Kaju katli recipe in Kannada | ಗೋಡಂಬಿ ಬರ್ಫಿ ಮಾಡುವ ವಿಧಾನ
ಗೋಡಂಬಿ ಬರ್ಫಿ ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 120 ಎಂಎಲ್ )
- 1 ಕಪ್ ಗೋಡಂಬಿ
- 1/2 ಕಪ್ ಸಕ್ಕರೆ
- 1/4 ಕಪ್ ನೀರು
- 1 ಟೀಸ್ಪೂನ್ ತುಪ್ಪ
- 1 ಟೀಸ್ಪೂನ್ ರೋಸ್ ವಾಟರ್ ಅಥವಾ ಚಿಟಿಕೆ ಏಲಕ್ಕಿ ಪುಡಿ
ಗೋಡಂಬಿ ಬರ್ಫಿ ಮಾಡುವ ವಿಧಾನ:
- ಮಿಕ್ಸಿ ಜಾರಿನಲ್ಲಿ ಗೋಡಂಬಿ ತೆಗೆದುಕೊಂಡು ಸಣ್ಣ ರವೆಯಂತೆ ಪುಡಿ ಮಾಡಿಕೊಳ್ಳಿ. ಅಗತ್ಯವಿದ್ದಲ್ಲಿ ಜರಡಿ ಹಿಡಿಯಿರಿ.
- ಒಂದು ನಾನ್-ಸ್ಟಿಕ್ ಅಥವಾ ದಪ್ಪ ತಳದ ಬಾಣಲೆಯಲ್ಲಿ ಸಕ್ಕರೆ ಮತ್ತು ನೀರು ತೆಗೆದುಕೊಂಡು ಸ್ಟೋವ್ ಮೇಲಿಟ್ಟು ಮಗುಚಿ.
- ಸಕ್ಕರೆ ಕರಗಿ ಚೆನ್ನಾಗಿ ಕುದಿಯಲು ಶುರು ಆದಾಗ ಪುಡಿಮಾಡಿದ ಗೋಡಂಬಿ ಹಾಕಿ ಮಗುಚಲು ಪ್ರಾರಂಭಿಸಿ.
- ಗಂಟಿದ್ದರೆ ಪುಡಿ ಮಾಡುತ್ತಾ ಮಧ್ಯಮ ಉರಿಯಲ್ಲಿ ಮಗುಚುತ್ತಾ ಇರಿ.
- ಸ್ವಲ್ಪ ನಿಮಿಷದ ನಂತ್ರ ಅಂಚು ಬಿಡಲು ಪ್ರಾರಂಭ ಆಗುತ್ತದೆ. ಜೊತೆಗೆ ಮಿಶ್ರಣವು ದಪ್ಪ ಪೇಸ್ಟ್ ನ ಹದಕ್ಕೆ ಬರುತ್ತದೆ.
- ಆಗ ಒಂದು ಚಮಚ ತುಪ್ಪ ಹಾಕಿದ ಪ್ಲೇಟ್ ಅಥವಾ ಅಡುಗೆಮನೆ ಕಟ್ಟೆ ಅಥವಾ ಬಟರ್ ಶೀಟ್ ಮೇಲೆ ಮಿಶ್ರಣವನ್ನು ಸುರಿಯಿರಿ.
- ಸ್ವಲ್ಪ ಬಿಸಿ ಆರಿದ ಮೇಲೆ ಒಂದು ಚಮಚ ರೋಜ್ ವಾಟರ್ ಅಥವಾ ಚಿಟಿಕೆ ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ನಾದಿ.
- ಕೈ ಮತ್ತು ಲಟ್ಟಣಿಗೆ ಸಹಾಯದಿಂದ ದಪ್ಪ ಚಪಾತಿಯಂತೆ ಒತ್ತಿ.
- ನಂತರ ನಿಮಗೆ ಇಷ್ಟವಾದ ಆಕಾರಕ್ಕೆ ಕತ್ತರಿಸಿ.
- ರುಚಿಯಾದ ಗೋಡಂಬಿ ಬರ್ಫಿ ಸವಿಯಲು ಸಿದ್ದ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ