆಗೆ ಬೇಯಿಸಿ. ಒಂದೈದು ನಿಮಿಷ ಸಾಕಾಗುತ್ತದೆ. 
  4. ಬಿಸಿ ಆರಿದ ಮೇಲೆ ಚನ್ನಾಗಿ ಮಸೆದುಕೊಳ್ಳಿ ಅಥವಾ ಮಿಕ್ಸಿಗೆ ಹಾಕಿ ಅರೆಯಿರಿ. 
  5. ಒಂದು ಬಾಣಲೆಯಲ್ಲಿ ಎಣ್ಣೆ, ಸಾಸಿವೆ ಮತ್ತು ಜೀರಿಗೆ ಒಗ್ಗರಣೆ ಮಾಡಿ. 
  6. ಕರಿಬೇವು ಮತ್ತು ಕತ್ತರಿಸಿದ ಬೆಳ್ಳುಳಿ ಹಾಕಿ ಹುರಿಯಿರಿ. 
  7. ಇಂಗನ್ನು ಸೇರಿಸಿ. 
  8. ಕೊತ್ತಂಬರಿ ಸೊಪ್ಪು ಹಾಕಿ ಸ್ಟವ್ ಆಫ್ ಮಾಡಿ. 
  9. ಮಸೆದಿಟ್ಟ ಮಾವಿನಕಾಯಿ ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ. 
  10. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕಲಸಿ. 
  11. ಬಿಸಿ ಅನ್ನದೊಂದಿಗೆ ಸವಿದು ಆನಂದಿಸಿ. 

ಶನಿವಾರ, ಫೆಬ್ರವರಿ 18, 2023

Capsicum chutney recipe in Kannada | ದೊಣ್ಣೆ ಮೆಣಸಿನ ಚಟ್ನಿ ಮಾಡುವ ವಿಧಾನ

 

Capsicum chutney recipe in Kannada

Capsicum chutney recipe in Kannada | ದೊಣ್ಣೆ ಮೆಣಸಿನ ಚಟ್ನಿ ಮಾಡುವ ವಿಧಾನ

ದೊಣ್ಣೆ ಮೆಣಸಿನ ಚಟ್ನಿ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ದೊಣ್ಣೆ ಮೆಣಸಿನಕಾಯಿ
  2. 2 ಹಸಿಮೆಣಸಿನಕಾಯಿ
  3. ಹುಣಿಸೇಹಣ್ಣು ರುಚಿಗೆ ತಕ್ಕಷ್ಟು
  4. 1 ಟೀಸ್ಪೂನ್ ಅಡುಗೆ ಎಣ್ಣೆ
  5. ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಟೀಸ್ಪೂನ್ ಸಾಸಿವೆ
  2. 1 ಒಣ ಮೆಣಸಿನಕಾಯಿ
  3. ದೊಡ್ಡ ಚಿಟಿಕೆ ಇಂಗು
  4. ಸ್ವಲ್ಪ ಕರಿಬೇವು
  5. 1 ಟೇಬಲ್ ಚಮಚ ಅಡುಗೆ ಎಣ್ಣೆ

ದೊಣ್ಣೆ ಮೆಣಸಿನ ಚಟ್ನಿ ಮಾಡುವ ವಿಧಾನ:

  1. ದೊಣ್ಣೆ ಮೆಣಸು ಮತ್ತು ಹಸಿ ಮೆಣಸಿನಕಾಯಿಯನ್ನುಕತ್ತರಿಸಿ. 
  2. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಕತ್ತರಿಸಿದ ದೊಣ್ಣೆ ಮೆಣಸು ಮತ್ತು ಹಸಿ ಮೆಣಸಿನಕಾಯಿಯನ್ನು ಹುರಿಯಿರಿ.
  3. ಬಿಸಿ ಆರಿದ ಮೇಲೆ ಮಿಕ್ಸಿ ಜಾರಿನಲ್ಲಿ ತೆಗೆದುಕೊಂಡು, ಉಪ್ಪು ಮತ್ತು ಹುಳಿ ಸೇರಿಸಿ. 
  4. ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣಗೆ ಹುರಿಯಿರಿ. 
  5. ನಂತರ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ, ಒಣಮೆಣಸಿನಕಾಯಿ ಹಾಕಿ ಒಗ್ಗರಣೆ ಮಾಡಿ. 
  6. ಸಾಸಿವೆ ಸಿಡಿದ ಮೇಲೆ ಇಂಗು ಮತ್ತು ಕರಿಬೇವು ಸೇರಿಸಿ. 
  7. ಜೊತೆಯಲ್ಲಿ ಅರೆದ ಮಿಶ್ರಣ ಸೇರಿಸಿ, ಒಂದು ಕುದಿ ಬರಿಸಿ. 
  8. ಅನ್ನ, ದೋಸೆ ಅಥವಾ ರೊಟ್ಟಿಯೊಂದಿಗೆ ಬಡಿಸಿ.

ಶುಕ್ರವಾರ, ಫೆಬ್ರವರಿ 3, 2023

Southekai mosaru palya recipe in kannada | ಸೌತೆಕಾಯಿ ಮೊಸರು ಪಲ್ಯ ಮಾಡುವ ವಿಧಾನ

 

Southekai mosaru palya in Kannada

Southekai mosaru palya recipe in kannada | ಸೌತೆಕಾಯಿ ಮೊಸರು ಪಲ್ಯ ಮಾಡುವ ವಿಧಾನ

ಸೌತೆಕಾಯಿ ಮೊಸರು ಪಲ್ಯ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಮಧ್ಯಮ ಗಾತ್ರದ ಸೌತೆಕಾಯಿ 
  2. 1/2 ಕಪ್ ಮೊಸರು
  3. 1 ಈರುಳ್ಳಿ
  4. 1 - 2 ಹಸಿ ಮೆಣಸಿನಕಾಯಿ
  5. 1 ಟೇಬಲ್ ಚಮಚ ಕರಿಬೇವು
  6. ದೊಡ್ಡ ಚಿಟಿಕೆ ಇಂಗು 
  7. ದೊಡ್ಡ ಚಿಟಿಕೆ ಅರಿಶಿನ
  8. ಉಪ್ಪು ನಿಮ್ಮ ರುಚಿಗೆ ತಕ್ಕಷ್ಟು 

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಚಮಚ ಸಾಸಿವೆ
  2. 1/2 ಚಮಚ ಜೀರಿಗೆ
  3. 1 ಕೆಂಪು ಮೆಣಸಿನಕಾಯಿ
  4. 1 ಟೀಸ್ಪೂನ್ ಉದ್ದಿನಬೇಳೆ
  5. 1 ಟೇಬಲ್ ಚಮಚ ಅಡುಗೆ ಎಣ್ಣೆ

ಸೌತೆಕಾಯಿ ಮೊಸರು ಪಲ್ಯ ಮಾಡುವ ವಿಧಾನ:

  1. ಸೌತೆಕಾಯಿಯನ್ನು ಸಣ್ಣಗೆ ಕತ್ತರಿಸಿಕೊಳ್ಳಿ.
  2. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ.
  3. ಸಾಸಿವೆ, ಜೀರಿಗೆ ಮತ್ತು ಉದ್ದಿನಬೇಳೆ ಹಾಕಿ ಒಗ್ಗರಣೆ ಮಾಡಿ. 
  4. ಚೂರು ಮಾಡಿದ ಒಣಮೆಣಸಿನಕಾಯಿಯನ್ನು ಸೇರಿಸಿ. 
  5. ಕತ್ತರಿಸಿದ ಈರುಳ್ಳಿ, ಕರಿಬೇವು ಮತ್ತು ಹಸಿಮೆಣಸಿನಕಾಯಿ ಸೇರಿಸಿ. 
  6. ಈರುಳ್ಳಿ ಮೆತ್ತಗಾಗುವವರೆಗೆ ಹುರಿಯಿರಿ.
  7. ಕತ್ತರಿಸಿದ ಸೌತೆಕಾಯಿ ಸೇರಿಸಿ. 
  8. ಉಪ್ಪು, ಅರಿಶಿನ ಮತ್ತು ಇಂಗು ಸೇರಿಸಿ. 
  9. ಸೌತೆಕಾಯಿ ಸ್ವಲ್ಪ ಮೆತ್ತಗಾಗುವವರೆಗೆ ಹುರಿಯಿರಿ.
  10. ಸ್ಟವ್ ಆಫ್ ಮಾಡಿ ಬಿಸಿ ಕಡಿಮೆ ಆಗುವವರೆಗೆ ಬಿಡಿ. 
  11. ಕಡೆದ ಗಟ್ಟಿ ಮೊಸರು ಸೇರಿಸಿ ಕಲಸಿ.
  12. ಅನ್ನ, ರೊಟ್ಟಿ ಅಥವಾ ಚಪಾತಿಯೊಂದಿಗೆ ಬಡಿಸಿ.
Related Posts Plugin for WordPress, Blogger...