ಶುಕ್ರವಾರ, ಏಪ್ರಿಲ್ 28, 2017

Biriyani masala powder recipe in Kannada | ಬಿರಿಯಾನಿ ಮಸಾಲಾ ಪೌಡರ್ ಮಾಡುವ ವಿಧಾನ

Biriyani masala powder recipe in Kannada

Biriyani masala powder recipe in Kannada | ಬಿರಿಯಾನಿ ಮಸಾಲಾ ಪೌಡರ್ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು:

  1. 10 ಟೀಸ್ಪೂನ್ ಕೊತ್ತಂಬರಿ ಬೀಜ
  2. 4 ಟೀಸ್ಪೂನ್ ಕಪ್ಪು ಜೀರಿಗೆ
  3. 2 ಟೀಸ್ಪೂನ್ ಲವಂಗ
  4. 2 ಬೆರಳು ಉದ್ದ ಚಕ್ಕೆ
  5. 1 ದಾಲ್ಚಿನ್ನಿ ಎಲೆ
  6. 2 ಟೀಸ್ಪೂನ್ ಸೋಂಪು
  7. 1 ಟೀಸ್ಪೂನ್ ಕಾಳು ಮೆಣಸು
  8. 2 ದೊಡ್ಡ ಕಪ್ಪು ಏಲಕ್ಕಿ
  9. 5 ಹಸಿರು ಏಲಕ್ಕಿ
  10. 1 ಜಾಪತ್ರೆ ಹೂವು
  11. 2 ಚಕ್ರ ಮೊಗ್ಗು
  12. 1/2 ಟೀಸ್ಪೂನ್ ತುರಿದ ಜಾಯಿಕಾಯಿ

 ಬಿರಿಯಾನಿ ಮಸಾಲಾ ಪೌಡರ್ ಮಾಡುವ ವಿಧಾನ:

  1. ಅಳತೆ ಪ್ರಕಾರ ಎಲ್ಲ ಮಸಾಲಾ ಪದಾರ್ಥಗಳನ್ನು ತೆಗೆದುಕೊಳ್ಳಿ. 
  2. ನಂತರ ಮಸಾಲಾ ಪದಾರ್ಥಗಳನ್ನು ಬಿಸಿಲಿನಲ್ಲಿ ಒಣಗಿಸಿ ಅಥವಾ ಬಾಣಲೆಯಲ್ಲಿ ಸ್ವಲ್ಪ ಬಿಸಿಯಾಗುವವರೆಗೆ ಹುರಿಯಿರಿ. 
  3. ಮಸಾಲಾ ಪದಾರ್ಥಗಳು ತಣ್ಣಗಾದಮೇಲೆ ಮಿಕ್ಸಿ ಜಾರಿಗೆ ಹಾಕಿ ನುಣ್ಣನೆ ಪುಡಿ ಮಾಡಿ. 
  4.  ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ. ರುಚಿಕರ ಬಿರಿಯಾನಿ ಮಾಡಲು ಉಪಯೋಗಿಸಿ.

ಮಂಗಳವಾರ, ಏಪ್ರಿಲ್ 25, 2017

Akki rotti using leftover rice recipe in Kannada | ಅನ್ನ ಬಳಸಿ ಮಾಡಿದ ಅಕ್ಕಿ ರೊಟ್ಟಿ ಮಾಡುವ ವಿಧಾನ

Akki rotti using leftover rice recipe in Kannada

Akki rotti using leftover rice recipe in Kannada | ಅನ್ನ ಬಳಸಿ ಮಾಡಿದ ಅಕ್ಕಿ ರೊಟ್ಟಿ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ಕಪ್ ಮೆತ್ತಗೆ ಬೇಯಿಸಿದ ಅನ್ನ 
  2. ಸುಮಾರು 1 ಕಪ್ ನಷ್ಟು ಅಕ್ಕಿ ಹಿಟ್ಟು 
  3. 2 ಟೀಸ್ಪೂನ್ ಅಡುಗೆ ಎಣ್ಣೆ 
  4. ಉಪ್ಪು ರುಚಿಗೆ ತಕ್ಕಷ್ಟು

ಅನ್ನ ಬಳಸಿ ಮಾಡಿದ ಅಕ್ಕಿ ರೊಟ್ಟಿ ಮಾಡುವ ವಿಧಾನ:

  1. ಒಂದು ಬಟ್ಟಲಿನಲ್ಲಿ ಅನ್ನವನ್ನು ತೆಗೆದುಕೊಂಡು ಚೆನ್ನಾಗಿ ಕಿವುಚಿ. ಅನ್ನ ಗಟ್ಟಿ ಇದ್ದರೆ ಮಿಕ್ಸಿಯಲ್ಲಿ ಅರೆಯಿರಿ. 
  2. ನಂತರ ಅದಕ್ಕೆ ಸ್ವಲ್ಪ ಸ್ವಲ್ಪವಾಗಿ ಅಕ್ಕಿ ಹಿಟ್ಟನ್ನು ಸೇರಿಸಿ ಕಲಸಿ. 
  3. ಚೆನ್ನಾಗಿ ನಾದಿ ಮೃದುವಾದ ಹಿಟ್ಟನ್ನು ತಯಾರಿಸಿ. 
  4. ಕೊನೆಯಲ್ಲಿ ಎರಡು ಚಮಚ ಎಣ್ಣೆ ಹಾಕಿ ಹಿಟ್ಟನ್ನು ಚೆನ್ನಾಗಿ ನಾದಿ. 
  5. ನಿಂಬೆ ಗಾತ್ರದ ಉಂಡೆ ಮಾಡಿಕೊಂಡು, ಅಗತ್ಯವಿದ್ದಷ್ಟು ಹಿಟ್ಟು ಹಾಕಿ ತೆಳ್ಳಗೆ ಲಟ್ಟಿಸಿ. ಕೈಯಲ್ಲಿ ತಟ್ಟಿಯೂ ಮಾಡಬಹುದು. 
  6. ಒಂದು ಹೆಂಚು ಅಥವಾ ತವಾ ತೆಗೆದುಕೊಂಡು ಬಿಸಿ ಮಾಡಿ. ಲಟ್ಟಿಸಿದ ರೊಟ್ಟಿಯನ್ನು ತವಾ ಮೇಲೆ ಹಾಕಿ. 
  7.  ರೊಟ್ಟಿಯ ಎರಡು ಬದಿಯನ್ನು ಸುಮಾರು ಹತ್ತು ಸೆಕೆಂಡ್ಗಳ ಕಾಲ ಕಾಯಿಸಿ. 
  8. ನಂತರ ರೊಟ್ಟಿಯನ್ನು ನೇರವಾಗಿ ಸ್ಟವ್ ಮೇಲೆ ಹಾಕಿ. ಎರಡು ಬದಿ ಅಲ್ಲಲ್ಲಿ ಕೆಂಪಾಗುವವರೆಗೆ ಕಾಯಿಸಿ. 
  9. ಬಿಸಿ ಬಿಸಿಯಾಗಿರುವಾಗಲೇ ನಿಮ್ಮಿಷ್ಟದ ಗೊಜ್ಜು ಅಥವಾ ಪಲ್ಯದೊಂದಿಗೆ ಬಡಿಸಿ.

ಶುಕ್ರವಾರ, ಏಪ್ರಿಲ್ 21, 2017

Rave uppittu or upma recipe without onion | ಈರುಳ್ಳಿ ರಹಿತ ರವೇ ಉಪ್ಪಿಟ್ಟು ಮಾಡುವ ವಿಧಾನ

Rave uppittu or upma recipe without onion

Rave uppittu or upma recipe without onion | ಈರುಳ್ಳಿ ರಹಿತ ರವೇ ಉಪ್ಪಿಟ್ಟು ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 2 ಕಪ್ ರವೆ
  2. 4 ಕಪ್ ನೀರು
  3. 1/2 ಟೀಸ್ಪೂನ್ ಸಾಸಿವೆ
  4. 1 ಟೀಸ್ಪೂನ್ ಉದ್ದಿನಬೇಳೆ
  5. 1 ಟೀಸ್ಪೂನ್ ಕಡ್ಲೆಬೇಳೆ (ಬೇಕಾದಲ್ಲಿ)
  6. 1/4 ಟೀಸ್ಪೂನ್ ಇಂಗು
  7. 1-2 ಹಸಿರು ಮೆಣಸಿನಕಾಯಿ
  8. 5-6 ಕರಿ ಬೇವಿನ ಎಲೆ
  9. 1 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಶುಂಠಿ
  10. 1/4 ಟೀಸ್ಪೂನ್ ಅರಶಿನ ಪುಡಿ
  11. 3 ಟೇಬಲ್ ಸ್ಪೂನ್ ಅಡುಗೆ ಎಣ್ಣೆ
  12. 1 - 2 ಟೀಸ್ಪೂನ್ ಸಕ್ಕರೆ (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
  13. 1 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
  14. 2 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
  15. 1/4 ಕಪ್ ತೆಂಗಿನತುರಿ

ಈರುಳ್ಳಿ ರಹಿತ ರವೇ ಉಪ್ಪಿಟ್ಟು ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಉಪ್ಪು, ಸಕ್ಕರೆ ಮತ್ತು ನೀರನ್ನು ಹಾಕಿ ಕುದಿಯಲು ಇಡಿ. ನೀರು ಕುದಿಯುವುದರೊಳಗೆ ಉಪ್ಪಿಟ್ಟಿಗೆ ಒಗ್ಗರಣೆ ಸಿದ್ಧಪಡಿಸಿಕೊಳ್ಳೋಣ. ಏಕೆಂದರೆ ಕುದಿಯುವ ನೀರು ಕೊನೆಯಲ್ಲಿ ಬೇಕಾಗುತ್ತದೆ.
  2. ಅದಕ್ಕಾಗಿ ಒಂದು ಬಾಣಲೆ ಬಿಸಿಮಾಡಿ, ಎಣ್ಣೆ, ಸಾಸಿವೆ, ಉದ್ದಿನಬೇಳೆ ಮತ್ತು ಕಡ್ಲೆಬೇಳೆ ಹಾಕಿ. ಸಾಸಿವೆ ಸಿಡಿದ ಕೂಡಲೇ ಕರಿಬೇವು, ಕತ್ತರಿಸಿದ ಶುಂಠಿ ಮತ್ತು ಹಸಿರು ಮೆಣಸಿನಕಾಯಿ ಸೇರಿಸಿ ಕೈಯಾಡಿಸಿ. 
  3. ನಂತರ ಅರಿಶಿನ ಪುಡಿ ಮತ್ತು ಇಂಗು ಸೇರಿಸಿ. 
  4. 2 ಕಪ್ ರವೆ ಸೇರಿಸಿ ಮಧ್ಯಮ ಉರಿಯಲ್ಲಿ ಒಂದೈದು ನಿಮಿಷಗಳ ಕಾಲ ಹುರಿಯಿರಿ.
  5. ಇಷ್ಟರೊಳಗೆ ನೀರು ಕುದಿಯಲಾರಂಭಿಸಿರುತ್ತದೆ. ಆ ಕುದಿಯುವ ನೀರನ್ನು ಜಾಗ್ರತೆಯಿಂದ ರವೆ ಇರುವ ಬಾಣಲೆಗೆ ಸ್ವಲ್ಪ ಸ್ವಲ್ಪವಾಗಿ ಸುರಿಯಿರಿ. ನೀರು ಇಂಗುವವರೆಗೆ ಮಗುಚಿ. ನೀರು ಇಂಗಲು ಎರಡು ನಿಮಿಷ ಸಾಕಾಗುತ್ತದೆ.
  6. ತೆಂಗಿನತುರಿ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಮಗುಚಿ. ಸ್ಟೋವ್ ಆಫ್ ಮಾಡಿ. ಬಿಸಿಯಾಗಿರುವಾಗಲೇ ಮಸಾಲೆ ಅವಲಕ್ಕಿ ಅಥವಾ ಮೊಸರಿನೊಂದಿಗೆ ಬಡಿಸಿ.


Related Posts Plugin for WordPress, Blogger...