ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 1 ಮಧ್ಯಮ ಗಾತ್ರದ ಟೊಮ್ಯಾಟೋ
- 1 ನೆಲ್ಲಿಕಾಯಿ ಗಾತ್ರದ ಹುಣಿಸೆಹಣ್ಣು
- 1 ನೆಲ್ಲಿಕಾಯಿ ಗಾತ್ರದ ಬೆಲ್ಲ
- 1/2 ಟೀಸ್ಪೂನ್ ಜೀರಿಗೆ
- 1/2 ಟೀಸ್ಪೂನ್ ಸಾಸಿವೆ
- 1/4 ಟೀಸ್ಪೂನ್ ಮೆಂತೆ
- 1 ಹಸಿರು ಮೆಣಸಿನಕಾಯಿ (ನಾನು ಬಳಸಲಿಲ್ಲ)
- ದೊಡ್ಡ ಚಿಟಿಕೆ ಇಂಗು
- ದೊಡ್ಡ ಚಿಟಿಕೆ ಅರಿಶಿನ
- 4-5 ಕರಿಬೇವಿನ ಎಲೆ
- 1 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
- 1 ಟೀಸ್ಪೂನ್ ಸಾರಿನ ಪುಡಿ
- 2 ಟೀಸ್ಪೂನ್ ಅಡುಗೆ ಎಣ್ಣೆ / ತುಪ್ಪ
- ಉಪ್ಪು ರುಚಿಗೆ ತಕ್ಕಷ್ಟು.
5 ನಿಮಿಷದಲ್ಲಿ ಟೊಮೇಟೊ ಸಾರು ಮಾಡುವ ವಿಧಾನ:
- ಟೊಮೆಟೊ ತೊಳೆದು ಸಣ್ಣದಾಗಿ ಕತ್ತರಿಸಿ. ಬೇರೆ ಪದಾರ್ಥಗಳನ್ನು ಎತ್ತಿಟ್ಟುಕೊಳ್ಳಿ.
- ಒಂದು ಬಾಣಲೆಯನ್ನು ಬಿಸಿಮಾಡಿ, ಎಣ್ಣೆ, ಸಾಸಿವೆ, ಜೀರಿಗೆ ಮತ್ತು ಮೆಂತೆ ಸೇರಿಸಿ ಒಗ್ಗರಣೆ ಮಾಡಿ.
- ಸಾಸಿವೆ ಸಿಡಿದ ಕೂಡಲೇ ಹಸಿರು ಮೆಣಸಿನಕಾಯಿ (ಬೇಕಾದಲ್ಲಿ) ಮತ್ತು ಕರಿಬೇವಿನ ಸೊಪ್ಪು ಹಾಕಿ.
- ನಂತರ ಇಂಗು ಮತ್ತು ಅರಿಶಿನ ಪುಡಿ ಸೇರಿಸಿ ಕೆಲವು ಸೆಕೆಂಡುಗಳ ಕಾಲ ಮಗುಚಿ.
- ಕತ್ತರಿಸಿದ ಟೊಮೆಟೊ, ಸ್ವಲ್ಪ ಉಪ್ಪು ಸೇರಿಸಿ ಟೊಮ್ಯಾಟೊ ಮೃದು ಆಗುವ ತನಕ ಹುರಿಯಿರಿ.
- ಈಗ ಉಪ್ಪು , ಹುಣಸೆ ರಸ, ಬೆಲ್ಲ ಮತ್ತು ನೀರು ಸೇರಿಸಿ ಕುದಿಸಿ.
- ಕೊನೆಯಲ್ಲಿ ಸಾರಿನ ಪುಡಿ ಹಾಕಿ.
- ಮೇಲಿನಿಂದ ಕೊತ್ತಂಬರಿ ಸೊಪ್ಪು ಉದುರಿಸಿ.
- ಬಿಸಿ ಅನ್ನದೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ