Kadlekai or shenga chat recipe in Kannada | ಕಡ್ಲೇಕಾಯಿ ಅಥವಾ ಶೇಂಗಾ ಚಾಟ್ ಮಾಡುವ ವಿಧಾನ
ಕಡ್ಲೇಕಾಯಿ ಅಥವಾ ಶೇಂಗಾ ಚಾಟ್ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ನೆಲಗಡಲೆ ಅಥವಾ ಕಡ್ಲೆಕಾಯಿ
- 1 ಸಣ್ಣದಾಗಿ ಹೆಚ್ಚಿದ ಈರುಳ್ಳಿ
- 1 ಸಣ್ಣದಾಗಿ ಹೆಚ್ಚಿದ ಟೊಮೆಟೊ
- 1 ತುರಿದ ಸಣ್ಣ ಗಾತ್ರದ ಕ್ಯಾರೆಟ್
- 2 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
- 1 ಸಣ್ಣದಾಗಿ ಹೆಚ್ಚಿದ ಹಸಿರು ಮೆಣಸಿನಕಾಯಿ
- 1/2 - 1 ಟೀಸ್ಪೂನ್ ಅಚ್ಚ ಖಾರದ ಪುಡಿ
- 1/2 ಟೀಸ್ಪೂನ್ ಚಾಟ್ ಮಸಾಲಾ
- 1/4 ಟೀಸ್ಪೂನ್ ಜೀರಿಗೆ ಪುಡಿ
- 1 - 2 ಟೀಸ್ಪೂನ್ ನಿಂಬೆರಸ
- ಉಪ್ಪು ರುಚಿಗೆ ತಕ್ಕಷ್ಟು
ಬೇಯಿಸಿದ ಕಡ್ಲೇಕಾಯಿ ಚಾಟ್ ಮಾಡುವ ವಿಧಾನ:
- ಒಂದು ಕುಕ್ಕರ್ ನಲ್ಲಿ ಶೇಂಗಾ ಅಥವಾ ಕಡ್ಲೆಕಾಯಿಯನ್ನು ತೆಗೆದುಕೊಳ್ಳಿ.
- ಸುಮಾರು ಒಂದೂವರೆ ಕಪ್ ನೀರು, ಒಂದು ಚಮಚ ಉಪ್ಪು ಮತ್ತು ಚಿಟಿಕೆ ಅರಿಶಿನ ಹಾಕಿ.
- 5 - 6 ವಿಷಲ್ ಮಾಡಿ ಮೆತ್ತಗೆ ಬೇಯಿಸಿಕೊಳ್ಳಿ.
- ಶೇಂಗಾ ಎರಡು ಘಂಟೆ ನೆನೆಸಿಟ್ಟರೆ ಬೇಗ ಬೇಯುತ್ತದೆ. ಇಲ್ಲವಾದಲ್ಲಿ ಸ್ವಲ್ಪ ಜಾಸ್ತಿ ಹೊತ್ತು ಬೇಯಿಸಬೇಕಾಗುತ್ತದೆ.
- ಮೆತ್ತಗೆ ಬೇಯಿಸಿದ ನಂತ್ರ ನೀರು ಬಸಿದು ಒಂದು ಬಟ್ಟಲಿನಲ್ಲಿ ತೆಗೆದುಕೊಳ್ಳಿ.
- ಹೆಚ್ಚಿದ ಈರುಳ್ಳಿ, ಹೆಚ್ಚಿದ ಟೊಮೆಟೊ ಮತ್ತು ತುರಿದ ಕ್ಯಾರೆಟ್ ಸೇರಿಸಿ.
- ಅದಕ್ಕೆ ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ ಮತ್ತು ಅಚ್ಚಖಾರದ ಪುಡಿಯನ್ನು ನಿಮ್ಮ ಖಾರಕ್ಕೆ ತಕ್ಕಂತೆ ತಕ್ಕಂತೆ ಸೇರಿಸಿ.
- ಆಮೇಲೆ ಚಾಟ್ ಮಸಾಲಾ, ಜೀರಿಗೆ ಪುಡಿ ಮತ್ತು ರುಚಿಗೆ ತಕ್ಕಂತೆ ಉಪ್ಪು ಸೇರಿಸಿ.
- ನಿಂಬೆರಸವನ್ನು ಸೇರಿಸಿ.
- ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ ಕಲಸಿ.
- ಸವಿದು ಆನಂದಿಸಿ. ಇದನ್ನು ಕೂಡಲೇ ಅಥವಾ ಸ್ವಲ್ಪ ಹೊತ್ತು ಬಿಟ್ಟು ತಿನ್ನಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ