ಮಂಗಳವಾರ, ಆಗಸ್ಟ್ 30, 2016

Shenga or Nelagadale unde recipe in Kannada | ಶೇಂಗಾ ಅಥವಾ ನೆಲಗಡಲೆ ಉಂಡೆ ಮಾಡುವ ವಿಧಾನ

Shenga or Nelagadale unde recipe in Kannada

Shenga or Nelagadale unde recipe in Kannada | ಶೇಂಗಾ ಅಥವಾ ನೆಲಗಡಲೆ ಉಂಡೆ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಶೇಂಗಾ ಅಥವಾ ನೆಲಗಡಲೆ
  2. 3/4 ಕಪ್ ಬೆಲ್ಲ
  3. 1/4 ಕಪ್ ಕೊಬ್ಬರಿ
  4. 1/4 ಕಪ್ ಎಳ್ಳು
  5. ಒಂದು ದೊಡ್ಡ ಚಿಟಿಕೆ ಏಲಕ್ಕಿ ಪುಡಿ

ಶೇಂಗಾ ಅಥವಾ ನೆಲಗಡಲೆ ಉಂಡೆ ಮಾಡುವ ವಿಧಾನ:

  1. ಒಂದು ದಪ್ಪ ತಳದ ಬಾಣಲೆಯಲ್ಲಿ ನೆಲಗಡಲೆಯನ್ನು ಮಧ್ಯಮ ಉರಿಯಲ್ಲಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. 
  2. ನಂತರ ಎಳ್ಳನ್ನು ಹಾಕಿ ಮಧ್ಯಮ ಉರಿಯಲ್ಲಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಅಥವಾ ಚೆನ್ನಾಗಿ ಉಬ್ಬುವವರೆಗೆ ಹುರಿಯಿರಿ. 
  3. ನಂತರ ತುರಿದ ಕೊಬ್ಬರಿ ಹಾಕಿ ಸ್ವಲ್ಪ ಹೊತ್ತು ಹುರಿಯಿರಿ. 
  4. ಬಿಸಿ ಆರಿದ ಮೇಲೆ ಮಿಕ್ಸಿಗೆ ಹಾಕಿ ತರಿ ತರಿಯಾಗಿ ಪುಡಿ ಮಾಡಿ. ಪಲ್ಸ್ ಬಟನ್ ಉಪಯೋಗಿಸಿ ಬುರ್-ಬುರ್ ಮಾಡಿದರೆ ಸಾಕು. ತುಂಬ ಹೊತ್ತು ಮಿಕ್ಸಿ ರನ್ ಮಾಡಬೇಡಿ. 
  5. ನಂತರ ಪುಡಿ ಮಾಡಿದ ಬೆಲ್ಲ ಹಾಕಿ ಪುನಃ ಪಲ್ಸ್ ಬಟನ್ ಉಪಯೋಗಿಸಿ 3 - 4 ಸಲ ಬುರ್-ಬುರ್ ಮಾಡಿ.
  6. ಒಂದು ಬಟ್ಟಲಿಗೆ ಪುಡಿ ಮಾಡಿದ ಶೇಂಗಾ-ಎಳ್ಳು-ಕೊಬ್ಬರಿ-ಬೆಲ್ಲದ ಮಿಶ್ರಣ ಮತ್ತು ಏಲಕ್ಕಿ ಪುಡಿ ಹಾಕಿ ಕಲಸಿ. 
  7. ಸ್ವಲ್ಪ ಮಿಶ್ರಣವನ್ನು ತೆಗೆದುಕೊಂಡು ಮುಷ್ಟಿಯಲ್ಲಿ ಉಂಡೆ ಮಾಡಿ. ಸವಿದು ಆನಂದಿಸಿ.


ಸೋಮವಾರ, ಆಗಸ್ಟ್ 29, 2016

Kayi kadubu recipe in Kannada | ಕಾಯಿ ಕಡುಬು ಮಾಡುವ ವಿಧಾನ

Kayi kadubu recipe in Kannada

Kayi kadubu recipe in Kannada | ಕಾಯಿ ಕಡುಬು ಮಾಡುವ ವಿಧಾನ 

 ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಅಕ್ಕಿ ಹಿಟ್ಟು 
  2. 1 ಕಪ್ ತೆಂಗಿನ ತುರಿ
  3. 1/2 ಕಪ್ ಬೆಲ್ಲ
  4. 1.5 - 2 ಕಪ್ ನೀರು (ಅಕ್ಕಿ ಹಿಟ್ಟಿನ ಗುಣಮಟ್ಟ ಅವಲಂಬಿಸಿ)
  5. 1 - 2 ಏಲಕ್ಕಿ
  6. 2 ಟೀಸ್ಪೂನ್ ತುಪ್ಪ 
  7. ಉಪ್ಪು ರುಚಿಗೆ ತಕ್ಕಷ್ಟು
  8. ಪ್ಲಾಸ್ಟಿಕ್ ಹಾಳೆ ಅಥವಾ ಬಾಳೆ ಎಲೆ

ಕಾಯಿ ಕಡುಬು ಮಾಡುವ ವಿಧಾನ :

  1. ಒಂದು ಬಾಣಲೆಯಲ್ಲಿ ನೀರು, 1/2 ಟೀಸ್ಪೂನ್ ತುಪ್ಪ ಮತ್ತು ಉಪ್ಪು ಹಾಕಿ ಕುದಿಯಲು ಇಡಿ. 
  2. ನೀರು ಕುದಿಯಲು ಪ್ರಾರಂಭಿಸಿದ ನಂತರ ಅಕ್ಕಿ ಹಿಟ್ಟನ್ನು ಹಾಕಿ, ಒಮ್ಮೆ ಚೆನ್ನಾಗಿ ಮಗುಚಿ ಸ್ಟವ್ ಆಫ್ ಮಾಡಿ. 
  3. ಮುಚ್ಚಳ ಮುಚ್ಚಿ ಪಕ್ಕಕ್ಕಿಡಿ. 
  4. ಮಿಕ್ಸಿ ಜಾರಿಗೆ ತೆಂಗಿನ ತುರಿ ಮತ್ತು ಏಲಕ್ಕಿ ಹಾಕಿ ನೀರು ಹಾಕದೆ ಪುಡಿ ಮಾಡಿ. 
  5. ಪುಡಿಮಾಡಿದ ತೆಂಗಿನ ತುರಿ ಮತ್ತು ಬೆಲ್ಲವನ್ನು ಒಂದು ಬಾಣಲೆಗೆ ಹಾಕಿ ಬಿಸಿ ಮಾಡಿ ಹೂರಣ ಸಿದ್ಧ ಮಾಡಿಕೊಳ್ಳಿ. 
  6. ಇಷ್ಟು ಹೊತ್ತಿಗೆ ಅಕ್ಕಿ ಹಿಟ್ಟು ಬಿಸಿ ಆರಿರುತ್ತದೆ. ಆ ಹಿಟ್ಟನ್ನು ಚೆನ್ನಾಗಿ ನಾದಿ. ಹಿಟ್ಟು ಮೃದುವಾಗಿರಬೇಕು. 
  7. ಒಂದು ಲಿಂಬೆ ಗಾತ್ರದ ಹಿಟ್ಟು ತೆಗೆದು ಕೊಂಡು, ತುಪ್ಪ ಸವರಿದ ಪ್ಲಾಸ್ಟಿಕ್ ಹಾಳೆ ಅಥವಾ ಬಾಳೆ ಎಲೆ ಮೇಲೆ ವೃತ್ತಾಕಾರವಾಗಿ ತಟ್ಟಿ ಅಥವಾ ಲಟ್ಟಿಸಿ. 
  8. ಮಧ್ಯದಲ್ಲಿ ಹೂರಣ ಇಟ್ಟು, ಮಡಿಸಿ, ಅಂಚುಗಳನ್ನು ಒತ್ತಿ ಅಂಟಿಸಿ. 
  9. ಸೆಕೆಯಲ್ಲಿ (ಆವಿಯಲ್ಲಿ) ಬಾಳೆ ಎಲೆ ಅಥವಾ ತುಪ್ಪ ಹಚ್ಚಿದ ಪ್ಲೇಟ್ ನಲ್ಲಿಟ್ಟು 8 - 10 ನಿಮಿಷ ಬೇಯಿಸಿ. 
  10. ಬೇಕಾದಲ್ಲಿ ಮೋದಕದ ಆಕಾರದಲ್ಲೂ ಮಾಡ ಬಹುದು.


Pudina pulao recipe in Kannada | ಪುದೀನಾ ಪಲಾವ್ ಮಾಡುವ ವಿಧಾನ

Pudina pulao recipe in Kannada

Pudina pulao recipe in Kannada | ಪುದೀನಾ ಪಲಾವ್ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಅಕ್ಕಿ (ಸೋನಾ ಮಸೂರಿ)
  2. 1 ಸಣ್ಣ ಕ್ಯಾರೆಟ್
  3. 1 ಸಣ್ಣ ಆಲೂಗಡ್ಡೆ
  4. 5 - 6 ಬೀನ್ಸ್
  5. 1/2 ದೊಣ್ಣೆ ಮೆಣಸಿನಕಾಯಿ (ಬೇಕಾದಲ್ಲಿ)
  6. 1/4 ಕಪ್ ನೆನೆಸಿದ ಬಟಾಣಿ
  7. 2 ದೊಡ್ಡ ಈರುಳ್ಳಿ
  8. 2 ಟೊಮ್ಯಾಟೋ (ಅಥವಾ ನಿಂಬೆ ರಸ)
  9. 1/2 ಟೀಸ್ಪೂನ್ ಜೀರಿಗೆ
  10. 1 ಚಕ್ರ ಮೊಗ್ಗು 
  11. 1 ಪುಲಾವ್ ಎಲೆ
  12. 1/4 ಟೀಸ್ಪೂನ್ ಅರಶಿನ ಪುಡಿ (ಬೇಕಾದಲ್ಲಿ)
  13. 8-10 ಟೀಸ್ಪೂನ್ ಅಡುಗೆ ಎಣ್ಣೆ / ತುಪ್ಪ
  14. 2 ಕಪ್ ನೀರು (ಅಕ್ಕಿಯ ಗುಣಮಟ್ಟ ಅವಲಂಬಿಸಿ)
  15. 2 ಟೀಸ್ಪೂನ್ ಉಪ್ಪು (ನಿಮ್ಮ ರುಚಿಗೆ ತಕ್ಕಷ್ಟು)

ಬೇಕಾಗುವ ಪದಾರ್ಥಗಳು (ಮಸಾಲೆಗೆ):

  1. 1/2 ಕಪ್ ತೆಂಗಿನತುರಿ
  2. 2ಸೆಮೀ ಉದ್ದದ ಶುಂಠಿ
  3. 5-6 ಎಸಳು ಬೆಳ್ಳುಳ್ಳಿ
  4. 1 ಟೀಸ್ಪೂನ್ ಕೊತ್ತಂಬರಿ ಬೀಜ
  5. 1/2 ಟೀಸ್ಪೂನ್ ಜೀರಿಗೆ
  6. 1-2 ಹಸಿರುಮೆಣಸಿನಕಾಯಿ
  7. 1 ಬೆರಳುದ್ದ ಚಕ್ಕೆ
  8. 8-10 ಲವಂಗ
  9. 1 ಏಲಕ್ಕಿ
  10. 2 ಟೇಬಲ್ ಸ್ಪೂನ್ ಕತ್ತರಿಸಿದ ಕೊತ್ತಂಬರಿ ಸೊಪ್ಪು
  11. ಒಂದು ಹಿಡಿ ಪುದೀನಾ ಎಲೆ
  12. 1/2 ಕಪ್ ನೀರು ಅರೆಯಲು

ಪುದೀನಾ ಪಲಾವ್ ಮಾಡುವ ವಿಧಾನ:

  1. ಎಲ್ಲ ತರಕಾರಿಗಳನ್ನು ತೊಳೆದು ಕತ್ತರಿಸಿಕೊಳ್ಳಿ. ಟೊಮ್ಯಾಟೋ ಮತ್ತು ಈರುಳ್ಳಿಯನ್ನು ಸಹ ಕತ್ತರಿಸಿ ಸಿದ್ಧ ಮಾಡಿಟ್ಟುಕೊಳ್ಳಿ.
  2. ಮಸಾಲೆ ಅರೆಯಲು ಪಟ್ಟಿ ಮಾಡಿದ ಎಲ್ಲ ಪದಾರ್ಥಗಳನ್ನು 1/2 ಕಪ್ ನೀರು ಬಳಸಿಕೊಂಡು ಮಿಕ್ಸಿಯಲ್ಲಿ ತರಿ ತರಿಯಾಗಿ ಅರೆದು ಕೊಳ್ಳಿ.
  3. ಈಗ ಒಂದು 5ಲೀ ನಷ್ಟು ದೊಡ್ಡ ಕುಕ್ಕರ್ ತೆಗೆದುಕೊಂಡು ಎಣ್ಣೆ ಅಥವಾ ತುಪ್ಪ ಹಾಕಿ. ಚಕ್ರ ಮೊಗ್ಗು ಮತ್ತು ಪುಲಾವ್ ಎಲೆ ಹಾಕಿ ಹುರಿಯಿರಿ.
  4. ನಂತರ ಕತ್ತರಿಸಿದ ಈರುಳ್ಳಿ ಹಾಕಿ ಹುರಿಯಿರಿ.
  5. ಈರುಳ್ಳಿ ಮೆತ್ತಗಾದ ಕೂಡಲೇ ಟೊಮ್ಯಾಟೋ ಹಾಕಿ ಹುರಿಯಿರಿ. ನಿಂಬೆ ರಸ ಹಾಕುವುದಾದಲ್ಲಿ ಕೊನೆಯಲ್ಲಿ ಬಡಿಸುವ ಮುನ್ನ ಸೇರಿಸಿ. 
  6. ಈಗ ಕತ್ತರಿಸಿದ ತರಕಾರಿ, ಅರೆದ ಮಸಾಲೆ ಮತ್ತು ಅರಶಿನ ಪುಡಿ ಹಾಕಿ ಪುನಃ 5 ನಿಮಿಷಗಳ ಕಾಲ ಹುರಿಯಿರಿ.
  7. ಮಸಾಲೆ ಹುರಿಯುತ್ತಿರುವಾಗಲೇ 1 ಕಪ್ ಅಕ್ಕಿ ತೊಳೆದು ಹಾಕಿ. ಒಮ್ಮೆ ಚೆನ್ನಾಗಿ ಮಗುಚಿ. 2ಕಪ್ ನೀರು ಸೇರಿಸಿ (ಅನ್ನಕ್ಕೆ ಬಳಸುವ ನೀರಿಗಿಂತ ಸ್ವಲ್ಪ ಕಡಿಮೆ).
  8. ಉಪ್ಪು ಹಾಕಿ, ಪುನಃ ಒಮ್ಮೆ ಕಲಸಿ. ಮುಚ್ಚಳ ಮುಚ್ಚಿ 2 ವಿಷಲ್ ಮಾಡಿ.
  9. ಒತ್ತಡ ಕಡಿಮೆಯಾದ ಮೇಲೆ, ಮುಚ್ಚಳ ತೆರೆದು, ಜಾಗ್ರತೆಯಿಂದ ಮುದ್ದೆಯಾಗದಂತೆ ಕಲಸಿ. ಟೊಮೇಟೊ ಬದಲಾಗಿ ನಿಂಬೆ ರಸ ಹಾಕುವುದಾದಲ್ಲಿ ಈಗ ಹಾಕಿ ಕಲಸಿ. ಮೊಸರು ಬಜ್ಜಿ ಯೊಂದಿಗೆ, ಇಲ್ಲವೇ ಹಾಗೆ ಬಿಸಿ ಬಿಸಿಯಾಗಿರುವಾಗ ಬಡಿಸಿ.

Related Posts Plugin for WordPress, Blogger...