Khichdi recipe in Kannada | ಕಿಚಡಿ ಮಾಡುವ ವಿಧಾನ
ಕಿಚಡಿ ವಿಡಿಯೋ
ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)
- 1/4 ಕಪ್ ಅಕ್ಕಿ (ಅಥವಾ ಗೋದಿ ನುಚ್ಚು ಬಳಸಬಹುದು)
- 1/4 ಕಪ್ ಹೆಸರುಬೇಳೆ
- 1 ಪುಲಾವ್ ಎಲೆ
- 1/2 ಟೀಸ್ಪೂನ್ ಜೀರಿಗೆ
- 1/2 ಟೀಸ್ಪೂನ್ ಶುಂಠಿ
- ಸ್ವಲ್ಪ ಕರಿಬೇವು
- 1 ಹಸಿಮೆಣಸಿನಕಾಯಿ
- 1/2 ಈರುಳ್ಳಿ
- ದೊಡ್ಡ ಚಿಟಿಕೆ ಅರಿಶಿನ ಪುಡಿ
- ದೊಡ್ಡ ಚಿಟಿಕೆ ಇಂಗು
- 1/2 ಟೊಮೇಟೊ
- 1 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿ ಪ್ರಕಾರ)
- 1 ಟೀಸ್ಪೂನ್ ತುಪ್ಪ
- ಸ್ವಲ್ಪ ಕೊತ್ತಂಬರಿ ಸೊಪ್ಪು
ಕಿಚಡಿ ಮಾಡುವ ವಿಧಾನ:
- ಹೆಸರುಬೇಳೆ ಮತ್ತು ಅಕ್ಕಿಯನ್ನು 20 ನಿಮಿಷ ನೆನೆಸಿ.
- ಒಂದು ಕುಕ್ಕರ್ ನಲ್ಲಿ ತುಪ್ಪ ಬಿಸಿ ಮಾಡಿ.
- ಪುಲಾವ್ ಎಲೆ ಮತ್ತು ಜೀರಿಗೆ ಹಾಕಿ ಒಗ್ಗರಣೆ ಮಾಡಿ.
- ಶುಂಠಿ, ಕರಿಬೇವು, ಸೀಳಿದ ಹಸಿಮೆಣಸಿನಕಾಯಿ ಮತ್ತು ಈರುಳ್ಳಿ ಹಾಕಿ ಹುರಿಯಿರಿ.
- ನಂತರ ಅರಿಶಿನ ಮತ್ತು ಇಂಗು ಸೇರಿಸಿ ಮಗುಚಿ.
- ಟೊಮೇಟೊ ಸೇರಿಸಿ ಹುರಿಯಿರಿ.
- ನೆನೆಸಿದ ಹೆಸರುಬೇಳೆ ಮತ್ತು ಅಕ್ಕಿ ಹಾಕಿ ಮಗುಚಿ.
- ಸುಮಾರು ಎರಡು ಕಪ್ ನೀರು ಸೇರಿಸಿ.
- ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
- ಮುಚ್ಚಳ ಮುಚ್ಚಿ 3 - 4 ವಿಷಲ್ ಮಾಡಿ.
- ಬಿಸಿ-ಬಿಸಿ ಯಾಗಿರುವಾಗಲೇ ಬಡಿಸಿ. ಬೆಳಿಗ್ಗಿನ ತಿಂಡಿಗೆ ಅಥವಾ ರಾತ್ರಿ ಊಟಕ್ಕೆ ಬಹಳ ಚೆನ್ನಾಗಿರುತ್ತದೆ.
To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ