ಗುರುವಾರ, ಸೆಪ್ಟೆಂಬರ್ 29, 2016

Hasi menthe thambli recipe in Kannada | ಹಸಿ ಮೆಂತೆ ತಂಬ್ಳಿ ಮಾಡುವ ವಿಧಾನ

Hasi menthe thambli recipe in Kannada

Hasi menthe thambli recipe in Kannada | ಹಸಿ ಮೆಂತೆ ತಂಬ್ಳಿ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 2 ಟೀಸ್ಪೂನ್ ಮೆಂತೆ
  2. 1/4 ಕಪ್ ತೆಂಗಿನತುರಿ
  3. 1 ಕಪ್ ಮೊಸರು ಅಥವಾ ಮಜ್ಜಿಗೆ 
  4. ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಒಣ ಮೆಣಸಿನಕಾಯಿ
  2. 1 ಟೀಸ್ಪೂನ್ ತುಪ್ಪ ಅಥವಾ ಅಡುಗೆ ಎಣ್ಣೆ
  3. 1/4 ಟೀಸ್ಪೂನ್ ಸಾಸಿವೆ

ಹಸಿ ಮೆಂತೆ ತಂಬ್ಳಿ ಮಾಡುವ ವಿಧಾನ:

  1. ಮೆಂತೆಯನ್ನು ತೊಳೆದು 4 ಘಂಟೆಗಳ ಕಾಲ ನೆನೆಸಿಡಿ. 
  2. ನಂತರ ನೆನೆಸಿದ ಮೆಂತೆಯನ್ನು ತೆಂಗಿನತುರಿಯೊಂದಿಗೆ ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣನೆ ಅರೆಯಿರಿ. 
  3. ಅರೆದ ಮೆಂತೆಯನ್ನು ಒಂದು ಬಟ್ಟಲಿಗೆ ಹಾಕಿ. ಮಜ್ಜಿಗೆ ಅಥವಾ ಮೊಸರನ್ನು ಹಾಕಿ ಕಲಸಿ. 
  4. ಉಪ್ಪು ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ. ನಾನು 1 ಕಪ್ ನಷ್ಟು ಸೇರಿಸುತ್ತೇನೆ. 
  5. ಎಣ್ಣೆ, ಒಣಮೆಣಸು ಮತ್ತು ಸಾಸಿವೆ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ. ಅಥವಾ ತೆಳ್ಳಗೆ ಮಾಡಿ ಕುಡಿಯಿರಿ.

ಬುಧವಾರ, ಸೆಪ್ಟೆಂಬರ್ 28, 2016

Menthe soppu ricebath recipe in Kannada | ಮೆಂತೆ ಸೊಪ್ಪಿನ ರೈಸ್ ಬಾತ್ ಮಾಡುವ ವಿಧಾನ

Menthe soppu ricebath recipe in Kannada

Menthe soppu ricebath recipe in Kannada | ಮೆಂತೆ ಸೊಪ್ಪಿನ ರೈಸ್ ಬಾತ್ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 1 ಕಪ್ ಸೋನಾ ಮಸೂರಿ ಅಕ್ಕಿ
  2. ಒಂದು ಮಧ್ಯಮ ಗಾತ್ರದ ಮೆಂತೆ ಸೊಪ್ಪಿನ ಕಟ್ಟು
  3. 4 ಟೇಬಲ್ ಚಮಚ ಅಡುಗೆ ಎಣ್ಣೆ 
  4. 1/2 ಚಮಚ ಸಾಸಿವೆ 
  5. 1 ಟೀಸ್ಪೂನ್ ಉದ್ದಿನ ಬೇಳೆ 
  6. 1 ಟೀಸ್ಪೂನ್ ಕಡಲೆಬೇಳೆ 
  7. 4 - 5 ಕರಿಬೇವಿನ ಎಲೆ 
  8. 1 ಸಣ್ಣದಾಗಿ ಹೆಚ್ಚಿದ ಈರುಳ್ಳಿ 
  9. 2 ಸಣ್ಣದಾಗಿ ಹೆಚ್ಚಿದ ಮಧ್ಯಮ ಗಾತ್ರದ ಟೊಮ್ಯಾಟೊ 
  10. 1/2 ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು 
  11. 1/2 ನೆಲ್ಲಿಕಾಯಿ ಗಾತ್ರದ ಬೆಲ್ಲ
  12. 1/2 ಕಪ್ ತೆಂಗಿನ ತುರಿ
  13. 1/4 ಟೀಸ್ಪೂನ್ ಅರಶಿನ ಪುಡಿ
  14. ಉಪ್ಪು ರುಚಿಗೆ ತಕ್ಕಷ್ಟು

ಮಸಾಲೆ ಪುಡಿಗೆ ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 2 - 4 ಕೆಂಪು ಮೆಣಸಿನಕಾಯಿ (ಮಧ್ಯಮ ಖಾರ)
  2. 2 ಟೀಸ್ಪೂನ್ ಉದ್ದಿನ ಬೇಳೆ
  3. 2 ಟೀಸ್ಪೂನ್ ಕಡಲೆಬೇಳೆ 
  4. 4 ಟೀಸ್ಪೂನ್ ಕೊತ್ತಂಬರಿ ಬೀಜ

ಮೆಂತೆ ಸೊಪ್ಪಿನ ರೈಸ್ ಬಾತ್ ಮಾಡುವ ವಿಧಾನ:

  1. ಮೊದಲಿಗೆ ಉದುರು ಉದುರಾದ ಅನ್ನ ಮಾಡಿಟ್ಟು ಕೊಳ್ಳಿ. 
  2. ಮೆಂತೆ ಸೊಪ್ಪನ್ನು ಆಯ್ದು, ತೊಳೆದು, ಕತ್ತರಿಸಿಟ್ಟು ಕೊಳ್ಳಿ. 
  3. ಒಂದು ಬಾಣಲೆಯಲ್ಲಿ 2 - 4 ಕೆಂಪು ಮೆಣಸಿನಕಾಯಿ, 2 ಟೀಸ್ಪೂನ್ ಉದ್ದಿನ ಬೇಳೆ, 2 ಟೀಸ್ಪೂನ್ ಕಡಲೆಬೇಳೆ, 4 ಟೀಸ್ಪೂನ್ ಕೊತ್ತಂಬರಿ ಬೀಜವನ್ನು ಎಣ್ಣೆ ಹಾಕದೆ ಹುರಿಯಿರಿ. 
  4. ಹುರಿದ ಎಲ್ಲ ಪದಾರ್ಥಗಳು ತಣ್ಣಗಾದ ಮೇಲೆ ಪುಡಿ ಮಾಡಿಟ್ಟು ಕೊಳ್ಳಿ. 
  5. ನಂತರ 4 ಟೇಬಲ್ ಚಮಚ ಅಡುಗೆ ಎಣ್ಣೆಯನ್ನು ಒಂದು ಬಾಣಲೆಯಲ್ಲಿ ತೆಗೆದುಕೊಂಡು ಬಿಸಿ ಮಾಡಿ. 
  6. ಸಾಸಿವೆ, ಉದ್ದಿನ ಬೇಳೆ, ಕಡಲೆಬೇಳೆ ಮತ್ತು ಕರಿಬೇವಿನ ಒಗ್ಗರಣೆ ಮಾಡಿ. 
  7. ಅದಕ್ಕೆ ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ. 
  8. ನಂತರ ಹೆಚ್ಚಿದ ಮೆಂತೆಸೊಪ್ಪು ಹಾಕಿ ಬಾಡಿಸಿ. 
  9. ನಂತರ ಹೆಚ್ಚಿದ ಟೊಮೇಟೊ ಹಾಕಿ ಬಾಡಿಸಿ. 
  10. ನಂತರ ಉಪ್ಪು, ಅರಶಿನ, ಬೆಲ್ಲ, ಹುಣಿಸೆರಸ ಮತ್ತು ಮಸಾಲೆ ಪುಡಿ ಹಾಕಿ. ಕಾಯಿ ತುರಿಯನ್ನೂ ಹಾಕಿ ಚೆನ್ನಾಗಿ ಮಗುಚಿ. ಸ್ಟವ್ ಆಫ್ ಮಾಡಿ. 
  11. ಬೇಯಿಸಿಟ್ಟ ಅನ್ನ ಹಾಕಿ ಕಲಸಿ. ಬಿಸಿ ಬಿಸಿಯಾಗಿ ಬಡಿಸಿ.

ಮಂಗಳವಾರ, ಸೆಪ್ಟೆಂಬರ್ 27, 2016

Saat or badusha recipe in Kannada | ಸಾಟ್ ಅಥವಾ ಬಾದುಷಾ ಮಾಡುವ ವಿಧಾನ

Saat or badusha recipe in Kannada

Saat or badusha recipe in Kannada | ಸಾಟ್ ಅಥವಾ ಬಾದುಷಾ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 120 ಎಂಎಲ್ )

  1. 5 ಕಪ್ ಮೈದಾ ಹಿಟ್ಟು 
  2. 1 ಕಪ್ ತುಪ್ಪ
  3. 2 ಕಪ್ ಸಕ್ಕರೆ 
  4. ಚಿಟಿಕೆ ಏಲಕ್ಕಿ ಪುಡಿ 
  5. ಉಪ್ಪು ರುಚಿಗೆ ತಕ್ಕಷ್ಟು
  6. ಕರಿಯಲು ಎಣ್ಣೆ

ಸಾಟ್ ಅಥವಾ ಬಾದುಷಾ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಮೈದಾ ಹಿಟ್ಟು, ಉಪ್ಪು ಮತ್ತು ತುಪ್ಪ ಹಾಕಿ ಕಲಸಿ. 
  2. ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಮೃದುವಾದ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ. 
  3. ಈಗ ನಿಂಬೆ ಹಣ್ಣಿನ ಗಾತ್ರದ ಉಂಡೆ ತೆಗೆದು ಕೊಂಡು ಸ್ವಲ್ಪ ಚಪ್ಪಟೆಯಾಕಾರದ ಉಂಡೆ ಮಾಡಿಟ್ಟು ಕೊಳ್ಳಿ. 
  4. 2 ಕಪ್ ಸಕ್ಕರೆಗೆ 1/2 ಕಪ್ ನೀರು ಹಾಕಿ ಒಂದೆಳೆ ಪಾಕ ಮಾಡಿಟ್ಟು ಕೊಳ್ಳಿ. ಸಕ್ಕರೆ ಪಾಕಕ್ಕೆ ಏಲಕ್ಕಿ ಪುಡಿ ಸೇರಿಸಿ. 
  5. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ನಂತರ ಚಪ್ಪಟೆಯಾಕಾರದ ಉಂಡೆಯನ್ನು ಬಿಸಿಯಾದ ಎಣ್ಣೆಯಲ್ಲಿ ಹಾಕಿ ಮಧ್ಯಮ ಉರಿಯಲ್ಲಿ ಕಾಯಿಸಿ. 
  6. ಸ್ವರ ಅಥವಾ ಗುಳ್ಳೆಗಳು ನಿಂತ ಮೇಲೆ ತೆಗೆದು ಬಿಸಿಯಾದ ಸಕ್ಕರೆ ಪಾಕದಲ್ಲಿ ಅದ್ದಿ ತೆಗೆಯಿರಿ ಅಥವಾ ಒಂದು ತಟ್ಟೆಯಲ್ಲಿಟ್ಟು ಮೇಲಿನಿಂದ ಸಕ್ಕರೆ ಪಾಕ ಸುರಿಯಿರಿ. ರುಚಿಯಾದ ಸಾಟ್ ಅಥವಾ ಬಾದುಷಾ ಸವಿಯಲು ಸಿದ್ದ.


ಶನಿವಾರ, ಸೆಪ್ಟೆಂಬರ್ 24, 2016

Sabsige soppu akki rotti recipe in Kannada | ಸಬ್ಬಸಿಗೆ ಸೊಪ್ಪು ಅಕ್ಕಿ ರೊಟ್ಟಿ ಮಾಡುವ ವಿಧಾನ

Sabsige soppu akki rotti recipe in Kannada

Sabsige soppu akki rotti recipe in Kannada | ಸಬ್ಬಸಿಗೆ ಸೊಪ್ಪು ಅಕ್ಕಿ ರೊಟ್ಟಿ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1.5 ಕಪ್ ಅಕ್ಕಿಹಿಟ್ಟು
  2. 2.5 ಕಪ್ ನೀರು (ಅಕ್ಕಿಹಿಟ್ಟಿನ ಗುಣಮಟ್ಟವನ್ನು ಅವಲಂಬಿಸಿ ಸ್ವಲ್ಪ ಹೆಚ್ಚು ಕಡಿಮೆ)
  3. ಒಂದು ಸಣ್ಣ ಕಟ್ಟು ಸಬ್ಬಸಿಗೆ ಸೊಪ್ಪು
  4. 2-4 ಸಣ್ಣಗೆ ಹೆಚ್ಚಿದ ಹಸಿರುಮೆಣಸಿನ ಕಾಯಿ
  5. 2 ಸಣ್ಣಗೆ ಹೆಚ್ಚಿದ ಈರುಳ್ಳಿ
  6. 1/2 ಕಪ್ ತೆಂಗಿನ ತುರಿ
  7. 1 ಟೀಸ್ಪೂನ್ ಜೀರಿಗೆ 
  8. ಉಪ್ಪು ರುಚಿಗೆ ತಕ್ಕಷ್ಟು
  9. 1/4 ಕಪ್ ಅಡುಗೆ ಎಣ್ಣೆ
  10. 15x15cm ಗಾತ್ರದ ದಪ್ಪ ಪ್ಲಾಸ್ಟಿಕ್ ಹಾಳೆ / ಬಾಳೆ ಎಲೆ

ಸಬ್ಬಸಿಗೆ ಸೊಪ್ಪು ಅಕ್ಕಿ ರೊಟ್ಟಿ ಮಾಡುವ ವಿಧಾನ:

  1. ಒಂದು ಬಾಣಲೆ ಅಥವಾ ಪಾತ್ರೆಯಲ್ಲಿ ನೀರು ಮತ್ತು ಉಪ್ಪು ಹಾಕಿ ಕುದಿಸಿ. ನೀರು ಕುಡಿಯಲು ಪ್ರಾರಂಭಿಸಿದ ಕೂಡಲೇ ಅಕ್ಕಿ ಹಿಟ್ಟು ಹಾಕಿ ಸ್ಟೋವ್ ಆಫ್ ಮಾಡಿ.
  2. ಈಗ ಕತ್ತರಿಸಿದ ಈರುಳ್ಳಿ , ಸಬ್ಬಸಿಗೆ ಸೊಪ್ಪು, ಹಸಿರು ಮೆಣಸಿನಕಾಯಿ ಮತ್ತು ತೆಂಗಿನ ತುರಿಯನ್ನು ಸೇರಿಸಿ ಚೆನ್ನಾಗಿ ಕಲಸಿ. ಬೇಕಾದಲ್ಲಿ ನೀರು ಅಥವಾ ಹಿಟ್ಟು ಸೇರಿಸಿ ಮೃದುವಾದ ಹಿಟ್ಟನ್ನು ತಯಾರಿಸಿಕೊಳ್ಳಿ.
  3. ಒಂದು ಸಣ್ಣ ಬಟ್ಟಲಿನಲ್ಲಿ ಎಣ್ಣೆಯನ್ನು ತೆಗೆದು ಕೊಳ್ಳಿ. ಪ್ಲಾಸ್ಟಿಕ್ ಹಾಳೆ ಅಥವಾ ಬಾಳೆ ಎಲೆಯ ಮೇಲೆ ಎಣ್ಣೆಯನ್ನು ಹಚ್ಚಿ ಒಂದು ಟೆನ್ನಿಸ್ ಚಂಡಿನ ಗಾತ್ರದ ಹಿಟ್ಟು ಇರಿಸಿ.
  4. ಈಗ ನಿಮ್ಮ ಬೆರಳುಗಳಿಗೆ ಎಣ್ಣೆ ಹಚ್ಚಿಕೊಂಡು, ಬೆರಳುಗಳಿಂದ ಮೆಲ್ಲನೆ ಒತ್ತುತ್ತಾ ವೃತ್ತಾಕಾರದ ಅಕ್ಕಿ ರೊಟ್ಟಿಯನ್ನು ತಟ್ಟಿ. ಆಗಾಗ್ಯೆ ಕೈ ಬೆರಳುಗಳಿಂದ ಎಣ್ಣೆ ಮುಟ್ಟುತ್ತಾ ರೊಟ್ಟಿ ತಟ್ಟುವುದರಿಂದ ಕೈಗೆ ಅಂಟುವುದಿಲ್ಲ.
  5. ಎಚ್ಚರಿಕೆಯಿಂದ ಪ್ಲಾಸ್ಟಿಕ್ ಹಾಳೆಯಲ್ಲಿರುವ ಅಕ್ಕಿ ರೊಟ್ಟಿಯನ್ನು ಕೈಯಲ್ಲಿ ತೆಗೆದುಕೊಂಡು ಬಿಸಿ ತವಾ ಮೇಲೆ ಹಾಕಿ. ಈ ಹಂತದಲ್ಲಿ ನೀವು ಎಚ್ಚರಿಕೆಯಿಂದಿರಬೇಕು ಮತ್ತು ವೇಗವಾಗಿರಬೇಕು. ಇಲ್ಲವಾದಲ್ಲಿ ರೊಟ್ಟಿ ಹರಿದುಹೋಗಬಹುದು.
  6. ಮೇಲಿನಿಂದ ಎಣ್ಣೆ ಹಾಕಿ, ಸುಮಾರು ಒಂದು ನಿಮಿಷದ ನಂತರ ರೊಟ್ಟಿಯನ್ನು ತಿರುವಿ ಹಾಕಿ. ಇನ್ನೊಂದು ಬದಿಯೂ ಕಾಯಿಸಿ. ಬೆಣ್ಣೆ ಅಥವಾ ಮೊಸರು ಅಥವಾ ಚಟ್ನಿಯೊಂದಿಗೆ ಬಡಿಸಿ.

ಶುಕ್ರವಾರ, ಸೆಪ್ಟೆಂಬರ್ 23, 2016

Ennegayi recipe in Kannada | ಬದನೇಕಾಯಿ ಎಣ್ಣೆಗಾಯಿ ಮಾಡುವ ವಿಧಾನ

Ennegayi recipe in Kannada

Ennegayi recipe in Kannada | ಬದನೇಕಾಯಿ ಎಣ್ಣೆಗಾಯಿ ಮಾಡುವ ವಿಧಾನ

ಬದನೇಕಾಯಿ ಎಣ್ಣೆಗಾಯಿ ವಿಡಿಯೋ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 5 - 6 ಸಣ್ಣ ಎಳೆ ಬದನೆಕಾಯಿ 
  2. 1 ದೊಡ್ಡ ಈರುಳ್ಳಿ 
  3. 1 ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು
  4. 2 ಟೀಸ್ಪೂನ್ ಬೆಲ್ಲ 
  5. 1/4 ಟೀಸ್ಪೂನ್ ಅರಿಶಿನ ಪುಡಿ 
  6. 4 - 5 ಕರಿಬೇವಿನ 
  7. 1 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು 
  8. 1/4 ಟೀಸ್ಪೂನ್ ಸಾಸಿವೆ 
  9. 4 ಟೇಬಲ್ ಚಮಚ ಅಡುಗೆ ಎಣ್ಣೆ (6 ಟೇಬಲ್ ಚಮಚ ನಾನ್-ಸ್ಟಿಕ್ ಪ್ಯಾನ್ ಅಲ್ಲವಾದಲ್ಲಿ)
  10. ಉಪ್ಪು ರುಚಿಗೆ ತಕ್ಕಷ್ಟು

ಮಸಾಲೆಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ಟೀಸ್ಪೂನ್ ಎಳ್ಳು
  2. 2 ಟೇಬಲ್ ಚಮಚ ನೆಲಗಡಲೆ
  3. 3 - 6 ಒಣ ಮೆಣಸಿನಕಾಯಿ
  4. 2 ಟೀಸ್ಪೂನ್ ಕೊತ್ತಂಬರಿ ಬೀಜ
  5. 1 ಟೀಸ್ಪೂನ್ ಜೀರಿಗೆ
  6. 2 ಟೀಸ್ಪೂನ್ ಕಡಲೆಬೇಳೆ
  7. 1 ಟೀಸ್ಪೂನ್ ಉದ್ದಿನ ಬೇಳೆ
  8. 1/4 ಟೀಸ್ಪೂನ್ ಮೆಂತ್ಯ
  9. 2 ಟೀಸ್ಪೂನ್ ಹುರಿಗಡಲೆ
  10. 1/2 ಕಪ್ ತೆಂಗಿನ ತುರಿ

ಬದನೇಕಾಯಿ ಎಣ್ಣೆಗಾಯಿ ಮಾಡುವ ವಿಧಾನ:

  1. ಬದನೇಕಾಯಿಯನ್ನು ತೊಳೆದು '+' ಆಕಾರದಲ್ಲಿ ಸೀಳಿರಿ. ಚೊಟ್ಟು ಅಥವಾ ತೊಟ್ಟಿನ ಭಾಗ ಹಾಗೆ ಇರಲಿ. ಹುಳ ಇದ್ದರೆ ಆ ಭಾಗ ತೆಗೆದು ಹಾಕಿ. ಸೀಳಿದ ಬದನೆಕಾಯಿಯನ್ನು ನೀರಿನಲ್ಲಿ ನೆನೆಸಿಡಿ. 
  2. ನಂತರ ಒಂದು ಬಾಣಲೆಯಲ್ಲಿ ಎಣ್ಣೆ ಹಾಕದೆ ಮೊದಲಿಗೆ ಎಳ್ಳನ್ನು ಹುರಿದು ತೆಗೆದಿಟ್ಟು ಕೊಳ್ಳಿ. 
  3. ಆಮೇಲೆ ನೆಲಗಡಲೆಯನ್ನು ಹುರಿದು ತೆಗೆದಿಟ್ಟು ಕೊಳ್ಳಿ. 
  4. ನಂತರ ಒಂದು ಚಮಚ ಎಣ್ಣೆ ಹಾಕಿ ಮೆಣಸಿನಕಾಯಿ, ಕೊತ್ತಂಬರಿ ಬೀಜ, ಜೀರಿಗೆ, ಕಡಲೆಬೇಳೆ, ಉದ್ದಿನ ಬೇಳೆ ಮತ್ತು ಮೆಂತ್ಯವನ್ನು ಮಧ್ಯಮ ಉರಿಯಲ್ಲಿ ಬೇಳೆಗಳು ಕಂದು ಬಣ್ಣಕ್ಕೆ ಬರುವವರೆಗೆ ಹುರಿಯಿರಿ. 
  5. ಹುರಿದ ಎಳ್ಳು, ನೆಲಗಡಲೆ, ಮೆಣಸಿನಕಾಯಿ, ಕೊತ್ತಂಬರಿ ಬೀಜ, ಜೀರಿಗೆ, ಕಡಲೆಬೇಳೆ, ಉದ್ದಿನ ಬೇಳೆ, ಮೆಂತ್ಯ, ಹುರಿಗಡಲೆ ಮತ್ತು ತೆಂಗಿನ ತುರಿಯನ್ನು ಸ್ವಲ್ಪ ನೀರು ಸೇರಿಸಿ ಗಟ್ಟಿಯಾಗಿ ಅರೆದುಕೊಳ್ಳಿ. 
  6. ನಂತರ ಅದೇ ಬಾಣಲೆಗೆ ಉಳಿದ ಎಣ್ಣೆ ಹಾಕಿ ಸಾಸಿವೆ ಮತ್ತು ಕರಿಬೇವಿನ ಒಗ್ಗರಣೆ ಮಾಡಿ. ಕತ್ತರಿಸಿದ ಈರುಳ್ಳಿ ಹಾಕಿ ಬಾಡಿಸಿ. ಅರಶಿನ ಪುಡಿ ಸೇರಿಸಿ. 
  7. ಈಗ ಬದನೇಕಾಯಿಯೊಳಗೆ ಅರೆದ ಮಸಾಲೆ ತುಂಬಿಸಿ, ಬಾಣಲೆಯಲ್ಲಿದ್ದ ಒಗ್ಗರಣೆಯಲ್ಲಿಟ್ಟು ನೀರು ಹಾಕದೆ ಬೇಯಿಸಿ. ಆಗಾಗ ಬದನೆಕಾಯಿಯನ್ನು ತಿರುವುತ್ತಾ ಇರಿ. 
  8. ಬದನೇಕಾಯಿ ಸ್ವಲ್ಪ ಮೆತ್ತಗಾದ ಕೂಡಲೇ ಉಪ್ಪು, ಬೆಲ್ಲ ಮತ್ತು ಹುಣಿಸೆರಸ ಸೇರಿಸಿ ಬೇಯಿಸುವುದನ್ನು ಮುಂದುವರೆಸಿ. 
  9. ಬದನೇಕಾಯಿ ಸಂಪೂರ್ಣ ಮೆತ್ತಗಾದ ಮೇಲೆ ಉಳಿದ ಮಸಾಲೆ ಮತ್ತು ೧ ಕಪ್ ನೀರು ಸೇರಿಸಿ. ಒಮ್ಮೆ ಮಗುಚಿ, ಮುಚ್ಚಳ ಮುಚ್ಚಿ ೫ ನಿಮಿಷಗಳ ಕಾಲ ಬೇಯಿಸಿ. 
  10. ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಸ್ಟವ್ ಆಫ್ ಮಾಡಿ. ಚಪಾತಿ ಅಥವಾ ರೊಟ್ಟಿಯೊಂದಿಗೆ ಬಡಿಸಿ.


ಬುಧವಾರ, ಸೆಪ್ಟೆಂಬರ್ 21, 2016

moolangi parota recipe in Kannada | ಮೂಲಂಗಿ ಪರೋಟ ಮಾಡುವ ವಿಧಾನ

moolangi parota recipe in Kannada

Moolangi parota recipe in Kannada | ಮೂಲಂಗಿ ಪರೋಟ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. ಗೋಧಿ ಹಿಟ್ಟು (8 ದೊಡ್ಡ ಚಪಾತಿಗಾಗುವಷ್ಟು)
  2. 2 ಮಧ್ಯಮ ಗಾತ್ರದ ಮೂಲಂಗಿ 
  3. 1/4 ಟೀಸ್ಪೂನ್ ಗರಂ ಮಸಾಲಾ 
  4. 1/4 ಟೀಸ್ಪೂನ್ ಓಮ ಅಥವಾ ಅಜವೈನ್ 
  5.  1/2 - 1 ಟೀಸ್ಪೂನ್ ಅಚ್ಚ ಖಾರದ ಪುಡಿ
  6. 1/4 ಟೀಸ್ಪೂನ್ ಅರಶಿನ ಪುಡಿ 
  7. 1/2 ಚಮಚ ಜೀರಿಗೆ ಪುಡಿ 
  8. 1/2 ಚಮಚ ಸಾಸಿವೆ (ಒಗ್ಗರಣೆಗೆ) 
  9. 1/2 ಟೀಸ್ಪೂನ್ ಜೀರಿಗೆ (ಒಗ್ಗರಣೆಗೆ) 
  10. 10 ಟೀಸ್ಪೂನ್ ಅಡುಗೆ ಎಣ್ಣೆ
  11. ಉಪ್ಪು ರುಚಿಗೆ ತಕ್ಕಷ್ಟು

ಮೂಲಂಗಿ ಪರೋಟ ಮಾಡುವ ವಿಧಾನ:

  1. ಮೂಲಂಗಿಯನ್ನು ತೊಳೆದು ತುರಿಯಿರಿ. 
  2. ಒಂದು ಬಾಣಲೆಗೆ 2 ಟೀಸ್ಪೂನ್ ಎಣ್ಣೆ ಹಾಕಿ ಬಿಸಿ ಮಾಡಿ. 
  3. ಕಾದ ಎಣ್ಣೆಗೆ ಸಾಸಿವೆ ಮತ್ತು ಜೀರಿಗೆ ಹಾಕಿ. 
  4. ಸಾಸಿವೆ ಸಿಡಿದ ಕೂಡಲೇ ತುರಿದ ಮೂಲಂಗಿ ಹಾಕಿ ಒಂದು ನಿಮಿಷ ಮಧ್ಯಮ ಉರಿಯಲ್ಲಿ ಬಾಡಿಸಿ. 
  5. ನಂತರ ಅದಕ್ಕೆ ಉಪ್ಪು, ಅಚ್ಚ ಖಾರದ ಪುಡಿ, ಗರಂ ಮಸಾಲಾ, ಓಮ ಮತ್ತು ಜೀರಿಗೆ ಪುಡಿ ಹಾಕಿ ಕಲಸಿ. 
  6. ನಂತರ ಅದಕ್ಕೆ ಗೋಧಿ ಹಿಟ್ಟು ಹಾಕಿ. ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. 
  7. ಕೊನೆಯಲ್ಲಿ 4 ಚಮಚ ಎಣ್ಣೆ ಹಾಕಿ, ಪುನಃ ಒಮ್ಮೆ ಕಲಸಿ ಒಂದು ಹತ್ತು ನಿಮಿಷ ಮುಚ್ಚಿಡಿ.
  8. ಈಗ ಒಂದು ದೊಡ್ಡ ನಿಂಬೆ ಗಾತ್ರದ ಹಿಟ್ಟನ್ನು ತೆಗೆದುಕೊಂಡು, ಗೋಧಿ ಹಿಟ್ಟು ಮುಟ್ಟಿಸಿಕೊಂಡು ಚಪಾತಿಯಂತೆ ವೃತ್ತಾಕಾರವಾಗಿ ಲಟ್ಟಿಸಿ.
  9. ಒಂದು ಹೆಂಚು ಅಥವಾ ತವಾ ತೆಗೆದುಕೊಂಡು ಬಿಸಿ ಮಾಡಿ. ಲಟ್ಟಿಸಿದ ಪರೋಟವನ್ನು ತವಾ ಮೇಲೆ ಹಾಕಿ ಎರಡು ಬದಿ ಖಾಯಿಸಿ. ಖಾಯಿಸುವಾಗ ಎರಡೂ ಬದಿಯೂ ಸ್ವಲ್ಪ ತುಪ್ಪ ಅಥವಾ ಎಣ್ಣೆ ಹಾಕಿ. ಬಿಸಿ ಬಿಸಿಯಾಗಿರುವಾಗಲೇ ಮೊಸರು ಅಥವಾ ಬೆಣ್ಣೆ ಅಥವಾ ನಿಮ್ಮಿಷ್ಟದ ಗೊಜ್ಜು ಅಥವಾ ಪಲ್ಯದೊಂದಿಗೆ ಬಡಿಸಿ.

ಮಂಗಳವಾರ, ಸೆಪ್ಟೆಂಬರ್ 20, 2016

Congress kadlekai recipe in Kannada | ಕಾಂಗ್ರೆಸ್ ಕಡ್ಲೇಕಾಯಿ ಮಾಡುವ ವಿಧಾನ

Congress kadlekai recipe in Kannada

Congress kadlekai recipe in Kannada | ಕಾಂಗ್ರೆಸ್ ಕಡ್ಲೇಕಾಯಿ ಮಾಡುವ ವಿಧಾನ 

ಕಾಂಗ್ರೆಸ್ ಕಡ್ಲೇಕಾಯಿ ವಿಡಿಯೋ

    ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಶೇಂಗಾ ಅಥವಾ ಕಡ್ಲೆಕಾಯಿ 
  2. 1 ಟೀಸ್ಪೂನ್ ಎಣ್ಣೆ 
  3. 1/4 ಟೀಸ್ಪೂನ್ ಕೆಂಪು ಮೆಣಸಿನಕಾಯಿ ಪುಡಿ (ನಿಮ್ಮ ರುಚಿಗೆ ತಕ್ಕಂತೆ ಬದಲಾಯಿಸಿ) 
  4. 1/4 ಚಮಚ ಕಾಳುಮೆಣಸಿನ ಪುಡಿ (ನಿಮ್ಮ ರುಚಿಗೆ ತಕ್ಕಂತೆ ಬದಲಾಯಿಸಿ) 
  5. 1/4 ಟೀಸ್ಪೂನ್ ಮಾವಿನಕಾಯಿ ಪುಡಿ ಅಥವಾ ವಾಟೆಹುಳಿ ಅಥವಾ ಯಾವುದೇ ಹುಳಿ ಪುಡಿ (ಬೇಕಾದಲ್ಲಿ) 
  6. 2 ದೊಡ್ಡ ಚಿಟಿಕೆ ಅರಿಶಿನ ಪುಡಿ 
  7. 2 ದೊಡ್ಡ ಚಿಟಿಕೆ ಇಂಗು 
  8. 7 - 8 ಕರಿಬೇವಿನ ಎಲೆ 
  9. ಉಪ್ಪು ರುಚಿಗೆ ತಕ್ಕಷ್ಟು

ಕಾಂಗ್ರೆಸ್ ಕಡ್ಲೇಕಾಯಿ ಮಾಡುವ ವಿಧಾನ:

  1. ಒಂದು ದಪ್ಪ ತಳದ ಬಾಣಲೆಯಲ್ಲಿ ಕಡ್ಲೆಕಾಯಿಯನ್ನು ಸಣ್ಣ ಮಧ್ಯಮ ಉರಿಯಲ್ಲಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.
  2. ತಣ್ಣಗಾದ ನಂತರ ನೆಲಗಡಲೆ ಅಥವಾ ಕಡ್ಲೆಕಾಯಿಯ ಸಿಪ್ಪೆ ತೆಗೆದು, ಬೇಳೆಗಳಾಗಿ ಮಾಡಿ, ಸಿಪ್ಪೆ ಬೇರ್ಪಡಿಸಿ.
  3. ಒಂದು ಬಾಣಲೆಯಲ್ಲಿ 1 ಟೀಸ್ಪೂನ್ ಎಣ್ಣೆ ಬಿಸಿ ಮಾಡಿ, ಕರಿಬೇವನ್ನು ಹುರಿಯಿರಿ. 
  4. ಅದಕ್ಕೆ ಕೆಂಪು ಮೆಣಸಿನಕಾಯಿ ಪುಡಿ, ಕಾಳುಮೆಣಸಿನ ಪುಡಿ, ಮಾವಿನಕಾಯಿ ಪುಡಿ, ಅರಿಶಿನ ಮತ್ತು ಇಂಗು ಹಾಕಿ. 
  5. ನಂತರ ಹುರಿದು, ಸಿಪ್ಪೆ ತೆಗೆದ ಕಡ್ಲೆಕಾಯಿ ಹಾಕಿ ಸಣ್ಣ ಉರಿಯಲ್ಲಿ ಒಂದು ನಿಮಿಷ ಮಗುಚಿ. ಸ್ಟವ್ ಆಫ್ ಮಾಡಿ. 
  6. ಉಪ್ಪು ಹಾಕಿ ಒಮ್ಮೆ ಮಗುಚಿ.
  7. ತಣ್ಣಗಾದ ಮೇಲೆ ಕರಿಬೇವನ್ನು ಕೈಯಲ್ಲಿ ಪುಡಿಮಾಡಿ, ಚೆನ್ನಾಗಿ ಕಲಸಿ.

ಶನಿವಾರ, ಸೆಪ್ಟೆಂಬರ್ 17, 2016

Baby corn golden fry recipe in Kannada | ಬೇಬಿ ಕಾರ್ನ್ ಗೋಲ್ಡನ್ ಫ್ರೈ ಮಾಡುವ ವಿಧಾನ

Baby corn golden fry recipe in Kannada

Baby corn golden fry recipe in Kannada | ಬೇಬಿ ಕಾರ್ನ್ ಗೋಲ್ಡನ್ ಫ್ರೈ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 6 ಬೇಬಿ ಕಾರ್ನ್ ಅಥವಾ ಎಳೆ ಜೋಳ
  2. 2 ಟೇಬಲ್ ಚಮಚ ಮೈದಾ ಹಿಟ್ಟು
  3. 1 ಟೇಬಲ್ ಚಮಚ ಜೋಳದ ಹಿಟ್ಟು
  4. 1 ಟೇಬಲ್ ಚಮಚ ಅಕ್ಕಿ ಹಿಟ್ಟು
  5. 1/2 - 1 ಟೀಸ್ಪೂನ್ ಅಚ್ಚ ಖಾರದ ಪುಡಿ
  6. 1/2 ಟೀಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್ 
  7. 1/4 ಟೀಸ್ಪೂನ್ ಸೋಂಪು ಅಥವಾ ಬಡೆಸೋಂಪು
  8. 1 ಟೇಬಲ್ ಚಮಚ ಮೊಸರು
  9. ಸ್ವಲ್ಪ ನೀರು
  10. ಉಪ್ಪು ರುಚಿಗೆ ತಕ್ಕಷ್ಟು 
  11. ಎಣ್ಣೆ ಕಾಯಿಸಲು


ಬೇಬಿ ಕಾರ್ನ್ ಗೋಲ್ಡನ್ ಫ್ರೈ ಮಾಡುವ ವಿಧಾನ:

  1. ಬೇಬಿ ಕಾರ್ನ್ ಸಿಪ್ಪೆ ಸುಲಿಯಿರಿ. ಬೇಕಾದಲ್ಲಿ ಎರಡಾಗಿ ಸೀಳಿ ಅಥವಾ ಕತ್ತರಿಸಿ. 
  2. ಒಂದು ಬಟ್ಟಲಿನಲ್ಲಿ ಮೈದಾ, ಜೋಳದ ಹಿಟ್ಟು, ಅಕ್ಕಿ ಹಿಟ್ಟು, ಕೆಂಪು ಮೆಣಸಿನಕಾಯಿ ಪುಡಿ, ಉಪ್ಪು, ಸೋಂಪು ಮತ್ತು ಶುಂಠಿ ಬೆಳ್ಳುಳ್ಳಿ ಪೇಸ್ಟ್ ತೆಗೆದುಕೊಳ್ಳಿ. 
  3. ಸ್ವಲ್ಪ ನೀರು ಮತ್ತು 1 ಟೇಬಲ್ ಚಮಚ ಮೊಸರು ಸೇರಿಸಿ ಬೇಬಿ ಕಾರ್ನ್ ಗೆ ಹಿಟ್ಟು ಮತ್ತು ಮಸಾಲೆಗಳು ಚೆನ್ನಾಗಿ ಹೊಂದುವಂತೆ ಕಲಸಿಕೊಳ್ಳಿ. 
  4. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಹಿಟ್ಟು ಮತ್ತು ಮಸಾಲೆ ಹೊಂದಿಸಿದ ಬೇಬಿ ಕಾರ್ನ್ ಗಳನ್ನು ಬಿಸಿಯಾದ ಎಣ್ಣೆಯಲ್ಲಿ ಗರಿ ಗರಿಯಾಗುವವರೆಗೆ ಮತ್ತು ಹೊಂಬಣ್ಣ ಬರುವವರೆಗೆ ಕಾಯಿಸಿ.

ಬುಧವಾರ, ಸೆಪ್ಟೆಂಬರ್ 14, 2016

Bisi bele bath powder in Kannada | ಬಿಸಿ ಬೇಳೆ ಬಾತ್ ಪೌಡರ್ ಮಾಡುವ ವಿಧಾನ

Bisi bele bath powder in Kannada

Bisi bele bath powder in Kannada | ಬಿಸಿ ಬೇಳೆ ಬಾತ್ ಪೌಡರ್ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು:

  1. 10-15 ಒಣ ಮೆಣಸಿನಕಾಯಿ
  2. 4 ಟೀಸ್ಪೂನ್ ಕಡ್ಲೆ ಬೇಳೆ
  3. 8 ಟೀಸ್ಪೂನ್ ಉದ್ದಿನ ಬೇಳೆ
  4. 1 ಟೀಸ್ಪೂನ್ ಮೆಂತೆ
  5. 1 ಟೀಸ್ಪೂನ್ ಸಾಸಿವೆ
  6. 2 ಟೀಸ್ಪೂನ್ ಜೀರಿಗೆ
  7. 8 ಟೀಸ್ಪೂನ್ ಕೊತ್ತಂಬರಿ ಬೀಜ
  8. 1/4 ಟೀಸ್ಪೂನ್ ಇಂಗು
  9. 2 ಬೆರಳುದ್ದ ಚಕ್ಕೆ
  10. 2 ಟೀಸ್ಪೂನ್ ಲವಂಗ
  11. 4 ಏಲಕ್ಕಿ
  12. 4 ಟೀಸ್ಪೂನ್ ಗಸಗಸೆ
  13. 1 ಟೀಸ್ಪೂನ್ ಅಡುಗೆ ಎಣ್ಣೆ

ಬಿಸಿ ಬೇಳೆ ಬಾತ್ ಪೌಡರ್ ಮಾಡುವ ವಿಧಾನ:

  1. ಒಂದು ಬಾಣಲೆ ತೆಗೆದುಕೊಂಡು 1/2 ಚಮಚ ಎಣ್ಣೆ ಹಾಕಿ. ಸ್ಟೋವ್ ಮಧ್ಯಮ ಉರಿಯಲ್ಲಿಟ್ಟು, ಮೊದಲಿಗೆ ಒಣ ಮೆಣಸು ಹಾಕಿ ಹುರಿಯಿರಿ. 
  2. ನಂತರ ಮಿಕ್ಕೆಲ್ಲ ಪದಾರ್ಥಗಳನ್ನು ಒಂದೊಂದಾಗಿ ಹುರಿಯಿರಿ. ಮೊದಲಿಗೆ ಕಡ್ಲೆಬೇಳೆಯನ್ನು ಕಂದು ಬಣ್ಣ ಬರುವವರೆಗೆ ಹುರಿಯಿರಿ. 
  3. ಆಮೇಲೆ ಉದ್ದಿನ ಬೇಳೆಯನ್ನು ಕಂದು ಬಣ್ಣ ಬರುವವರೆಗೆ ಹುರಿಯಿರಿ. 
  4. ಉಳಿದ 1/2 ಚಮಚ ಎಣ್ಣೆ ಹಾಕಿ. ಮೆಂತೆ ಮತ್ತು ಸಾಸಿವೆಯನ್ನು ಸಾಸಿವೆ ಸಿಡಿಯುವವರೆಗೆ ಹುರಿಯಿರಿ. 
  5. ಜೀರಿಗೆ ಮತ್ತು ಕೊತ್ತಂಬರಿ ಬೀಜವನ್ನು ಘಮ್ಮನೆ ಸುವಾಸನೆ ಬರುವವರೆಗೆ ಹುರಿಯಿರಿ. 
  6. ಚಕ್ಕೆ, ಲವಂಗ, ಏಲಕ್ಕಿ, ಇಂಗು ಮತ್ತು ಗಸಗಸೆಯನ್ನುಕೆಲ ಸೆಕೆಂಡ್ ಗಳ ಕಾಲ ಹುರಿಯಿರಿ.
  7. ಹುರಿದ ಎಲ್ಲ ಪದಾರ್ಥಗಳು ತಣ್ಣಗಾದಮೇಲೆ ಮಿಕ್ಸಿ ಜಾರಿಗೆ ಹಾಕಿ ನುಣ್ಣನೆ ಪುಡಿ ಮಾಡಿ, ಗಾಳಿಯಾಡದ ಡಬ್ಬದಲ್ಲಿ ಎತ್ತಿಡಿ. ರುಚಿಕರ ಬಿಸಿಬೇಳೆ ಬಾತ್ ಮಾಡಲು ಉಪಯೋಗಿಸಿ.

ಬುಧವಾರ, ಸೆಪ್ಟೆಂಬರ್ 7, 2016

Gorikai kara recipe in Kannada | ಗೋರಿಕಾಯಿ ಖಾರ ಮಾಡುವ ವಿಧಾನ

Gorikai kara recipe in Kannada

Gorikai kara recipe in Kannada | ಗೋರಿಕಾಯಿ ಖಾರ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು:

  1. 250gm ಗೋರಿಕಾಯಿ 
  2. 1 ದೊಡ್ಡ ಈರುಳ್ಳಿ 
  3. 2 ದೊಡ್ಡ ಟೊಮೆಟೊ 
  4. 2-4 ಹಸಿರು ಮೆಣಸಿನಕಾಯಿ 
  5. 2 ಎಸಳು ಬೆಳ್ಳುಳ್ಳಿ 
  6. ಒಂದು ಚಿಟಿಕೆ ಅರಶಿನ ಪುಡಿ
  7. 3-4 ದೊಡ್ಡಪತ್ರೆ ಎಲೆಗಳು (ಬೇಕಾದಲ್ಲಿ) 
  8. 1/4 ಕಪ್ ತೆಂಗಿನ ತುರಿ 
  9. 1 ಟೇಬಲ್ ಸ್ಪೂನ್ ಕೊತ್ತುಂಬರಿ ಸೊಪ್ಪು (ಬೇಕಾದಲ್ಲಿ) 
  10. ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/4 ಟೀಸ್ಪೂನ್ ಸಾಸಿವೆ
  2. 1/4 ಟೀಸ್ಪೂನ್ ಜೀರಿಗೆ
  3. 4 - 5 ಕರಿಬೇವು
  4. 5-6 ಎಸಳು ಬೆಳ್ಳುಳ್ಳಿ ಜಜ್ಜಿದ್ದು
  5. 4 ಟೀಸ್ಪೂನ್ ಅಡುಗೆ ಎಣ್ಣೆ

ಗೋರಿಕಾಯಿ ಖಾರ ಮಾಡುವ ವಿಧಾನ:

  1. ಗೋರಿಕಾಯಿಯನ್ನು ತೊಳೆದು, ಕತ್ತರಿಸಿ. ಈರುಳ್ಳಿ ಮತ್ತು ಟೊಮ್ಯಾಟೋವನ್ನು ಸಹ ಕತ್ತರಿಸಿ.
  2. ಒಂದು ಕುಕ್ಕರ್ ನಲ್ಲಿ ಕತ್ತರಿಸಿದ ಗೋರಿಕಾಯಿ, ಈರುಳ್ಳಿ, ಟೊಮ್ಯಾಟೋ, ಹಸಿರು ಮೆಣಸಿನಕಾಯಿ, ಅರಶಿನ ಪುಡಿ  ಮತ್ತು ಎರಡು ಎಸಳು ಬೆಳ್ಳುಳ್ಳಿಯನ್ನು ತೆಗೆದುಕೊಳ್ಳಿ. 
  3. ಉಪ್ಪು ಮತ್ತು ನೀರು ಹಾಕಿ ಒಂದೆರಡು ವಿಷಲ್ ಮಾಡಿ ಬೇಯಿಸಿ. 
  4. ಬೇಯಿಸಿದ ತರಕಾರಿ ತಣ್ಣಗಾದ ನಂತರ ತೆಂಗಿನತುರಿಯೊಂದಿಗೆ ಅರೆದು ತೆಗೆದಿಟ್ಟುಕೊಳ್ಳಿ. 
  5. ಈಗ ಒಂದು ಬಾಣಲೆ ತೆಗೆದು ಕೊಂಡು, ಎಣ್ಣೆ, ಸಾಸಿವೆ, ಜೀರಿಗೆ, ಕರಿಬೇವು ಮತ್ತು ಜಜ್ಜಿದ ಬೆಳ್ಳುಳ್ಳಿಯ ಒಗ್ಗರಣೆ ಮಾಡಿ.
  6. ಅದಕ್ಕೆ ಅರೆದಿಟ್ಟ ತರಕಾರಿ ಮಿಶ್ರಣವನ್ನು ಹಾಕಿ ಕುದಿಸಿ. 
  7. ಬೇಕಾದಲ್ಲಿ ಕೊತ್ತುಂಬರಿ ಸೊಪ್ಪು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಸ್ಟವ್ ಆಫ್ ಮಾಡಿ. ಬಿಸಿ ಅನ್ನ, ಚಪಾತಿ ಅಥವಾ ರೊಟ್ಟಿಯೊಂದಿಗೆ ಬಡಿಸಿ.

ಸೋಮವಾರ, ಸೆಪ್ಟೆಂಬರ್ 5, 2016

alugadde-eerulli sambar in Kannada | ಆಲೂಗಡ್ಡೆ ಈರುಳ್ಳಿ ಸಾಂಬಾರ್ ಮಾಡುವ ವಿಧಾನ

alugadde-eerulli sambar in Kannada

alugadde-eerulli sambar in Kannada | ಆಲೂಗಡ್ಡೆ ಈರುಳ್ಳಿ ಸಾಂಬಾರ್ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು:

  1. 2 ಮಧ್ಯಮ ಗಾತ್ರದ ಆಲೂಗಡ್ಡೆ
  2. 2 ಮಧ್ಯಮ ಗಾತ್ರದ ಈರುಳ್ಳಿ
  3. 1/4 ಟೀಸ್ಪೂನ್ ಅರಿಶಿನ ಪುಡಿ
  4. ಒಂದು ಸಣ್ಣ ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು
  5. 2 ಟೀಸ್ಪೂನ್ ಕಲ್ಲುಪ್ಪು (ನಿಮ್ಮ ರುಚಿ ಪ್ರಕಾರ)

ಮಸಾಲೆಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 - 3/4 ಕಪ್ ತೆಂಗಿನ ತುರಿ (ಸಾಂಬಾರ್ ದಪ್ಪ ಅವಲಂಬಿಸಿ)
  2. 2 - 4 ಕೆಂಪು ಮೆಣಸಿನಕಾಯಿ
  3. 1 ಟೀಸ್ಪೂನ್ ಉದ್ದಿನ ಬೇಳೆ
  4. 2 ಟೀಸ್ಪೂನ್ ಕೊತ್ತಂಬರಿ ಬೀಜ
  5. 1/4 ಟೀಸ್ಪೂನ್ ಜೀರಿಗೆ
  6. 1/4 ಟೀಸ್ಪೂನ್ ಇಂಗು
  7. 1 ಟೀಸ್ಪೂನ್ ಅಡುಗೆ ಎಣ್ಣೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಕೆಂಪು ಮೆಣಸಿನಕಾಯಿ
  2. 5 - 6 ಕರಿಬೇವು
  3. 1/4 ಟೀಸ್ಪೂನ್ ಸಾಸಿವೆ
  4. 2 ಟೀಸ್ಪೂನ್ ಅಡುಗೆ ಎಣ್ಣೆ

ಆಲೂಗಡ್ಡೆ ಈರುಳ್ಳಿ ಸಾಂಬಾರ್ ಮಾಡುವ ವಿಧಾನ:

  1. ಆಲೂಗಡ್ಡೆಯನ್ನು ತೊಳೆದು, ಕತ್ತರಿಸಿ. ಈರುಳ್ಳಿಯನ್ನು ತೊಳೆದು, ಕತ್ತರಿಸಿ.
  2. ಒಂದು ಕುಕ್ಕರ್ ನಲ್ಲಿ ಕತ್ತರಿಸಿದ ಆಲೂಗಡ್ಡೆ ಮತ್ತು ಈರುಳ್ಳಿಯನ್ನು ತೆಗೆದುಕೊಳ್ಳಿ. ನೀರು, ಅರಶಿನ ಪುಡಿ ಮತ್ತು ಉಪ್ಪು ಹಾಕಿ ಒಂದೆರಡು ವಿಷಲ್ ಮಾಡಿ. 
  3. ಈಗ ಒಂದು ಬಾಣಲೆ ತೆಗೆದು ಕೊಂಡು, ಕೆಂಪು ಮೆಣಸಿನಕಾಯಿ, ಉದ್ದಿನಬೇಳೆ, ಕೊತ್ತಂಬರಿ ಬೀಜ ಮತ್ತು ಜೀರಿಗೆಯನ್ನು ಮಧ್ಯಮ ಉರಿಯಲ್ಲಿ 1 ಟೀಸ್ಪೂನ್ ಎಣ್ಣೆ ಹಾಕಿ ಹುರಿಯಿರಿ.
  4. ಉದ್ದಿನಬೇಳೆ ಹೊಂಬಣ್ಣಕ್ಕೆ ತಿರುಗಿದ ಕೂಡಲೇ ಇಂಗನ್ನು ಹಾಕಿ, ಒಮ್ಮೆ ಮಗುಚಿ ಸ್ಟವ್ ಆಫ್ ಮಾಡಿ. 
  5. ಹುರಿದ ಮಸಾಲೆ ಮತ್ತು ತೆಂಗಿನತುರಿಯನ್ನು ನೀರು ಸೇರಿಸಿ ಅರೆಯಿರಿ. 
  6. ಅರೆದ ಮಸಾಲೆಯನ್ನು ತರಕಾರಿ ಇರುವ ಕುಕ್ಕರ್ ಗೆ ಹಾಕಿ. 
  7. ಉಪ್ಪು ಮತ್ತು ಹುಣಿಸೆರಸ ಹಾಕಿ.
  8. ನಿಮಗೆ ಸಾಂಬಾರ್ ಎಷ್ಟು ದಪ್ಪ ಬೇಕೋ ಅಷ್ಟು ನೀರು ಸೇರಿಸಿ, ಮಗುಚಿ, ಒಂದು ಕುದಿ ಕುದಿಸಿ. 
  9. ಕೆಂಪು ಮೆಣಸು, ಸಾಸಿವೆ, ಕರಿಬೇವಿನ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಅಥವಾ ಇಡ್ಲಿಯೊಂದಿಗೆ ಬಡಿಸಿ.

ಶನಿವಾರ, ಸೆಪ್ಟೆಂಬರ್ 3, 2016

Easy chakli recipe in Kannada | ಚಕ್ಕುಲಿ ಮಾಡುವ ವಿಧಾನ

Easy chakkuli recipe in Kannada

Easy chakkuli recipe in Kannada | ಚಕ್ಕುಲಿ ಮಾಡುವ ವಿಧಾನ

Chakli recipe in Kannada

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1.25 ಕಪ್ ಅಕ್ಕಿ ಹಿಟ್ಟು 
  2. 0.25 ಕಪ್ ಉದ್ದಿನಬೇಳೆ 
  3. 1 ಟೀ ಸ್ಪೂನ್ ಜೀರಿಗೆ 
  4. 1 ಚಮಚ ಗಟ್ಟಿ ತುಪ್ಪ 
  5. ಉಪ್ಪು ರುಚಿಗೆ ತಕ್ಕಷ್ಟು 
  6. ಎಣ್ಣೆ ಚಕ್ಕುಲಿ ಕಾಯಿಸಲು

ಚಕ್ಕುಲಿ ಮಾಡುವ ವಿಧಾನ:

  1. ಉದ್ದಿನಬೇಳೆಯನ್ನು ತೊಳೆದು, ಒಂದಕ್ಕೆ ಮೂರರಷ್ಟು ನೀರು ಸೇರಿಸಿ ಕುಕ್ಕರ್ ನಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಿ. 
  2. ಬೇಯಿಸಿದ ಉದ್ದಿನಬೇಳೆ ಬಿಸಿ ಆರುವ ಸಮಯದಲ್ಲಿ ಅಕ್ಕಿ ಹಿಟ್ಟನ್ನು ಬಾಣಲೆಗೆ ಹಾಕಿ 3-4 ನಿಮಿಷ ಮಧ್ಯಮ ಉರಿಯಲ್ಲಿ ಹುರಿಯಿರಿ. ಗಮನಿಸಿ ಹೆಚ್ಚು ಹುರಿಯಬೇಡಿ. 
  3. ಹುರಿದ ಹಿಟ್ಟಿಗೆ ತುಪ್ಪ, ಜಜ್ಜಿದ ಜೀರಿಗೆ ಮತ್ತು ಉಪ್ಪು ಹಾಕಿ. ಚೆನ್ನಾಗಿ ಕಲಸಿ. 
  4. ಬೇಯಿಸಿದ ಉದ್ದಿನಬೇಳೆಯನ್ನು ಮಿಕ್ಸಿ ಜಾರಿಗೆ ಹಾಕಿ ನುಣ್ಣನೆ ಅರೆಯಿರಿ. 
  5. ಅರೆದ ಉದ್ದಿನಬೇಳೆಯನ್ನು ಅಕ್ಕಿ ಹಿಟ್ಟಿಗೆ ಹಾಕಿ ಗಟ್ಟಿ ಆದರೆ ಮೃದುವಾದ ಹಿಟ್ಟನ್ನು ಸಿದ್ಧ ಪಡಿಸಿಕೊಳ್ಳಿ. ಚಕ್ಕುಲಿ ಒತ್ತಲು ಆಗುವಷ್ಟು ಮೆತ್ತಗಿದ್ದರೆ ಸಾಕು. 
  6. ಪ್ಲಾಸ್ಟಿಕ್ ಹಾಳೆ ಮೇಲೆ ಚಕ್ಕುಲಿ ಅಚ್ಚನ್ನು ಉಪಯೋಗಿಸಿ ಚಕ್ಕುಲಿಯನ್ನು ಒತ್ತಿ. 
  7. ಎಣ್ಣೆ ಬಿಸಿ ಮಾಡಿ ಒತ್ತಿದ ಚಕ್ಕುಲಿಯನ್ನು ಮಧ್ಯಮ ಉರಿಯಲ್ಲಿ ಕಾಯಿಸಿ. ಸ್ವರ ಅಥವಾ ಗುಳ್ಳೆಗಳು ನಿಂತ ಮೇಲೆ ತೆಗೆಯಿರಿ.

Chakkuli recipe in Kannada | ಚಕ್ಕುಲಿ ಮಾಡುವ ವಿಧಾನ

Chakkuli recipe in Kannada

Chakkuli recipe in Kannada | ಚಕ್ಕುಲಿ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 2 ಕಪ್ ದೋಸೆ ಅಕ್ಕಿ
  2. 1/2 ಕಪ್ ಉದ್ದಿನಬೇಳೆ
  3. 1/2 ಕಪ್ ತೆಂಗಿನ ತುರಿ 
  4. 1 ಟೇಬಲ್ ಸ್ಪೂನ್ ಜೀರಿಗೆ
  5. 1 ನಿಂಬೆ ಗಾತ್ರದ ಬೆಣ್ಣೆ
  6. ಉಪ್ಪು ರುಚಿಗೆ ತಕ್ಕಷ್ಟು
  7. ಎಣ್ಣೆ ಚಕ್ಕುಲಿ ಕಾಯಿಸಲು

ಚಕ್ಕುಲಿ ಮಾಡುವ ವಿಧಾನ:

  1. ಅಕ್ಕಿಯನ್ನು ತೊಳೆದು, ನೀರು ಬಗ್ಗಿಸಿ, ಒಂದೆರಡು ಘಂಟೆ ನೀರಾರಲು ಬಿಡಿ. ನಂತರ ಅಕ್ಕಿಯನ್ನು ಮಧ್ಯಮ ಉರಿಯಲ್ಲಿ ಸ್ವಲ್ಪ ಬಿಳಿ ಬಣ್ಣ ಬರುವವರೆಗೆ ಹುರಿದು, ಬಿಸಿ ಆರಿದ ಮೇಲೆ ನುಣ್ಣನೆ ಪುಡಿ ಮಾಡಿ. 
  2. ಉದ್ದಿನಬೇಳೆಯನ್ನು ತೊಳೆದು, ನೀರು ಬಗ್ಗಿಸಿ, ಒಂದೆರಡು ಘಂಟೆ ನೀರಾರಲು ಬಿಡಿ. ನಂತರ ಉದ್ದಿನಬೇಳೆಯನ್ನು ಮಧ್ಯಮ ಉರಿಯಲ್ಲಿ ಕಂದು ಬಣ್ಣ ಬರುವವರೆಗೆ ಹುರಿದು, ಬಿಸಿ ಆರಿದ ಮೇಲೆ ನುಣ್ಣನೆ ಪುಡಿ ಮಾಡಿ. ಹಿಟ್ಟಿನ ಗಿರಣಿ ಅಥವಾ ಮಿಕ್ಸಿಯಲ್ಲೂ ಪುಡಿ ಮಾಡಬಹುದು. 
  3. ಅಕ್ಕಿ ಹಿಟ್ಟು ಮತ್ತು ಉದ್ದಿನ ಹಿಟ್ಟನ್ನು ಸಾರಣಿಸಿ ಕೊಳ್ಳಿ (ಜರಡಿ). 
  4. ಬೆಣ್ಣೆ, ಜಜ್ಜಿದ ಜೀರಿಗೆ ಮತ್ತು ಉಪ್ಪು ಹಾಕಿ.
  5. ಮಿಕ್ಸಿ ಜಾರಿಗೆ ತೆಂಗಿನ ತುರಿ, 1/4 ಚಮಚ ಜೀರಿಗೆ ಹಾಕಿ ಅವಶ್ಯವಿದ್ದಷ್ಟು ನೀರು ಉಪಯೋಗಿಸಿ ನುಣ್ಣನೆ ಅರೆಯಿರಿ. 
  6. ಅರೆದ ಕಾಯಿಯನ್ನು ಬೆಣ್ಣೆ ಮತ್ತು ಜೀರಿಗೆ ಹಾಕಿದ ಹಿಟ್ಟಿಗೆ ಹಾಕಿ ಗಟ್ಟಿ ಆದರೆ ಮೃದುವಾದ ಹಿಟ್ಟನ್ನು ಸಿದ್ಧ ಪಡಿಸಿಕೊಳ್ಳಿ. ಚಕ್ಕುಲಿ ಒತ್ತಲು ಆಗುವಷ್ಟು ಮೆತ್ತಗಿದ್ದರೆ ಸಾಕು.
  7. ಪ್ಲಾಸ್ಟಿಕ್ ಹಾಳೆ ಮೇಲೆ ಚಕ್ಕುಲಿ ಅಚ್ಚನ್ನು ಉಪಯೋಗಿಸಿ ಚಕ್ಕುಲಿಯನ್ನು ಒತ್ತಿ. 
  8. ಎಣ್ಣೆ ಬಿಸಿ ಮಾಡಿ ಒತ್ತಿದ ಚಕ್ಕುಲಿಯನ್ನು ಮಧ್ಯಮ ಉರಿಯಲ್ಲಿ ಕಾಯಿಸಿ. ಸ್ವರ ಅಥವಾ ಗುಳ್ಳೆಗಳು ನಿಂತ ಮೇಲೆ ತೆಗೆಯಿರಿ. 

ಗುರುವಾರ, ಸೆಪ್ಟೆಂಬರ್ 1, 2016

Kara kadubu recipe in Kannada | ಖಾರ ಕಡುಬು ಮಾಡುವ ವಿಧಾನ

Kara kadubu recipe in Kannada

Kara kadubu recipe in Kannada | ಖಾರ ಕಡುಬು ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಅಕ್ಕಿ ಹಿಟ್ಟು 
  2. 1.5 - 2 ಕಪ್ ನೀರು (ಅಕ್ಕಿ ಹಿಟ್ಟಿನ ಗುಣಮಟ್ಟ ಅವಲಂಬಿಸಿ)
  3. 1/4 ಕಪ್ ತೆಂಗಿನ ತುರಿ 
  4. 1/4 ಕಪ್ ಕಡಲೆಬೇಳೆ
  5. 1 - 2 ಹಸಿರು ಮೆಣಸಿನಕಾಯಿ 
  6. 1ಸೆಮೀ ಉದ್ದದ ಶುಂಠಿ 
  7. 2 ಟೇಬಲ್ ಚಮಚ ಕತ್ತರಿಸಿದ ಕೊತ್ತುಂಬರಿ ಸೊಪ್ಪು
  8. ದೊಡ್ಡ ಚಿಟಿಕೆ ಇಂಗು
  9. ಉಪ್ಪು ರುಚಿಗೆ ತಕ್ಕಷ್ಟು
  10. 2 ಟೀಸ್ಪೂನ್ ತುಪ್ಪ 
  11. ಪ್ಲಾಸ್ಟಿಕ್ ಹಾಳೆ ಅಥವಾ ಬಾಳೆ ಎಲೆ

ಖಾರ ಕಡುಬು ಮಾಡುವ ವಿಧಾನ :

  1. ಕಡಲೆಬೇಳೆಯನ್ನು 4 - 5 ಘಂಟೆಗಳ ಕಾಲ ನೆನೆಸಿಡಿ. 
  2. ಒಂದು ಬಾಣಲೆಯಲ್ಲಿ ನೀರು, 1/2 ಟೀಸ್ಪೂನ್ ತುಪ್ಪ ಮತ್ತು ಉಪ್ಪು ಹಾಕಿ ಕುದಿಯಲು ಇಡಿ. 
  3. ನೀರು ಕುದಿಯಲು ಪ್ರಾರಂಭಿಸಿದ ನಂತರ ಅಕ್ಕಿ ಹಿಟ್ಟನ್ನು ಹಾಕಿ, ಒಮ್ಮೆ ಚೆನ್ನಾಗಿ ಮಗುಚಿ ಸ್ಟವ್ ಆಫ್ ಮಾಡಿ. 
  4. ಮುಚ್ಚಳ ಮುಚ್ಚಿ ಪಕ್ಕಕ್ಕಿಡಿ. 
  5. ಮಿಕ್ಸಿ ಜಾರಿಗೆ ನೆನೆಸಿದ ಕಡಲೆಬೇಳೆ, ತೆಂಗಿನ ತುರಿ, ಹಸಿರು ಮೆಣಸಿನಕಾಯಿ, ಶುಂಠಿ, ಇಂಗು ಮತ್ತು ಉಪ್ಪು ಹಾಕಿ. ಬೇಕಾದಷ್ಟು ನೀರು ಹಾಕಿ ತರಿ ತರಿಯಾದ ದಪ್ಪ ಚಟ್ನಿ ಹದಕ್ಕೆ ರುಬ್ಬಿ.
  6. ರುಬ್ಬಿದ ಮಿಶ್ರಣವನ್ನು ೫ ನಿಮಿಷ ಆವಿಯಲ್ಲಿ ಬೇಯಿಸಿ. ನಂತರ ಚೆನ್ನಾಗಿ ಕಲಸಿ, ಪುಡಿ ಪುಡಿಯಾಗಿದ್ದಲ್ಲಿ ಸ್ವಲ್ಪ ನೀರು ಸೇರಿಸಿ, ಕಲಸಿ ಮೆತ್ತಗಿನ ಹೂರಣ ಸಿದ್ಧ ಮಾಡಿಟ್ಟು ಕೊಳ್ಳಿ. 
  7. ಇಷ್ಟು ಹೊತ್ತಿಗೆ ಅಕ್ಕಿ ಹಿಟ್ಟು ಬಿಸಿ ಆರಿರುತ್ತದೆ. ಆ ಹಿಟ್ಟನ್ನು ಚೆನ್ನಾಗಿ ನಾದಿ. ಹಿಟ್ಟು ಮೃದುವಾಗಿರಬೇಕು. 
  8. ಒಂದು ಲಿಂಬೆ ಗಾತ್ರದ ಹಿಟ್ಟು ತೆಗೆದು ಕೊಂಡು, ತುಪ್ಪ ಸವರಿದ ಪ್ಲಾಸ್ಟಿಕ್ ಹಾಳೆ ಅಥವಾ ಬಾಳೆ ಎಲೆ ಮೇಲೆ ವೃತ್ತಾಕಾರವಾಗಿ ತಟ್ಟಿ ಅಥವಾ ಲಟ್ಟಿಸಿ. 
  9. ಮಧ್ಯದಲ್ಲಿ ಹೂರಣ ಇಟ್ಟು, ಮಡಿಸಿ, ಅಂಚುಗಳನ್ನು ಒತ್ತಿ ಅಂಟಿಸಿ. 
  10. ಸೆಕೆಯಲ್ಲಿ (ಆವಿಯಲ್ಲಿ) ಬಾಳೆ ಎಲೆ ಅಥವಾ ತುಪ್ಪ ಹಚ್ಚಿದ ಪ್ಲೇಟ್ ನಲ್ಲಿಟ್ಟು 8 - 10 ನಿಮಿಷ ಬೇಯಿಸಿ. ಸವಿದು ಆನಂದಿಸಿ. 

Panchakajjaya recipe in Kannada | ಪಂಚಕಜ್ಜಾಯ ಮಾಡುವ ವಿಧಾನ

Panchakajjaya recipe in Kannada

Panchakajjaya recipe in Kannada | ಪಂಚಕಜ್ಜಾಯ ಮಾಡುವ ವಿಧಾನ 

ಪಂಚಕಜ್ಜಾಯ ವಿಡಿಯೋ

ಬೇಕಾಗುವ ಪದಾರ್ಥಗಳು - ವಿಧಾನ 1: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಕಡಲೆಬೇಳೆ 
  2. 1/2 ಕಪ್ ಸಣ್ಣದಾಗಿ ತುರಿದ ತೆಂಗಿನ ತುರಿ 
  3. 1/2 ಕಪ್ ಸಕ್ಕರೆ 
  4. 1/8 ಕಪ್ ಎಳ್ಳು 
  5. 1 ಟೇಬಲ್ ಚಮಚ ತುಪ್ಪ 
  6. 1 ಏಲಕ್ಕಿ

ಬೇಕಾಗುವ ಪದಾರ್ಥಗಳು - ವಿಧಾನ 2: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಕಡಲೆಬೇಳೆ 
  2. 1/4 ಕಪ್ ಸಣ್ಣದಾಗಿ ತುರಿದ ತೆಂಗಿನ ತುರಿ 
  3. 1 ಕಪ್ ಸಕ್ಕರೆ 
  4. 1/4 ಕಪ್ ಗೋಡಂಬಿ 
  5. 4 ಟೇಬಲ್ ಚಮಚ ತುಪ್ಪ 
  6. 2 ಏಲಕ್ಕಿ

ಪಂಚಕಜ್ಜಾಯ ಮಾಡುವ ವಿಧಾನ - 1:

  1. ಒಂದು ದಪ್ಪ ತಳದ ಬಾಣಲೆಯಲ್ಲಿ ಕಡ್ಲೆಬೇಳೆಯನ್ನು ಮಧ್ಯಮ ಉರಿಯಲ್ಲಿ ಕಂದು ಬಣ್ಣ ಬರುವವರೆಗೆ ಹುರಿದು ಪುಡಿ ಮಾಡಿ. 
  2. ನಂತರ ಎಳ್ಳನ್ನು ಹಾಕಿ ಮಧ್ಯಮ ಉರಿಯಲ್ಲಿ ಸಿಡಿಯುವವರೆಗೆ ಅಥವಾ ಚೆನ್ನಾಗಿ ಉಬ್ಬುವವರೆಗೆ ಹುರಿಯಿರಿ. ಎಳ್ಳು ಪುಡಿ ಮಾಡುವುದು ಬೇಡ. 
  3. ಸಕ್ಕರೆಯನ್ನು ಪುಡಿ ಮಾಡಿ. 
  4. ಒಂದು ಬಟ್ಟಲಿಗೆ ಪುಡಿ ಮಾಡಿದ ಕಡ್ಲೆಬೇಳೆ, ಎಳ್ಳು, ತೆಂಗಿನ ತುರಿ, ಪುಡಿಮಾಡಿದ ಸಕ್ಕರೆ, ತುಪ್ಪ ಮತ್ತು ಏಲಕ್ಕಿ ಪುಡಿ ಹಾಕಿ ಕಲಸಿ. ಪಂಚಕಜ್ಜಾಯ ಸಿದ್ಧ.

ಪಂಚಕಜ್ಜಾಯ ಮಾಡುವ ವಿಧಾನ - 2:

  1. ಒಂದು ದಪ್ಪ ತಳದ ಬಾಣಲೆಯಲ್ಲಿ ಕಡ್ಲೆಬೇಳೆಯನ್ನು ಮಧ್ಯಮ ಉರಿಯಲ್ಲಿ ಕಂದು ಬಣ್ಣ ಬರುವವರೆಗೆ ಹುರಿದು ಪುಡಿ ಮಾಡಿ. 
  2. ಸಕ್ಕರೆಯನ್ನು ಪುಡಿ ಮಾಡಿ. 
  3. ಸ್ವಲ್ಪ ತುಪ್ಪದಲ್ಲಿ ಚೂರು ಮಡಿದ ಗೋಡಂಬಿಯನ್ನು ಹುರಿದಿಟ್ಟು ಕೊಳ್ಳಿ. 
  4. ಒಂದು ಬಟ್ಟಲಿಗೆ ಪುಡಿ ಮಾಡಿದ ಕಡ್ಲೆಬೇಳೆ, ಗೋಡಂಬಿ, ತೆಂಗಿನ ತುರಿ, ಪುಡಿಮಾಡಿದ ಸಕ್ಕರೆ , ಬಿಸಿಮಾಡಿದ ತುಪ್ಪ ಮತ್ತು ಏಲಕ್ಕಿ ಪುಡಿ ಹಾಕಿ ಕಲಸಿ. ಪಂಚಕಜ್ಜಾಯ ಸಿದ್ಧ.


Related Posts Plugin for WordPress, Blogger...