ಶುಕ್ರವಾರ, ಜನವರಿ 12, 2018

Shenga holige recipe in Kannada | ಶೇಂಗಾ ಹೋಳಿಗೆ ಮಾಡುವ ವಿಧಾನ

Shenga holige recipe in Kannada

Shenga holige recipe in Kannada | ಶೇಂಗಾ ಹೋಳಿಗೆ ಮಾಡುವ ವಿಧಾನ 

ಕಣಕಕ್ಕೆ ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂಎಲ್ )

  1. 2 ಕಪ್ ಗೋಧಿ ಹಿಟ್ಟು 
  2. ಉಪ್ಪು ರುಚಿಗೆ ತಕ್ಕಷ್ಟು
  3. 6 ಟೇಬಲ್ ಚಮಚ ಅಡುಗೆ ಎಣ್ಣೆ

ಹೂರಣಕ್ಕೆ ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂಎಲ್ )

  1. 1 ಕಪ್ ಶೇಂಗಾ
  2. 3/4 ಕಪ್ ಪುಡಿಮಾಡಿದ ಬೆಲ್ಲ
  3. 1/4 ಕಪ್ ಎಳ್ಳು 
  4. 2 ಚಮಚ ಗಸಗಸೆ
  5. 2 ಏಲಕ್ಕಿ

ಶೇಂಗಾ ಹೋಳಿಗೆ ಅಥವಾ ಒಬ್ಬಟ್ಟು ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಗೋಧಿ ಹಿಟ್ಟು ಮತ್ತು ಉಪ್ಪು ಹಾಕಿ. 
  2. ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಚಪಾತಿ ಹಿಟ್ಟಿಗಿಂತ ಸ್ವಲ್ಪ ಮೃದುವಾದ ಹಿಟ್ಟನ್ನು ಕಲಸಿ. 
  3. ಮೇಲಿನಿಂದ ಎಣ್ಣೆ ಸುರಿದು, ಮುಚ್ಚಳ ಮುಚ್ಚಿ, 30 ನಿಮಿಷ ಪಕ್ಕಕ್ಕಿಡಿ. 
  4. ಈಗ ಹೂರಣ ತಯಾರಿಸಲು, ಮೊದಲಿಗೆ ಶೇಂಗಾವನ್ನು ಕಂದು ಬಣ್ಣ ಬರುವವರೆಗೆ ಮಧ್ಯಮ ಉರಿಯಲ್ಲಿ ಹುರಿಯಿರಿ. 
  5. ಎಳ್ಳನ್ನು ಕಂದು ಬಣ್ಣ ಬರುವವರೆಗೆ ಅಥವಾ ಚಟಪಟ ಅನ್ನುವವರೆಗೆ ಹುರಿಯಿರಿ. 
  6. ಹುರಿದ ಶೇಂಗಾ, ಎಳ್ಳು, ಗಸಗಸೆ ಮತ್ತು ಏಲಕ್ಕಿಯನ್ನು ಪುಡಿ ಮಾಡಿ. 
  7.  ನಂತ್ರ ಪುಡಿಮಾಡಿದ ಬೆಲ್ಲವನ್ನು ಸೇರಿಸಿ ಅರೆಯಿರಿ. ನೀರು ಹಾಕಬೇಡಿ. 
  8. ಅರೆದ ಮಿಶ್ರಣಕ್ಕೆ ಒಂದೆರಡು ಚಮಚ ನೀರು ಅಥವಾ ಹಾಲು ಹಾಕಿ ಕಲಸಿ.  
  9. ನಂತರ ಸಣ್ಣ ನಿಂಬೆ ಹಣ್ಣಿನ ಗಾತ್ರದ ಉಂಡೆ ಮಾಡಿಟ್ಟುಕೊಳ್ಳಿ. ಉಂಡೆ ಮೃದುವಾಗಿರಬೇಕು. 
  10. ನಂತರ ಕೈಗೆ ಹಿಟ್ಟು ಮುಟ್ಟಿಸಿಕೊಂಡು ಒಂದು ನಿಂಬೆಗಾತ್ರದ ಹಿಟ್ಟು ತೆಗೆದುಕೊಂಡು ಬಟ್ಟಲಿನಾಕಾರ ಮಾಡಿ.  ಹೂರಣಇಟ್ಟು, ಜಾಗ್ರತೆಯಿಂದ ಹೂರಣವನ್ನು ಒಳಗೆ ಸೇರಿಸಿ.
  11. ಬೇಕಾದಷ್ಟು ಹಿಟ್ಟು ಉದುರಿಸಿ, ತೆಳುವಾಗಿ ಲಟ್ಟಿಸಿ.
  12. ಕಾದ ಹಂಚಿನ ಮೇಲೆ ಹಾಕಿ ಎರಡು ಬದಿ ಕಾಯಿಸಿ. ರುಚಿ ರುಚಿಯಾದ ಶೇಂಗಾ ಹೋಳಿಗೆಯನ್ನು ತುಪ್ಪದೊಂದಿಗೆ ಸವಿಯಿರಿ.

ಗುರುವಾರ, ಜನವರಿ 11, 2018

Ellu pajji recipe in Kannada | ಎಳ್ಳು ಪಜ್ಜಿ ಅಥವಾ ಎಳ್ಳು ಚಟ್ನಿ ಮಾಡುವ ವಿಧಾನ

Ellu pajji recipe in Kannada

Ellu pajji recipe in Kannada |ಎಳ್ಳು ಪಜ್ಜಿ ಅಥವಾ ಎಳ್ಳು ಚಟ್ನಿ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/4 ಕಪ್ ಎಳ್ಳು
  2. 1/2 ಕಪ್ ತೆಂಗಿನ ತುರಿ
  3. 2 - 3 ಹಸಿರು ಮೆಣಸಿನಕಾಯಿ
  4. ಸಣ್ಣ ಗೋಲಿ ಗಾತ್ರದ ಹುಣಿಸೇಹಣ್ಣು 
  5. ದೊಡ್ಡ ಗೋಲಿಗಾತ್ರದ ಬೆಲ್ಲ (ಬೇಕಾದಲ್ಲಿ)
  6. ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಟೀಸ್ಪೂನ್ ಸಾಸಿವೆ
  2. 4 ಕರಿಬೇವಿನ ಎಲೆ 
  3. 1 ಈರುಳ್ಳಿ ಸಣ್ಣಗೆ ಹೆಚ್ಚಿದ್ದು
  4. 2 ಟೇಬಲ್ ಸ್ಪೂನ್ ಅಡುಗೆ ಎಣ್ಣೆ

ಎಳ್ಳು ಪಜ್ಜಿ ಅಥವಾ ಎಳ್ಳು ಚಟ್ನಿ ಮಾಡುವ ವಿಧಾನ:

  1. ಒಂದು ಬಾಣಲೆ ಬಿಸಿ ಮಾಡಿ ಎಳ್ಳನ್ನು ಚಟಪಟ ಅನ್ನುವವರೆಗೆ ಮಧ್ಯಮ ಉರಿಯಲ್ಲಿ ಹುರಿಯಿರಿ.
  2. ನಂತರ ಅರೆಯಲು ಬೇಕಾಗುವ ಪದಾರ್ಥಗಳಾದ ಹುರಿದ  ಎಳ್ಳು, ತೆಂಗಿನತುರಿ, ಉಪ್ಪು, ಬೆಲ್ಲ, ಹುಣಿಸೇಹಣ್ಣು ಮತ್ತು ಹಸಿರುಮೆಣಸಿನಕಾಯಿಯನ್ನು ತೆಗೆದುಕೊಳ್ಳಿ. 
  3. ಅಗತ್ಯವಿದ್ದಷ್ಟು ನೀರು ಸೇರಿಸಿ ತರಿತರಿಯಾಗಿ ಅರೆದು ಪಾತ್ರೆಗೆ ಹಾಕಿ. 
  4. ನಂತ್ರ ಬಾಣಲೆಯಲ್ಲಿ ಎರಡು ಟೇಬಲ್ ಚಮಚ ಎಣ್ಣೆ ಬಿಸಿ ಮಾಡಿ, ಸಾಸಿವೆ ಮತ್ತು ಕರಿಬೇವಿನ ಒಗ್ಗರಣೆ ಮಾಡಿ. 
  5. ಅದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಕೆಂಪಾಗುವವರೆಗೆ ಹುರಿಯಿರಿ. 
  6. ಹುರಿದ ಈರುಳ್ಳಿಯನ್ನು ಅರೆದಿಟ್ಟ ಚಟ್ನಿಗೆ ಹಾಕಿ. ಅನ್ನ, ಇಡ್ಲಿ, ರೊಟ್ಟಿ ಅಥವಾ ದೋಸೆಯೊಂದಿಗೆ ಬಡಿಸಿ.

ಮಂಗಳವಾರ, ಜನವರಿ 9, 2018

Badam halwa recipe in Kannada | ಬಾದಾಮ್ ಹಲ್ವಾ ಮಾಡುವ ವಿಧಾನ

Badam halwa recipe in Kannada

Badam halwa recipe in Kannada | ಬಾದಾಮ್ ಹಲ್ವಾ ಮಾಡುವ ವಿಧಾನ

ಬಾದಾಮ್ ಹಲ್ವಾ ವಿಡಿಯೋ 

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಬಾದಾಮಿ
  2. 1/2 ಕಪ್ ಹಾಲು
  3. 1/2 ಕಪ್ ಸಕ್ಕರೆ 
  4. 2 ಟೇಬಲ್ ಚಮಚ ತುಪ್ಪ
  5. ಚಿಟಿಕೆ ಕೇಸರಿ (ಬೇಕಾದಲ್ಲಿ)
  6. ಚಿಟಿಕೆ ಏಲಕ್ಕಿ ಪುಡಿ

ಬಾದಾಮ್ ಹಲ್ವಾ ಮಾಡುವ ವಿಧಾನ:

  1. ಎರಡು ಟೇಬಲ್ ಚಮಚ ಹಾಲಿನಲ್ಲಿ ಕೇಸರಿಯನ್ನು ನೆನೆಸಿಡಿ. 
  2. ಒಂದು ಪಾತ್ರೆಯಲ್ಲಿ ನೀರು ಕುದಿಸಿ ಅದಕ್ಕೆ ಬಾದಾಮಿ ಹಾಕಿ ಎರಡು ನಿಮಿಷದ ನಂತ್ರ ಸ್ಟವ್ ಆಫ್ ಮಾಡಿ. 
  3. ಬಿಸಿ ಆರಿದ ಮೇಲೆ ಬಾದಾಮಿ ಸಿಪ್ಪೆ ತೆಗೆದು ಒಂದು ಘಂಟೆ ನೀರಿನಲ್ಲಿ ನೆನೆಸಿಡಿ. 
  4. ನೆನೆಸಿದ ಬಾದಾಮಿಯನ್ನು ಹಾಲು ಹಾಕಿ ನುಣ್ಣನೆ ಅರೆಯಿರಿ. 
  5. ಒಂದು ನಾನ್-ಸ್ಟಿಕ್ ಬಾಣಲೆಯಲ್ಲಿ ತುಪ್ಪ ಮತ್ತು ಅರೆದ ಮಿಶ್ರಣ ಹಾಕಿ ಸ್ಟೋವ್ ಮೇಲಿಟ್ಟು ಮಗುಚಲು ಪ್ರಾರಂಭಿಸಿ.  
  6. ಸಕ್ಕರೆಯನ್ನು ಸೇರಿಸಿ ಮಗುಚುವುದನ್ನು ಮುಂದುವರೆಸಿ. 
  7. ಕೇಸರಿ ನೆನೆಸಿದ ಹಾಲನ್ನು ಹಾಕಿ ಮಧ್ಯಮ ಉರಿಯಲ್ಲಿ ಮಗುಚುವುದನ್ನು ಮುಂದುವರೆಸಿ. 
  8. ಸ್ವಲ್ಪ ಗಟ್ಟಿಯಾದಾಗ ಎರಡು ಟೇಬಲ್ ಚಮಚ ತುಪ್ಪ ಸೆರಿಸ್ ಮಗುಚುವುದನ್ನು ಮುಂದುವರೆಸಿ. 
  9. ಸ್ವಲ್ಪ ಸಮಯದ ನಂತರ ತಳ ಬಿಡಲು ಪ್ರಾರಂಭಿಸಿದಾಗ, ಏಲಕ್ಕಿ ಪುಡಿ ಸೇರಿಸಿ. 
  10. ಚೆನ್ನಾಗಿ ಮಗುಚಿ ಸ್ಟವ್ ಆಫ್ ಮಾಡಿ. 
  11. ಬಾದಾಮ್ ಹಲ್ವಾ ಸವಿಯಲು ಸಿದ್ದ. ಬಿಸಿ ಅಥವಾ ತಣ್ಣಗೆ ಬಡಿಸಿ.

Related Posts Plugin for WordPress, Blogger...