ಮಂಗಳವಾರ, ಜುಲೈ 5, 2016

Uddina bele chutney recipe in Kannada | ಉದ್ದಿನಬೇಳೆ ಚಟ್ನಿ ಮಾಡುವ ವಿಧಾನ

Uddina bele chutney recipe in Kannada

Uddina bele chutney recipe in Kannada | ಉದ್ದಿನಬೇಳೆ ಚಟ್ನಿ ಮಾಡುವ ವಿಧಾನ

ಉದ್ದಿನಬೇಳೆ ಚಟ್ನಿ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ತೆಂಗಿನ ತುರಿ
  2. 1 - 2 ಒಣ ಮೆಣಸಿನಕಾಯಿ
  3. 4 ಟೀಸ್ಪೂನ್ ಉದ್ದಿನ ಬೇಳೆ
  4. 4 - 5 ಕರಿ ಬೇವಿನ ಎಲೆ ಅಥವಾ 1/4 ಟೀಸ್ಪೂನ್ ಕೊತ್ತಂಬರಿ ಬೀಜ
  5. ಸಣ್ಣ ಗೋಲಿ ಗಾತ್ರದ ಹುಣಿಸೇಹಣ್ಣು 
  6. 1/2 ಟೀಸ್ಪೂನ್ ಅಡುಗೆ ಎಣ್ಣೆ
  7. ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಒಣ ಮೆಣಸಿನಕಾಯಿ
  2. 1/4 ಟೀಸ್ಪೂನ್ ಸಾಸಿವೆ
  3. 2 ಟೀಸ್ಪೂನ್ ಅಡುಗೆ ಎಣ್ಣೆ

ಉದ್ದಿನಬೇಳೆ ಚಟ್ನಿ ಮಾಡುವ ವಿಧಾನ:

  1. ಒಂದು ಬಾಣಲೆಗೆ ಎಣ್ಣೆ, ಒಣ ಮೆಣಸಿನಕಾಯಿ ಮತ್ತು ಉದ್ದಿನಬೇಳೆ ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ.
  2. ಕೊನೆಯಲ್ಲಿ ಕರಿಬೇವಿನ ಸೊಪ್ಪು ಅಥವಾ ಕೊತ್ತಂಬರಿ ಬೀಜ ಹಾಕಿ ಹುರಿಯಿರಿ. 
  3. ತೆಂಗಿನ ತುರಿ, ಹುರಿದ ಒಣ ಮೆಣಸು, ಕೊತ್ತಂಬರಿ ಬೀಜ ಅಥವಾ ಕರಿಬೇವಿನ ಸೊಪ್ಪು, ಹುರಿದ ಉದ್ದಿನಬೇಳೆ, ಉಪ್ಪು ಮತ್ತು ಹುಣಿಸೇಹಣ್ಣು ಹಾಕಿ, ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ. 
  4. ಒಣಮೆಣಸಿನಕಾಯಿ ಮತ್ತು ಸಾಸಿವೆಯ ಒಗ್ಗರಣೆ ಮಾಡಿ.

ಸೋಮವಾರ, ಜುಲೈ 4, 2016

mixed veg palya recipe in Kannada | ಬೆರಕೆ ತರಕಾರಿ ಪಲ್ಯ

mixed veg curry recipe in Kannada

mixed veg palya recipe in Kannada | ಬೆರಕೆ ತರಕಾರಿ ಪಲ್ಯ 

ಮಿಕ್ಸ್ ತರಕಾರಿ ಪಲ್ಯ ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ 240 ಎಂ ಎಲ್ ): 

  1. 1 ಕ್ಯಾರೆಟ್ 
  2. 10 - 12 ಬೀನ್ಸ್ 
  3. 1 ಬದನೆ ಕಾಯಿ  
  4. 1 ಆಲೂಗೆಡ್ಡೆ 
  5. 1 ದೊಡ್ಡ ಟೊಮೆಟೊ 
  6. 1 ಸಣ್ಣ ಕ್ಯಾಪ್ಸಿಕಂ 
  7. 1/2 ಚಮಚ ಸಾಸಿವೆ 
  8. 1 ಟೀಸ್ಪೂನ್ ಕಡ್ಲೆಬೇಳೆ  
  9. 1 ಟೀಸ್ಪೂನ್ ಉದ್ದಿನ ಬೇಳೆ 
  10. 2 ಟೀಸ್ಪೂನ್ ವಾಂಗಿ ಬಾತ್ ಪುಡಿ ಅಥವಾ ಪಲ್ಯದ ಪುಡಿ
  11. 1/4 ಟೀಸ್ಪೂನ್ ಅರಿಶಿನ ಪುಡಿ
  12. ಒಂದು ದೊಡ್ಡ ಚಿಟಿಕೆ ಇಂಗು
  13. 5 - 6 ಕರಿಬೇವಿನ ಎಲೆ 
  14. 1 ಹಸಿರು ಮೆಣಸಿನಕಾಯಿ 
  15. 1/2 ನೆಲ್ಲಿಕಾಯಿ ಗಾತ್ರದ ಬೆಲ್ಲ (ಬೇಕಾದಲ್ಲಿ) 
  16. ನಿಮ್ಮ ರುಚಿ ಪ್ರಕಾರ ಉಪ್ಪು 
  17. 4 ಟೀಸ್ಪೂನ್ ಅಡುಗೆ ಎಣ್ಣೆ


ಬೆರಕೆ ತರಕಾರಿ ಪಲ್ಯ ಮಾಡುವ ವಿಧಾನ:

  1. ಮೊದಲಿಗೆ ಎಲ್ಲ ತರಕಾರಿಗಳನ್ನು ಕತ್ತರಿಸಿಟ್ಟು ಕೊಳ್ಳಿ. 
  2. ಎಣ್ಣೆ, ಸಾಸಿವೆ, ಉದ್ದಿನ ಬೇಳೆ, ಕಡ್ಲೆಬೇಳೆ, ಹಸಿರು ಮೆಣಸಿನ ಕಾಯಿ, ಕರಿಬೇವು, ಅರಶಿನ ಪುಡಿ ಮತ್ತು ಇಂಗಿನ ಒಗ್ಗರಣೆ ಮಾಡಿಕೊಳ್ಳಿ. 
  3. ಕತ್ತರಿಸಿಟ್ಟ ತರಕಾರಿಗಳನ್ನು ಹಾಕಿ, ಒಂದೆರಡು ನಿಮಿಷ ಹುರಿಯಿರಿ. 
  4. ಪಲ್ಯದ ಪುಡಿ, ಉಪ್ಪು, ಬೆಲ್ಲ ಮತ್ತು ೧/೪ ಕಪ್ ನೀರು ಹಾಕಿ. 
  5. ಒಮ್ಮೆ ಮಗುಚಿ, ಮುಚ್ಚಳ ಮುಚ್ಚಿ, ಸಣ್ಣ ಉರಿಯಲ್ಲಿ ಬೇಯಿಸಿ. ಚಪಾತಿ ಅಥವಾ ಅನ್ನದೊಂದಿಗೆ ಬಡಿಸಿ. 

ಶುಕ್ರವಾರ, ಜುಲೈ 1, 2016

Upsaaru recipe in kannada | ಉಪ್ಸಾರು ಮಾಡುವ ವಿಧಾನ

Upsaaru recipe in kannada

Upsaaru recipe in kannada | ಉಪ್ಸಾರು ಮಾಡುವ ವಿಧಾನ

ಮುಖ್ಯ ಪದಾರ್ಥಗಳು: (ಅಳತೆ ಕಪ್ = 240ml) 

  1. 1 ಕಟ್ಟು ಸೊಪ್ಪು ಅಥವಾ  250gm ತರಕಾರಿ (ಮೆಂತೆ ಸೊಪ್ಪು ಹೊರತುಪಡಿಸಿ ಯಾವುದೇ ಸೊಪ್ಪ ಮತ್ತು ಎಲೆಕೋಸು, ಬೀನ್ಸ್ ಅಥವಾ ಹೀರೇಕಾಯಿಯಂತಹ ತರಕಾರಿ)
  2. 1/4 ಕಪ್ ತೊಗರಿಬೇಳೆ
  3. 1/4 ಕಪ್ ಹೆಸರುಕಾಳು ಅಥವಾ ಇನ್ನಾವುದೇ ಕಾಳು (ಬೇಕಾದಲ್ಲಿ -  ಇಲ್ಲವಾದಲ್ಲಿ 1/4 ಕಪ್ ನಷ್ಟು ತೊಗರಿಬೇಳೆ ಹೆಚ್ಚಿಸಿ) 
  4. 2 - 4 ಹಸಿರು ಮೆಣಸಿನಕಾಯಿ (ಈ ಸಾರು ಸ್ವಲ್ಪ ಜಾಸ್ತಿ ಖಾರ ಇರುತ್ತದೆ)
  5. ನಿಮ್ಮ ರುಚಿ ಪ್ರಕಾರ ಉಪ್ಪು

ಉಪ್ಸಾರಿಗೆ  ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ml)

  1. 1 ಕತ್ತರಿಸಿದ ಈರುಳ್ಳಿ
  2. 10 ಬೇಳೆ ಸುಲಿದು ಮತ್ತು ಕತ್ತರಿಸಿದ ಬೆಳ್ಳುಳ್ಳಿ
  3. 1 ಕತ್ತರಿಸಿದ ಟೊಮೆಟೊ
  4. 1/2 ನೆಲ್ಲಿಕಾಯಿ ಗಾತ್ರದ ಹುಣಸೆಹಣ್ಣು 
  5. 1/4 ಕಪ್ ತೆಂಗಿನ ತುರಿ
  6. 1 ಟೀಸ್ಪೂನ್ ಜೀರಿಗೆ 
  7. 4 - 5 ಕರಿಮೆಣಸು
  8. ಸ್ವಲ್ಪ ಕೊತ್ತುಂಬರಿ ಸೊಪ್ಪು 
  9. ನಿಮ್ಮ ರುಚಿ ಪ್ರಕಾರ ಉಪ್ಪು

 ಉಪ್ಸಾರು ಒಗ್ಗರಣೆಗೆ ಬೇಕಾಗುವ ಪದಾರ್ಥಗಳು: 

  1. 1 ಕೆಂಪು ಮೆಣಸಿನಕಾಯಿ 
  2. 5 - 6 ಕರಿಬೇವಿನ 
  3. 1/2 ಚಮಚ ಸಾಸಿವೆ 
  4. 2 ಟೀಸ್ಪೂನ್ ಅಡುಗೆ ಎಣ್ಣೆ 

ಉಪ್ಸಾರು ಪಲ್ಯಕ್ಕೆ ಬೇಕಾಗುವ ಪದಾರ್ಥಗಳು: 

  1. 1 ಕೆಂಪು ಮೆಣಸಿನಕಾಯಿ 
  2. 1 ಟೀಸ್ಪೂನ್ ಉದ್ದಿನ ಬೇಳೆ 
  3. 1 ಟೀಸ್ಪೂನ್ ಕಡಲೆಬೇಳೆ 
  4. 5 - 6 ಕರಿಬೇವಿನ ಎಲೆ  
  5. 1/2 ಚಮಚ ಸಾಸಿವೆ 
  6. 1 ಕತ್ತರಿಸಿದ ಈರುಳ್ಳಿ 
  7. 1 - 2 ಹಸಿಮೆಣಸು (ಬೇಕಾದಲ್ಲಿ) 
  8. 2 ಟೇಬಲ್ ಸ್ಪೂನ್  ತೆಂಗಿನ ತುರಿ
  9. 2 ಟೇಬಲ್ ಸ್ಪೂನ್ ಹೆಚ್ಚಿದ ಕೊತ್ತಂಬರಿ ಸೊಪ್ಪು
  10. 2 ಟೀಸ್ಪೂನ್ ಅಡುಗೆ ಎಣ್ಣೆ

ಉಪ್ಸಾರು ಮಾಡುವ ವಿಧಾನ:

  1. ಸೊಪ್ಪು, ಬೇಳೆ, ಕಾಳು ಮತ್ತು ಹಸಿರುಮೆಣಸಿನ ಕಾಯಿಯನ್ನು, ಉಪ್ಪು ಮತ್ತು ನೀರಿನೊಂದಿಗೆ ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಿ. 
  2. ಕತ್ತರಿಸಿದ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ೧ ಚಮಚ ಎಣ್ಣೆಯಲ್ಲಿ ಹುರಿದಿಟ್ಟು ಕೊಳ್ಳಿ. 
  3. ಮಿಕ್ಸಿಯಲ್ಲಿ ಹುರಿದ ಈರುಳ್ಳಿ, ಬೆಳ್ಳುಳ್ಳಿ, ಟೊಮ್ಯಾಟೋ, ಕೊತ್ತಂಬರಿ ಸೊಪ್ಪು, ಜೀರಿಗೆ, ಕರಿಮೆಣಸು, ಹುಣಿಸೆ ಹಣ್ಣು, ಬೇಯಿಸಿದ ಹಸಿರು ಮೆಣಸಿನಕಾಯಿ, ಬೇಯಿಸಿದ ಸೊಪ್ಪು+ಕಾಳು+ಬೇಳೆಯ ಮಿಶ್ರಣ ೨ ಟೇಬಲ್ ಚಮಚದಷ್ಟು ಹಾಕಿ ನುಣ್ಣನೆ ಅರೆದುಕೊಳ್ಳಿ. 
  4. ಒಂದು ಬಾಣಲೆಯಲ್ಲಿ ಎಣ್ಣೆ, ಕೆಂಪು ಮೆಣಸಿನಕಾಯಿ, ಕರಿಬೇವು, ಸಾಸಿವೆಯ ಒಗ್ಗರಣೆ ಮಾಡಿ. 
  5. ಅದಕ್ಕೆ ಅರೆದ ಮಸಾಲೆ ಅಥವಾ ಖಾರ ಹಾಕಿ ಒಂದೆರಡು ನಿಮಿಷ ಮಗುಚಿ.
  6. ಈಗ ಬೇಯಿಸಿದ ಸೊಪ್ಪು+ಕಾಳು+ಬೇಳೆಯ ನೀರು ಬಸಿದು ಸೇರಿಸಿ. ಸಾರಿನ ಹದಕ್ಕೆ ಬೇಕಾದಷ್ಟು ನೀರು ಸೇರಿಸಿ. ಉಪ್ಪು ಹಾಕಿ. ಕುದಿಸಿದರೆ ಉಪ್ಸಾರು ತಯಾರಾಯಿತು. 
  7. ಇನ್ನೊಂದು ಬಾಣಲೆಯಲ್ಲಿ ಎಣ್ಣೆ, ಸಾಸಿವೆ, ಕೆಂಪು ಮೆಣಸಿನಕಾಯಿ, ಹಸಿರು ಮೆಣಸಿನಕಾಯಿ, ಉದ್ದಿನ ಬೇಳೆ, ಕಡಲೆಬೇಳೆ ಮತ್ತು ಕರಿಬೇವಿನ ಎಲೆಯ ಒಗ್ಗರಣೆ ಮಾಡಿ. 
  8. ಕತ್ತರಿಸಿದ ಈರುಳ್ಳಿ ಹಾಕಿ ಬಾಡಿಸಿ. 
  9. ನೀರು ಬಸಿದು ಉಳಿದ ಸೊಪ್ಪು+ಕಾಳು+ಬೇಳೆಯ ಮಿಶ್ರಣವನ್ನು ಸೇರಿಸಿ ಮಗುಚಿ. ಬೇಕಾದಲ್ಲಿ ಉಪ್ಪು ಸೇರಿಸಿ. 
  10. ತೆಂಗಿನ ತುರಿ, ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ ಮಗುಚಿ ಸ್ಟೋವ್ ಆಫ್ ಮಾಡಿ. 
  11. ಅನ್ನ ಅಥವಾ ರಾಗಿ ಮುದ್ದೆಯೊಂದಿಗೆ ಉಪ್ಸಾರು ಮತ್ತು ಪಲ್ಯವನ್ನು ಬಡಿಸಿ. 




Related Posts Plugin for WordPress, Blogger...