ಭಾನುವಾರ, ಜನವರಿ 7, 2018

Avarekalu uppittu recipe in kannada | ಅವರೇಕಾಳು ಉಪ್ಪಿಟ್ಟು ಮಾಡುವ ವಿಧಾನ

Avarekalu uppittu recipe in kannada

Avarekalu uppittu recipe in kannada | ಅವರೇಕಾಳು ಉಪ್ಪಿಟ್ಟು ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 1/2 ಕಪ್ ಉಪ್ಪಿಟ್ಟು ರವೆ
  2. 1.25 ಕಪ್ ನೀರು
  3. 1/2 ಕಪ್ ಅವರೇಕಾಳು
  4. 1/2 ಟೀಸ್ಪೂನ್ ಸಾಸಿವೆ
  5. 1 ಟೀಸ್ಪೂನ್ ಉದ್ದಿನಬೇಳೆ
  6. 1 ಟೀಸ್ಪೂನ್ ಕಡ್ಲೆಬೇಳೆ
  7. 1 ಈರುಳ್ಳಿ
  8. 1 ಟೊಮ್ಯಾಟೋ 
  9. 2-3 ಹಸಿರು ಮೆಣಸಿನಕಾಯಿ
  10. 4-5 ಕರಿ ಬೇವಿನ ಎಲೆ
  11. 1 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಶುಂಠಿ
  12. 1/4 ಟೀಸ್ಪೂನ್ ಅರಶಿನ ಪುಡಿ
  13. 6-8 ಟೀಸ್ಪೂನ್ ಅಡುಗೆ ಎಣ್ಣೆ
  14. 1 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
  15. 2 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
  16. 1/2 ಕಪ್ ತೆಂಗಿನತುರಿ

ಅವರೇಕಾಳು ಉಪ್ಪಿಟ್ಟು ಮಾಡುವ ವಿಧಾನ:

  1. ಅವರೆಕಾಳನ್ನು ಸುಲಿದು, ಬೇಯಿಸಿಟ್ಟುಕೊಳ್ಳಿ. 
  2. ರವೆಯನ್ನು ಒಂದು ಚಮಚ ತುಪ್ಪ ಅಥವಾ ಎಣ್ಣೆಯೊಂದಿಗೆ ಹುರಿದಿಟ್ಟುಕೊಳ್ಳಿ. 
  3. ಈರುಳ್ಳಿ, ಟೊಮ್ಯಾಟೋ, ಶುಂಠಿ, ಕೊತ್ತಂಬರಿ ಸೊಪ್ಪು ಮತ್ತು ಹಸಿರು ಮೆಣಸಿನಕಾಯಿ ಕತ್ತರಿಸಿಟ್ಟು ಕೊಳ್ಳಿ. ಬೇರೆ ಪದಾರ್ಥಗಳನ್ನು ಸಿದ್ಧ ಮಾಡಿಟ್ಟು ಕೊಳ್ಳಿ.
  4. ಒಂದು ಬಾಣಲೆ ಬಿಸಿಮಾಡಿ, ಎಣ್ಣೆ, ಸಾಸಿವೆ, ಉದ್ದಿನಬೇಳೆ ಮತ್ತು ಕಡ್ಲೆಬೇಳೆ ಹಾಕಿ. 
  5. ಸಾಸಿವೆ ಸಿಡಿದ ಕೂಡಲೇ ಕರಿಬೇವು, ಕತ್ತರಿಸಿದ ಶುಂಠಿ, ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿ ಸೇರಿಸಿ. ಈರುಳ್ಳಿ ಮೆತ್ತಗಾಗುವವರೆಗೆ ಮಧ್ಯಮ ಉರಿಯಲ್ಲಿ ಹುರಿಯಿರಿ.
  6. ಈರುಳ್ಳಿ ಮೆತ್ತಗಾದ ಮೇಲೆ ಟೊಮ್ಯಾಟೋ ಹಾಕಿ. 
  7. ಉಪ್ಪು ಮತ್ತು ಅರಶಿನ ಪುಡಿ ಸೇರಿಸಿ. ಟೊಮ್ಯಾಟೋ ಮೆತ್ತಗಾಗುವವರೆಗೆ ಹುರಿಯಿರಿ.
  8. ಬೇಯಿಸಿದ ಅವರೆಕಾಳನ್ನು ಸೇರಿಸಿ. 
  9. ನೀರು ಹಾಕಿ ಕುದಿಸಿ. ನೀರು ಕುದಿಯಲು ಪ್ರಾರಂಭವಾದ ಕೂಡಲೇ ಹುರಿದಿಟ್ಟ ರವೆಯನ್ನು ನಿಧಾನವಾಗಿ ಹಾಕುತ್ತಾ ಮಗುಚಿ. 
  10. ಸ್ವಲ್ಪ ಗಟ್ಟಿಯಾದ ಮೇಲೆ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಒಂದೆರಡು ನಿಮಿಷ ಬೇಯಲು ಬಿಡಿ. 
  11. ನಂತ್ರ ತೆಂಗಿನತುರಿ, ಕೊತ್ತಂಬರಿ ಸೊಪ್ಪು ಸೇರಿಸಿ ಮಗುಚಿ. ಸ್ಟವ್ ಆಫ್ ಮಾಡಿ, ಬಡಿಸಿ.


ಗುರುವಾರ, ಜನವರಿ 4, 2018

Huruli chutney recipe in Kannada | ಹುರುಳಿ ಚಟ್ನಿ ಮಾಡುವ ವಿಧಾನ

Huruli chutney recipe in Kannada

Huruli chutney recipe in Kannada | ಹುರುಳಿ ಚಟ್ನಿ ಮಾಡುವ ವಿಧಾನ

ಹುರುಳಿ ಚಟ್ನಿ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/4 ಕಪ್ ಹುರುಳಿಕಾಳು
  2. 1/2 ಕಪ್ ತೆಂಗಿನ ತುರಿ
  3. 2 - 3 ಒಣ ಮೆಣಸಿನಕಾಯಿ
  4. 2 ಟೀಸ್ಪೂನ್ ಉದ್ದಿನ ಬೇಳೆ (ಬೇಕಾದಲ್ಲಿ)
  5. 2 ಟೀಸ್ಪೂನ್ ಕಡ್ಲೆ ಬೇಳೆ (ಬೇಕಾದಲ್ಲಿ)
  6. 1/4 ಟೀಸ್ಪೂನ್ ಕೊತ್ತಂಬರಿ ಬೀಜ
  7. ಸಣ್ಣ ಗೋಲಿ ಗಾತ್ರದ ಹುಣಿಸೇಹಣ್ಣು 
  8. 2 ಬೇಳೆ ಬೆಳ್ಳುಳ್ಳಿ
  9. 1/2 ಟೀಸ್ಪೂನ್ ಅಡುಗೆ ಎಣ್ಣೆ
  10. ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಟೀಸ್ಪೂನ್ ಸಾಸಿವೆ
  2. 4 ಕರಿಬೇವಿನ ಎಲೆ 
  3. ಚಿಟಿಕೆ ಇಂಗು
  4. 2 ಟೇಬಲ್ ಸ್ಪೂನ್ ಅಡುಗೆ ಎಣ್ಣೆ

ಹುರುಳಿ ಚಟ್ನಿ ಮಾಡುವ ವಿಧಾನ:

  1. ಒಂದು ಬಾಣಲೆಗೆ ಎಣ್ಣೆ, ಒಣ ಮೆಣಸಿನಕಾಯಿ ಮತ್ತು ಕೊತ್ತಂಬರಿ ಬೀಜ ಹಾಕಿ ಹುರಿಯಿರಿ. ಬೇಕಾದಲ್ಲಿ ಕಡ್ಲೆಬೇಳೆ ಮತ್ತು ಉದ್ದಿನಬೇಳೆಯನ್ನು ಸೇರಿಸಿ. ಬೇಳೆ ಸೇರಿಸಿದಲ್ಲಿ ಹೊಂಬಣ್ಣ ಬರುವವರೆಗೆ ಹುರಿಯಿರಿ.
  2. ನಂತರ ಅದೇ ಬಾಣಲೆಯಲ್ಲಿ ಹುರುಳಿಯನ್ನು ಚಟಪಟ ಅನ್ನುವವರೆಗೆ ಹುರಿಯಿರಿ. ಗಮನಿಸಿ ಜಾಸ್ತಿ ಹುರಿಯಬೇಡಿ. ಜಾಸ್ತಿ ಹುರಿದಲ್ಲಿ ಚಟ್ನಿ ಕಹಿಯಾಗಬಹುದು. 
  3. ನಂತರ ತೆಂಗಿನ ತುರಿ, ಹುರಿದ ಪದಾರ್ಥಗಳು, ಉಪ್ಪು ಮತ್ತು ಹುಣಿಸೇಹಣ್ಣು ಹಾಕಿ. ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ. 
  4. ಕೊನೆಯಲ್ಲಿ ಎರಡು ಬೇಳೆ ಬೆಳ್ಳುಳ್ಳಿ ಹಾಕಿ ಅರೆಯಿರಿ. 
  5. ಇಂಗು, ಕರಿಬೇವು ಮತ್ತು ಸಾಸಿವೆಯ ಒಗ್ಗರಣೆ ಮಾಡಿ. ಅನ್ನ, ಇಡ್ಲಿ ಅಥವಾ ದೋಸೆಯೊಂದಿಗೆ ಬಡಿಸಿ.

ಬುಧವಾರ, ಜನವರಿ 3, 2018

Hunasekayi thokku saaru recipe in Kannada | ಹುಣಸೆಕಾಯಿ ತೊಕ್ಕು ಸಾರು ಮಾಡುವ ವಿಧಾನ

Hunasekayi thokku saaru recipe in Kannada

Hunasekayi thokku saaru recipe in Kannada | ಹುಣಸೆಕಾಯಿ ತೊಕ್ಕು ಸಾರು ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ಎಂ ಎಲ್)

  1. 1 ಟೀಸ್ಪೂನ್ ಸಾಸಿವೆ
  2. 1 ಟೀಸ್ಪೂನ್ ಜೀರಿಗೆ
  3. 5 - 6 ಬೆಳ್ಳುಳ್ಳಿ, ಜಜ್ಜಿದ್ದು
  4. ಇಂಗು ಒಂದು ದೊಡ್ಡ ಚಿಟಿಕೆ
  5.  5 - 6 ಕರಿಬೇವಿನ ಎಲೆ
  6. 4 ಟೀಸ್ಪೂನ್ ಅಡುಗೆ ಎಣ್ಣೆ ಅಥವಾ ತುಪ್ಪ 
  7. 1 ದೊಡ್ಡ ಟೊಮೆಟೋ 
  8. ಅರಿಶಿನ ಪುಡಿ ಒಂದು ದೊಡ್ಡ ಚಿಟಿಕೆ 
  9. 2 ಟೇಬಲ್ ಸ್ಪೂನ್ ಹುಣಸೆಕಾಯಿ ತೊಕ್ಕು  
  10. 1 ನೆಲ್ಲಿಕಾಯಿ ಗಾತ್ರದ ಬೆಲ್ಲ (ಅಥವಾ ನಿಮ್ಮ ರುಚಿಗೆ ಅನುಗುಣವಾಗಿ)
  11. 1/2 ಟೀಸ್ಪೂನ್ ಕಾಳು ಮೆಣಸು, ಪುಡಿಮಾಡಿದ್ದು 
  12. 1 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಂತೆ) 
  13. 1 ಟೀ ಸ್ಪೂನ್ ಸಣ್ಣದಾಗಿ ಕೊಚ್ಚಿದ ಕೊತ್ತಂಬರಿ ಸೊಪ್ಪು


ಹುಣಸೆಕಾಯಿ ತೊಕ್ಕು ಸಾರು ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ ಮತ್ತು ಜೀರಿಗೆ ಹಾಕಿ. 
  2. ಸಾಸಿವೆ ಸಿಡಿದ ಕೂಡಲೇ ಜಜ್ಜಿದ ಬೆಳ್ಳುಳ್ಳಿ, ಇಂಗು ಮತ್ತು ಕರಿಬೇವಿನ ಎಲೆ ಸೇರಿಸಿ. ಬೆಳ್ಳುಳ್ಳಿ ಸ್ವಲ್ಪ ಕಂದು ಬಣ್ಣಕ್ಕೆ ಬರುವವರೆಗೆ ಹುರಿಯಿರಿ. 
  3. ನಂತ್ರ ಅದಕ್ಕೆ ಸಣ್ಣಗೆ ಕತ್ತರಿಸಿದ ಟೊಮೇಟೊ ಮತ್ತು ಅರಿಶಿನ ಪುಡಿ ಹಾಕಿ. ಟೊಮೇಟೊ ಮೆತ್ತಗಾಗುವವರೆಗೆ ಬೇಯಿಸಿ. 
  4. ಅದಕ್ಕೆ ಹುಣಸೆ ತೊಕ್ಕು ಹಾಕಿ.
  5. ಅಗತ್ಯವಿದ್ದಷ್ಟು ನೀರು ಸೇರಿಸಿ. 
  6. ಉಪ್ಪು ಮತ್ತು ಬೆಲ್ಲ ಸೇರಿಸಿ. 
  7. ಜಜ್ಜಿದ ಕಾಳುಮೆಣಸು ಸೇರಿಸಿ ಕುದಿಸಿ. 
  8. ಕೊತ್ತಂಬರಿ ಸೊಪ್ಪು ಉದುರಿಸಿ, ಸ್ಟವ್ ಆಫ್ ಮಾಡಿ. 
  9. ಬಿಸಿಯಾದ ಅನ್ನದೊಂದಿಗೆ ಬಡಿಸಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

Related Posts Plugin for WordPress, Blogger...