ಮಂಗಳವಾರ, ಜೂನ್ 6, 2017

Sihi kumbalakai palya recipe in Kannada | ಸಿಹಿ ಕುಂಬಳಕಾಯಿ ಅಥವಾ ಚೀನಿಕಾಯಿ ಪಲ್ಯ ಮಾಡುವ ವಿಧಾನ

Sihi kumbalakai palya recipe in Kannada

Sihi kumbalakai palya recipe in Kannada | ಸಿಹಿ ಕುಂಬಳಕಾಯಿ ಅಥವಾ ಚೀನಿಕಾಯಿ ಪಲ್ಯ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕೆಜಿ ಸಿಹಿ ಕುಂಬಳಕಾಯಿ ಅಥವಾ ಚೀನಿಕಾಯಿ
  2. 1/2 ಟೀಸ್ಪೂನ್ ಸಾಸಿವೆ
  3. 1 ಟೀಸ್ಪೂನ್ ಉದ್ದಿನ ಬೇಳೆ
  4. 1 ಟೀಸ್ಪೂನ್ ಕಡ್ಲೆ ಬೇಳೆ
  5. 4 - 6 ಟೀಸ್ಪೂನ್ ಅಡುಗೆ ಎಣ್ಣೆ
  6. 1 ಒಣ ಮೆಣಸಿನಕಾಯಿ (ಬೇಕಾದಲ್ಲಿ)
  7. 1 ದೊಡ್ಡ ಚಿಟಿಕೆ ಅರಿಶಿನ ಪುಡಿ
  8. 1 ದೊಡ್ಡ ಚಿಟಿಕೆ ಇಂಗು
  9. 4 - 5 ಕರಿಬೇವಿನ ಎಲೆ
  10. ಸಣ್ಣ ನೆಲ್ಲಿಕಾಯಿ ಗಾತ್ರದ ಬೆಲ್ಲ
  11. ಸಣ್ಣ ಗೋಲಿಗಾತ್ರದ ಹುಣಿಸೇಹಣ್ಣು
  12. ಉಪ್ಪು ರುಚಿಗೆ ತಕ್ಕಷ್ಟು
  13. 2 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
  14. 1/4 ಕಪ್ ನೀರು

ಅರೆಯಲು ಬೇಕಾಗುವ ಪದಾರ್ಥಗಳು:

  1. 1/2 ಕಪ್ ತೆಂಗಿನ ತುರಿ
  2. 2 - 4 ಒಣ ಮೆಣಸಿನ ಕಾಯಿ
  3. 1/2 ಟೀಸ್ಪೂನ್ ಸಾಸಿವೆ

ಸಿಹಿ ಕುಂಬಳಕಾಯಿ ಪಲ್ಯ ಮಾಡುವ ವಿಧಾನ:

  1. ಸಿಹಿ ಕುಂಬಳಕಾಯಿಯನ್ನು ತೊಳೆದು, ಸಿಪ್ಪೆ ತೆಗೆದು,  ಕತ್ತರಿಸಿ.
  2. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ, ಉದ್ದಿನಬೇಳೆ ಮತ್ತು ಕಡ್ಲೆಬೇಳೆ ಹಾಕಿ. 
  3. ಸಾಸಿವೆ ಸಿಡಿದ ಕೂಡಲೇ ಅರಶಿನ, ಇಂಗು, ಒಣ ಮೆಣಸಿನಕಾಯಿ ಮತ್ತು ಕರಿಬೇವಿನ ಎಲೆ ಹಾಕಿ ಒಗ್ಗರಣೆ ತಯಾರಿಸಿಕೊಳ್ಳಿ. 
  4. ಅದಕ್ಕೆ ಕತ್ತರಿಸಿದ ಸಿಹಿ ಕುಂಬಳಕಾಯಿ ಹಾಕಿ. 
  5. ಉಪ್ಪು, ಹುಣಿಸೆರಸ ಮತ್ತು ಬೆಲ್ಲ ಹಾಕಿ ಮಗುಚಿ.
  6. 1/4 ಕಪ್ ನೀರು ಹಾಕಿ, ಮುಚ್ಚಳ ಮುಚ್ಚಿ ಮೆತ್ತಗಾಗುವವರೆಗೆ ಬೇಯಿಸಿ. 
  7. ಅದೇ ಸಮಯದಲ್ಲಿ ಒಂದು ಮಿಕ್ಸಿ ಜಾರ್ ನಲ್ಲಿ ತೆಂಗಿನ ತುರಿ, 1/4 ಚಮಚ ಸಾಸಿವೆ ಮತ್ತು ಒಣ ಮೆಣಸು ಹಾಕಿ, ನೀರು ಹಾಕದೆ ಪುಡಿ ಮಾಡಿ. 
  8. ಪುಡಿ ಮಾಡಿದ ಮಸಾಲೆಯನ್ನು ಬೇಯುತ್ತಿರುವ ಸಿಹಿ ಕುಂಬಳಕಾಯಿ ಅಥವಾ ಚೀನಿಕಾಯಿಗೆ ಹಾಕಿ. 
  9. ಚೆನ್ನಾಗಿ ಮಗುಚಿ, ಕೊತ್ತಂಬರಿ ಸೊಪ್ಪು ಉದುರಿಸಿ, ಸ್ಟೋವ್ ಆಫ್ ಮಾಡಿ. ಚಪಾತಿ ಅಥವಾ ಬಿಸಿ ಅನ್ನದೊಂದಿಗೆ ಬಡಿಸಿ.

ಸೋಮವಾರ, ಜೂನ್ 5, 2017

Karibevu chutney pudi recipe in Kannada | ಕರಿಬೇವು ಚಟ್ನಿ ಪುಡಿ ಮಾಡುವ ವಿಧಾನ

Karibevu chutney pudi recipe in Kannada

Karibevu chutney pudi recipe in Kannada | ಕರಿಬೇವು ಚಟ್ನಿ ಪುಡಿ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 10 - 20 ಒಣ ಮೆಣಸಿನಕಾಯಿ (ಮಧ್ಯಮ ಖಾರ)
  2. 2 ಹಿಡಿ ಅಥವಾ 40 ಎಸಳು ಕರಿಬೇವು 
  3. 1/2 ಕಪ್ ಕಡಲೆಬೇಳೆ 
  4. 1/3 ಕಪ್ ಉದ್ದಿನ ಬೇಳೆ 
  5. 1/2 ಕಪ್ ಒಣ ಕೊಬ್ಬರಿ ತುರಿದಿದ್ದು
  6. 2 ಟೀಸ್ಪೂನ್ ಕೊತ್ತಂಬರಿ ಬೀಜ
  7. 1/2 ಟೀಸ್ಪೂನ್ ಇಂಗು
  8. ಸಣ್ಣ ಲಿಂಬೆ ಹಣ್ಣಿನ ಗಾತ್ರದ ಹುಣಿಸೇಹಣ್ಣು (ನಾನು ವಾಟೆಹುಳಿ ಪುಡಿ ಉಪಯೋಗಿಸಿದ್ದೇನೆ)
  9. 2 ಟೀಸ್ಪೂನ್ ಅಡುಗೆ ಎಣ್ಣೆ

ಕರಿಬೇವು ಚಟ್ನಿ ಪುಡಿ ಮಾಡುವ ವಿಧಾನ:

  1. ಒಂದು ಬಾಣಲೆಯನ್ನು ಬಿಸಿ ಮಾಡಿ. ಒಂದು ಚಮಚ ಎಣ್ಣೆ ಹಾಕಿ. ಕರಿಬೇವನ್ನು ಗರಿಗರಿ ಯಾಗುವವರೆಗೆ ಹುರಿದು ತೆಗೆದಿಡಿ.
  2. ನಂತರ ಒಣ ಕೊಬ್ಬರಿ ಯನ್ನು ಹುರಿದು ತೆಗೆದಿಡಿ. 
  3. ಇನ್ನೊಂದು ಚಮಚ ಅಡುಗೆ ಎಣ್ಣೆ ಹಾಕಿ ಒಣ ಮೆಣಸಿನಕಾಯಿಗಳನ್ನು ಹುರಿಯಿರಿ.
  4. ನಂತರ ಕಡಲೆಬೇಳೆಯನ್ನು ಮಧ್ಯಮ ಉರಿಯಲ್ಲಿ ಸ್ವಲ್ಪ ಕಂದು ಬಣ್ಣ ಬರುವವರವರೆಗೆ ಹುರಿದು ತೆಗೆದಿಡಿ.
  5. ನಂತರ ಉದ್ದಿನ ಬೇಳೆಯನ್ನು ಮಧ್ಯಮ ಉರಿಯಲ್ಲಿ ಸ್ವಲ್ಪ ಕಂದು ಬಣ್ಣ ಬರುವವರವರೆಗೆ ಹುರಿದು ತೆಗೆದಿಡಿ.
  6. ಕೊನೆಯಲ್ಲಿ ಕೊತ್ತಂಬರಿ ಬೀಜ, ಇಂಗು ಮತ್ತು ಹುಣಿಸೆಹಣ್ಣಿನ ಚೂರುಗಳನ್ನು ಹಾಕಿ ಕೆಲವು ಸೆಕೆಂಡ್ಗಳ ಕಾಲ ಹುರಿಯಿರಿ. 
  7. ಹುರಿದ ಎಲ್ಲ ಪದಾರ್ಥಗಳು ತಣ್ಣಗೆ ಆದ ಮೇಲೆ ಮಿಕ್ಸಿ ಜಾರಿಗೆ ಹಾಕಿ ನುಣ್ಣನೆ ಪುಡಿ ಮಾಡಿ. ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ. 


ಶುಕ್ರವಾರ, ಜೂನ್ 2, 2017

Baale hoovina chutney recipe in kannada | ಬಾಳೆ ಹೂವಿನ ಚಟ್ನಿ ಮಾಡುವ ವಿಧಾನ

Baale hoovina chutney recipe in kannada

Baale hoovina chutney recipe in kannada | ಬಾಳೆ ಹೂವಿನ ಚಟ್ನಿ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಕತ್ತರಿಸಿದ ಬಾಳೆ ಹೂವು
  2. 1/2 ಕಪ್ ತೆಂಗಿನ ತುರಿ
  3. 2 - 4 ಒಣ ಮೆಣಸಿನಕಾಯಿ
  4. 1 ಟೀಸ್ಪೂನ್ ಕೊತ್ತಂಬರಿ ಬೀಜ
  5. ಒಂದು ಸಣ್ಣ ಗೋಲಿಗಾತ್ರದ ಹುಣಿಸೇಹಣ್ಣು
  6. ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಒಣ ಮೆಣಸಿನಕಾಯಿ (ಬೇಕಾದಲ್ಲಿ)
  2. 2 ಟೀಸ್ಪೂನ್ ಉದ್ದಿನ ಬೇಳೆ
  3. 1/2 ಟೀಸ್ಪೂನ್ ಸಾಸಿವೆ
  4. 1 ಟೀಸ್ಪೂನ್ ಅಡುಗೆ ಎಣ್ಣೆ

ಬಾಳೆ ಹೂವಿನ ಚಟ್ನಿ ಮಾಡುವ ವಿಧಾನ:

  1. ಬಾಳೆ ಹೂ ಅಥವಾ ಬಾಳೆ ಮೂತಿಯನ್ನು ತೊಳೆದು ಸಣ್ಣದಾಗಿ ಕೊಚ್ಚಿ.  ನೇಂದ್ರ ಅಥವಾ ಏಲಕ್ಕಿ ಬಾಳೆ ಹೂ ಆದಲ್ಲಿ ಉತ್ತಮ. ಬೇರೆ ಬಾಳೆ ಆದಲ್ಲಿ ಹೊರಗಿನ ಒಂದೆರಡು ಎಲೆಯನ್ನು ತೆಗೆದು ಹಾಕಿ. 
  2. ಒಂದು ಬಾಣಲೆಗೆ ಒಗ್ಗರಣೆಗೆ ಪಟ್ಟಿ ಮಾಡಿದ  ಪದಾರ್ಥಗಳನ್ನು (ಎಣ್ಣೆ, ಒಣ ಮೆಣಸು, ಸಾಸಿವೆ ಮತ್ತು ಉದ್ದಿನಬೇಳೆ) ಹಾಕಿ, ಉದ್ದಿನಬೇಳೆ ಹೊಂಬಣ್ಣ ಬರುವವರೆಗೆ ಹುರಿಯಿರಿ.
  3. ಒಂದು ಮಿಕ್ಸೀ ಜಾರಿಗೆ ತೆಂಗಿನ ತುರಿ, ಕೊಚ್ಚಿದ ಬಾಳೆ ಹೂ, ತೆಂಗಿನ ತುರಿ, ಒಣ ಮೆಣಸು, ಕೊತ್ತಂಬರಿ ಬೀಜ, ಉಪ್ಪು ಮತ್ತು ಹುಣಿಸೇಹಣ್ಣು ಹಾಕಿ. 
  4. ಅಗತ್ಯವಿದ್ದಷ್ಟು ನೀರು ಸೇರಿಸಿ  ಅರೆಯಿರಿ. 
  5. ಕೊನೆಯಲ್ಲಿ ತಯಾರಿಸಿದ ಒಗ್ಗರಣೆಯನ್ನು ಹಾಕಿ (ಹುರಿದ ಒಣಮೆಣಸಿನಕಾಯಿ, ಉದ್ದಿನ ಬೇಳೆ ಮತ್ತು ಸಾಸಿವೆ) ಒಂದೆರಡು ಸುತ್ತು ಅರೆದು ತೆಗೆಯಿರಿ.
Related Posts Plugin for WordPress, Blogger...