Fruit custard or fruit salad recipe in Kannada | ಹಣ್ಣಿನ ಕಸ್ಟರ್ಡ್ ಅಥವಾ ಸಲಾಡ್ ಮಾಡುವ ವಿಧಾನ
ಫ್ರೂಟ್ ಕಸ್ಟರ್ಡ್ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 2 ಟೇಬಲ್ ಚಮಚ ಕಸ್ಟರ್ಡ್ ಪೌಡರ್
- 2 ಟೇಬಲ್ ಚಮಚ ಸಕ್ಕರೆ (ಅಥವಾ ನಿಮ್ಮ ರುಚಿಗೆ ತಕ್ಕಂತೆ)
- 2.25 ಕಪ್ ಹಾಲು
- 1 ಕಪ್ ಹಣ್ಣು (ಸೇಬು, ಬಾಳೆಹಣ್ಣು, ದ್ರಾಕ್ಷಿ, ದಾಳಿಂಬೆ, ಮಾವು, ಕಲ್ಲಂಗಡಿ ಇತ್ಯಾದಿ)
ಹಣ್ಣಿನ ಕಸ್ಟರ್ಡ್ ಅಥವಾ ಸಲಾಡ್ ಮಾಡುವ ವಿಧಾನ:
- ಒಂದು ಬಟ್ಟಲಿನಲ್ಲಿ ಎರಡು ಟೇಬಲ್ ಚಮಚ ಕಸ್ಟರ್ಡ್ ಪೌಡರ್ ತೆಗೆದುಕೊಳ್ಳಿ.
- ಅದಕ್ಕೆ ಕಾಲು ಕಪ್ ಹಾಲು ಹಾಕಿ ಗಂಟಿಲ್ಲದಂತೆ ಕಲಸಿಕೊಳ್ಳಿ.
- ಇನ್ನೊಂದು ಪಾತ್ರೆಯಲ್ಲಿ ಎರಡು ಕಪ್ ಹಾಲು ತೆಗೆದುಕೊಳ್ಳಿ.
- ಅದಕ್ಕೆ ಎರಡು ಟೇಬಲ್ ಚಮಚ ಸಕ್ಕರೆ ಹಾಕಿ ಕುದಿಯಲು ಇಡೀ.
- ಹಾಲು ಸ್ವಲ್ಪ ಬಿಸಿ ಆದ ಮೇಲೆ ಕಲಸಿಟ್ಟುಕೊಂಡ ಹಾಲು ಮತ್ತು ಕಸ್ಟರ್ಡ್ ಪೌಡರ್ ನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸುತ್ತ, ಗಂಟಿಲ್ಲದಂತೆ ಕಲಸಿಕೊಳ್ಳಿ.
- ಕುದಿಸಿದ ನಂತ್ರ, ಉರಿ ಕಡಿಮೆ ಮಾಡಿ, ಒಂದೈದು ನಿಮಿಷ ಕುದಿಸುವುದನ್ನು ಮುಂದುವರೆಸಿ.
- ಸ್ವಲ್ಪ ದಪ್ಪ ಆದಮೇಲೆ ಸ್ಟವ್ ಆಫ್ ಮಾಡಿ. ಬಿಸಿ ಆರಿದ ಮೇಲೆ ಫ್ರಿಡ್ಜ್ ನಲ್ಲಿಡಿ.
- ತಣ್ಣಗಾದ ಮೇಲೆ, ಕತ್ತರಿಸಿದ ಹಣ್ಣುಗಳನ್ನು ಹಾಕಿ. ಹುಳಿ ಇರುವ ಹಣ್ಣುಗಳನ್ನು ಹಾಕುವುದು ಬೇಡ.
- ಬಡಿಸುವ ಮೊದಲು ಮೇಲಿನಿಂದ ಹಣ್ಣುಗಳಿಂದ ಅಲಂಕರಿಸಿ ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ