Madli recipe in Kannada | ಮಾದ್ಲಿ ಮಾಡುವ ವಿಧಾನ
ಮಾದ್ಲಿ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ಗೋಧಿ ಹಿಟ್ಟು
- 1 ಟೇಬಲ್ ಚಮಚ ಕಡ್ಲೆಹಿಟ್ಟು
- 1/2 ಕಪ್ ಬೆಲ್ಲ
- 2 ಟೇಬಲ್ ಚಮಚ ಕೊಬ್ಬರಿ ತುರಿ
- 1 ಟೇಬಲ್ ಚಮಚ ಹುರಿದ ಗಸಗಸೆ
- 2 ಟೇಬಲ್ ಚಮಚ ಹುರಿಗಡಲೆ ಅಥವಾ ಪುಟಾಣಿ
- ಎರಡು ಏಲಕ್ಕಿ ಜಜ್ಜಿದ್ದು
ಮಾದ್ಲಿ ಮಾಡುವ ವಿಧಾನ:
- ಗೋಧಿ ಹಿಟ್ಟನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಳ್ಳಿ.
- ಅದಕ್ಕೆ ಕಡ್ಲೆಹಿಟ್ಟನ್ನು ಸೇರಿಸಿ.
- ಸ್ವಲ್ಪ ಸ್ವಲ್ಪ ನೀರು ಸೇರಿಸುತ್ತ ಗಟ್ಟಿಯಾದ ಹಿಟ್ಟನ್ನು ನಾದಿಕೊಳ್ಳಿ.
- ನಿಂಬೆಗಾತ್ರದ ಉಂಡೆ ಮಾಡಿ ಸ್ವಲ್ಪ ದಪ್ಪನಾದ ಚಪಾತಿ ಮಾಡಿ.
- ಬಿಸಿ ಆರಿದ ಮೇಲೆ ಚಪಾತಿಗಳನ್ನು ಚೂರು ಮಾಡಿ ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿ.
- ಅದಕ್ಕೆ ಪುಡಿಮಾಡಿದ ಬೆಲ್ಲ ಮತ್ತು ಜಜ್ಜಿದ ಏಲಕ್ಕಿ ಸೇರಿಸಿ, ಪುನಃ ಪುಡಿ ಮಾಡಿ.
- ಒಂದು ಪಾತ್ರೆಗೆ ಪುಡಿ ಮಾಡಿದ ಮಿಶ್ರಣ ಹಾಕಿ.
- ಮೇಲಿನಿಂದ ಹುರಿದ ಗಸಗಸೆ ಮತ್ತು ಕೊಬ್ಬರಿ ತುರಿ ಹಾಕಿ.
- ಹುರಿಗಡಲೆ ಸೇರಿಸಿ, ಚೆನ್ನಾಗಿ ಕಲಸಿ.
- ತುಪ್ಪ ಮತ್ತು ಹಾಲಿನೊಂದಿಗೆ ಅಥವಾ ಹಾಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ