ಶುಕ್ರವಾರ, ಜುಲೈ 29, 2016

Paneer recipe in Kannada | ಪನೀರ್ ಮಾಡುವ ವಿಧಾನ

Paneer recipe in Kannada

Paneer recipe in Kannada | ಪನೀರ್ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಲೀ ಹಾಲು 
  2. 1/4 ಕಪ್ ಮೊಸರು (ಹುಳಿಯಿದ್ದರೆ ಉತ್ತಮ) 
  3. 2 ಟೀಸ್ಪೂನ್ ನಿಂಬೆ ರಸ ಅಥವಾ ವಿನೆಗರ್
  4. 1/2 ಕಪ್ ಐಸ್ ಕ್ಯೂಬ್ಸ್ ಅಥವಾ ತಣ್ಣಗಿನ ನೀರು

ಪನೀರ್ ಮಾಡುವ ವಿಧಾನ:

  1. ಮೊದಲಿಗೆ ಹಾಲನ್ನು ಒಂದು ದೊಡ್ಡ ಪಾತ್ರೆಯಲ್ಲಿ ಕುದಿಸಿ. 
  2. ಕುದಿಯುವ ಹಾಲಿಗೆ ಮೊಸರು ಹಾಕಿ. ಕೆಲವು ಸೆಕೆಂಡ್ ಗಳಲ್ಲಿ ಹಾಲು ಒಡೆಯುತ್ತದೆ. ಮೊಸರು ಹಾಕಿದರೆ ಪನೀರ್ ಮೃದುವಾಗಿ ಬರುತ್ತದೆ. 
  3. ಹಾಲು ಒಡೆಯುತ್ತಿಲ್ಲವಾದಲ್ಲಿ ೧ ರಿಂದ ೨ ಚಮಚದಷ್ಟು ನಿಂಬೆರಸವನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸಿ. 
  4. ಹಾಲು ಒಡೆದ ಕೂಡಲೇ ಸ್ಟವ್ ಆಫ್ ಮಾಡಿ. ಮತ್ತು ಐಸ್ ಕ್ಯೂಬ್ಸ್ ಅಥವಾ ತಣ್ಣಗಿನ ನೀರನ್ನು ಹಾಕಿ. 
  5. ಒಡೆದ ಹಾಲನ್ನು ಬಟ್ಟೆಯ ಮೂಲಕ ಸೋಸಿ. ಗಂಟು ಕಟ್ಟಿ ಸ್ವಲ್ಪ ಹೊತ್ತು ನೀರಿಳಿಯಲು ಬಿಡಿ. 
  6. ನಂತರ ಅದನ್ನು ಯಾವುದಾದರೂ ಮಣೆ ಅಥವಾ ಪ್ಲೇಟ್ ಮೇಲಿಟ್ಟು ಮೇಲಿಂದ ಭಾರವಾದ ವಸ್ತುವನ್ನಿಡಿ. ೩೦ - ೪೦ ನಿಮಿಷದ ನಂತ್ರ ಪನೀರ್ ಸಿದ್ಧ. ನಿಮಗೆ ಹೇಗೆ ಬೇಕೋ ಹಾಗೆ ಉಪಯೋಗಿಸಿ.


To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಗುರುವಾರ, ಜುಲೈ 28, 2016

Carrot thambuli recipe in Kannada | ಕ್ಯಾರೆಟ್ ತಂಬುಳಿ ಮಾಡುವ ವಿಧಾನ

Carrot thambuli recipe in Kannada

Carrot sasive recipe in Kannada | ಕ್ಯಾರೆಟ್ ತಂಬುಳಿ ಮಾಡುವ ವಿಧಾನ 


ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ದೊಡ್ಡ ಕ್ಯಾರಟ್ 
  2. 1/2 ಕಪ್ ತೆಂಗಿನ ತುರಿ 
  3. 1/4 ಟೀಸ್ಪೂನ್ ಸಾಸಿವೆ
  4. 1 ಕೆಂಪು ಮೆಣಸಿನಕಾಯಿ
  5. 1 ಕಪ್ ಮೊಸರು 
  6. ಉಪ್ಪು ನಿಮ್ಮ ರುಚಿಗೆ ತಕ್ಕಷ್ಟು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/4 ಚಮಚ ಸಾಸಿವೆ
  2. 1 ಕೆಂಪು ಮೆಣಸಿನಕಾಯಿ
  3. 2 ಟೀಸ್ಪೂನ್ ಅಡುಗೆ ಎಣ್ಣೆ

ಕ್ಯಾರೆಟ್ ತಂಬುಳಿ ಮಾಡುವ ವಿಧಾನ:

  1. ಕ್ಯಾರಟ್ ನ್ನು ತೊಳೆದು ತುರಿಯಿರಿ. 
  2. ತೆಂಗಿನ ತುರಿ , ಸಾಸಿವೆ ಮತ್ತು ಕೆಂಪು ಮೆಣಸಿನ ಕಾಯಿಯನ್ನು ಮಿಕ್ಸಿಯಲ್ಲಿ ನಯವಾಗಿ ಅರೆದುಕೊಳ್ಳಿ  
  3. ಅದಕ್ಕೆ ತುರಿದ ಕ್ಯಾರಟ್ ಹಾಕಿ ಒಂದೆರಡು ಸುತ್ತು ಅರೆದು ತೆಗೆಯಿರಿ.
  4. ಒಂದು ಬಟ್ಟಲಿಗೆ ಹಾಕಿ ಮೊಸರು ಮತ್ತು ಉಪ್ಪು ಸೇರಿಸಿ. 
  5. ಕೆಂಪು ಮೆಣಸಿನಕಾಯಿ , ಸಾಸಿವೆಯ ಒಗ್ಗರಣೆ ಮಾಡಿ ಸೇರಿಸಿ . ಬಿಸಿಯಾದ ಅನ್ನದೊಂದಿಗೆ ಬಡಿಸಿ.


To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಬುಧವಾರ, ಜುಲೈ 27, 2016

Thondekai palya recipe in Kannada | ತೊಂಡೆಕಾಯಿ ಒಣ ಪಲ್ಯ ಮಾಡುವ ವಿಧಾನ




Thondekai palya recipe in Kannada

Thondekai palya recipe in Kannada | ತೊಂಡೆಕಾಯಿ ಒಣ ಪಲ್ಯ ಮಾಡುವ ವಿಧಾನ

ತೊಂಡೆಕಾಯಿ ಒಣ ಪಲ್ಯ ವಿಡಿಯೋ


ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 250gm ತೊಂಡೆಕಾಯಿ 
  2. 4 ಟೀಸ್ಪೂನ್ ಅಡುಗೆ ಎಣ್ಣೆ 
  3. 1/2 ಚಮಚ ಸಾಸಿವೆ 
  4. 1/2 ಟೀಸ್ಪೂನ್ ಜೀರಿಗೆ 
  5. ಒಂದು ದೊಡ್ಡ ಚಿಟಿಕೆ ಅರಿಶಿನ ಪುಡಿ 
  6. ಒಂದು ದೊಡ್ಡ ಚಿಟಿಕೆ ಇಂಗು 
  7. 4 - 5 ಕರಿಬೇವಿನ ಎಲೆ 
  8. 1/2 - 1 ಟೀಸ್ಪೂನ್ ಅಚ್ಚ ಖಾರದ ಪುಡಿ 
  9. 1 ಟೀಸ್ಪೂನ್ ಧನಿಯಾ ಪುಡಿ 
  10. 1/4 ಟೀಸ್ಪೂನ್ ಜೀರಿಗೆ ಪುಡಿ 
  11. 1/4 ಟೀಸ್ಪೂನ್ ಮಾವಿನಕಾಯಿ ಪುಡಿ ಅಥವಾ ವಾಟೆ ಹುಳಿ ಅಥವಾ ದಪ್ಪ ಹುಣಿಸೇಹಣ್ಣು ರಸ 
  12. 1/4 ಕಪ್ ತೆಂಗಿನಕಾಯಿ ತುರಿ (ನೀರು ಹಾಕದೆ ಪುಡಿ ಮಾಡಿಟ್ಟು ಕೊಳ್ಳಿ)
  13. ಉಪ್ಪು ರುಚಿಗೆ ತಕ್ಕಷ್ಟು

ತೊಂಡೆಕಾಯಿ ಒಣ ಪಲ್ಯ ಮಾಡುವ ವಿಧಾನ:

  1. ತೊಂಡೆಕಾಯಿಯನ್ನು ತೊಳೆದು, ತುದಿ ಬುಡ ತೆಗೆದು, 1/2cm ದಪ್ಪದ ಗಾಲಿಗಳನ್ನಾಗಿ ಕತ್ತರಿಸಿ. 
  2. ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ. ಸಾಸಿವೆ, ಜೀರಿಗೆ, ಅರಿಶಿನ ಪುಡಿ, ಇಂಗು ಮತ್ತು ಕರಿಬೇವಿನ ಒಗ್ಗರಣೆ ಮಾಡಿ. 
  3. ಅದಕ್ಕೆ ಕತ್ತರಿಸಿದ ತೊಂಡೆಕಾಯಿ ಹಾಕಿ ಸಣ್ಣ ಉರಿಯಲ್ಲಿ ಮುಚ್ಚಳ ಮುಚ್ಚಿ ಬೇಯಿಸಿ. ಆಗಾಗ್ಯೆ ಮಗುಚುತ್ತಾ ಇರಿ. 
  4. ನಂತರ ಅಚ್ಚ ಖಾರದ ಪುಡಿ, ಧನಿಯಾ ಪುಡಿ, ಜೀರಿಗೆ ಪುಡಿ ಮತ್ತು ಮಾವಿನಕಾಯಿ ಪುಡಿ ಹಾಕಿ ಮಗುಚಿ. 
  5. ಕೊನೆಯಲ್ಲಿ ಪುಡಿ ಮಾಡಿದ ತೆಂಗಿನ ತುರಿ ಮತ್ತು ಉಪ್ಪು ಸೇರಿಸಿ ಮಗುಚಿ. ಸ್ಟವ್ ಆಫ್ ಮಾಡಿ. ಅನ್ನ ಅಥವಾ ಚಪಾತಿಯೊಂದಿಗೆ ಬಡಿಸಿ.

ಮಂಗಳವಾರ, ಜುಲೈ 26, 2016

Sukka girmit recipe in Kannada | ಸುಕ್ಕ ಗಿರ್ಮಿಟ್ ಮಾಡುವ ವಿಧಾನ

Sukka girmit recipe in Kannada

Sukka girmit recipe in Kannada | ಸುಕ್ಕ ಗಿರ್ಮಿಟ್ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 1 ಕಪ್ ಮಂಡಕ್ಕಿ 
  2. 2 ಟೇಬಲ್ ಚಮಚ ಕಡಲೇಕಾಯಿ ಅಥವಾ ಶೇಂಗಾ 
  3. 1/4 ಟೀಸ್ಪೂನ್ ಸಾಸಿವೆ 
  4. 1/4 ಟೀಸ್ಪೂನ್ ಜೀರಿಗೆ 
  5. 3 - 4 ಕರಿಬೇವಿನ ಎಲೆ 
  6. 1 ಕತ್ತರಿಸಿದ ಹಸಿರು ಮೆಣಸಿನಕಾಯಿ ಅಥವಾ 1/2 ಟೀಸ್ಪೂನ್ ಹಸಿರು ಮೆಣಸಿನಕಾಯಿ ಪೇಸ್ಟ್ 
  7. ಒಂದು ದೊಡ್ಡ ಚಿಟಿಕೆ ಅರಿಶಿನ ಪುಡಿ 
  8. 1/2 ಸಣ್ಣದಾಗಿ ಹೆಚ್ಚಿದ ಈರುಳ್ಳಿ
  9. 1/2 ಟೀಸ್ಪೂನ್ ಸಕ್ಕರೆ 
  10. 1/2 - 1 ಚಮಚ ನಿಂಬೆ ರಸ 
  11. 2 ಟೇಬಲ್ ಚಮಚ ಪುಟಾಣಿ ಹಿಟ್ಟು ಅಥವಾ ಹುರಿಗಡಲೆ ಪುಡಿ
  12. 1 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು (ಬೇಕಾದಲ್ಲಿ)
  13. 2 ಟೀಸ್ಪೂನ್ ಅಡುಗೆ ಎಣ್ಣೆ 
  14. ಉಪ್ಪು ರುಚಿಗೆ ತಕ್ಕಷ್ಟು

ಸುಕ್ಕ ಗಿರ್ಮಿಟ್ ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಕಡಲೇಕಾಯಿ ಅಥವಾ ಶೇಂಗಾವನ್ನು ಹುರಿದುಕೊಳ್ಳಿ. 
  2. ಅದಕ್ಕೆ ಸಾಸಿವೆ, ಜೀರಿಗೆ, ಕರಿಬೇವಿನ ಎಲೆ ಮತ್ತು ಅರಿಶಿನ ಪುಡಿ ಸೇರಿಸಿ ಒಗ್ಗರಣೆ ಮಾಡಿ. 
  3. ನಂತರ ಹೆಚ್ಚಿದ ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿ ಹಾಕಿ ಬಾಡಿಸಿ. 
  4. ಕೊನೆಯಲ್ಲಿ ಉಪ್ಪು, ಸಕ್ಕರೆ ಮತ್ತು ನಿಂಬೆ ರಸ ಸೇರಿಸಿ. ಸ್ಟವ್ ಆಫ್ ಮಾಡಿ. 
  5. ತಣ್ಣಗಾದ ನಂತರ ಮಂಡಕ್ಕಿ, ಹುರಿಗಡಲೆ ಪುಡಿ (ಪುಟಾಣಿ ಹಿಟ್ಟು) ಮತ್ತು ಕೊತ್ತಂಬರಿ ಸೊಪ್ಪು  ಹಾಕಿ. ಚೆನ್ನಾಗಿ ಕಲಸಿ ಕೂಡಲೇ ಸವಿಯಿರಿ. 

ಸೋಮವಾರ, ಜುಲೈ 25, 2016

Shavige uppittu recipe in Kannada | ಶಾವಿಗೆ ಉಪ್ಪಿಟ್ಟು ಮಾಡುವ ವಿಧಾನ

Shavige uppittu recipe in Kannada

Shavige uppittu recipe in Kannada | ಶಾವಿಗೆ ಉಪ್ಪಿಟ್ಟು ಮಾಡುವ ವಿಧಾನ 

ಶಾವಿಗೆ ಉಪ್ಪಿಟ್ಟು ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 1.5 ಕಪ್ ಶಾವಿಗೆ 
  2. 3 ಕಪ್ ನೀರು
  3. 1/2 ಟೀಸ್ಪೂನ್ ಸಾಸಿವೆ
  4. 1 ಟೀಸ್ಪೂನ್ ಉದ್ದಿನಬೇಳೆ
  5. 1 ಟೀಸ್ಪೂನ್ ಕಡ್ಲೆಬೇಳೆ
  6. 1 ದೊಡ್ಡ ಈರುಳ್ಳಿ
  7. 1 ಟೊಮ್ಯಾಟೋ 
  8. 1-2 ಹಸಿರು ಮೆಣಸಿನಕಾಯಿ
  9. 5-6 ಕರಿ ಬೇವಿನ ಎಲೆ
  10. 1 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಶುಂಠಿ
  11. 1/4 ಟೀಸ್ಪೂನ್ ಅರಶಿನ ಪುಡಿ
  12. 6-8 ಟೀಸ್ಪೂನ್ ಅಡುಗೆ ಎಣ್ಣೆ
  13. 1 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
  14. 2 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
  15. 1/2 ಕಪ್ ತೆಂಗಿನತುರಿ

ಶಾವಿಗೆ ಉಪ್ಪಿಟ್ಟು ಮಾಡುವ ವಿಧಾನ:

  1. ಶಾವಿಗೆಯನ್ನು ಮಧ್ಯಮ ಉರಿಯಲ್ಲಿ ಹೊಂಬಣ್ಣ ಬರುವವರೆಗೆ ಹುರಿಯಿರಿ.
  2. ಈರುಳ್ಳಿ, ಟೊಮ್ಯಾಟೋ, ಶುಂಠಿ, ಕೊತ್ತಂಬರಿ ಸೊಪ್ಪು ಮತ್ತು ಹಸಿರು ಮೆಣಸಿನಕಾಯಿ ಕತ್ತರಿಸಿಟ್ಟು ಕೊಳ್ಳಿ. ಬೇರೆ ಎಲ್ಲ ಪದಾರ್ಥಗಳನ್ನು ಸಿದ್ಧ ಮಾಡಿಟ್ಟು ಕೊಳ್ಳಿ.
  3. ಒಂದು ಬಾಣಲೆ ಬಿಸಿಮಾಡಿ, ಎಣ್ಣೆ, ಸಾಸಿವೆ, ಉದ್ದಿನಬೇಳೆ ಮತ್ತು ಕಡ್ಲೆಬೇಳೆ ಹಾಕಿ. 
  4. ಸಾಸಿವೆ ಸಿಡಿದ ಕೂಡಲೇ ಕರಿಬೇವು, ಕತ್ತರಿಸಿದ ಶುಂಠಿ, ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿ ಸೇರಿಸಿ. ಈರುಳ್ಳಿ ಮೆತ್ತಗಾಗುವವರೆಗೆ ಮಧ್ಯಮ ಉರಿಯಲ್ಲಿ ಹುರಿಯಿರಿ.
  5. ಈರುಳ್ಳಿ ಮೆತ್ತಗಾದ ಮೇಲೆ ಟೊಮ್ಯಾಟೋ ಹಾಕಿ. 
  6. ಉಪ್ಪು ಮತ್ತು ಅರಶಿನ ಪುಡಿ ಸೇರಿಸಿ.  ಟೊಮ್ಯಾಟೋ ಮೆತ್ತಗಾಗುವವರೆಗೆ ಹುರಿಯಿರಿ.
  7. ಅಳತೆ ಪ್ರಕಾರ ನೀರು ಹಾಕಿ ಕುದಿಸಿ. ನೀರು ಕುದಿಯಲು ಪ್ರಾರಂಭವಾದ ಕೂಡಲೇ ಹುರಿದಿಟ್ಟ ಶಾವಿಗೆ ಹಾಕಿ ಮಗುಚಿ. 
  8. ಒಂದು ನಿಮಿಷದ ನಂತರ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಬೇಯಲು ಬಿಡಿ. 
  9. ನೀರಾರುತ್ತ ಬಂದಾಗ ಮುಚ್ಚಳ ತೆಗೆದು ತೆಂಗಿನತುರಿ, ಕೊತ್ತಂಬರಿ ಸೊಪ್ಪು ಸೇರಿಸಿ ಮಗುಚಿ. ಪುನಃ ಮುಚ್ಚಳ ಮುಚ್ಚಿ, 2-3 ನಿಮಿಷಗಳ ಕಾಲ ಬೇಯಲು ಬಿಡಿ.  ಸ್ಟವ್ ಆಫ್ ಮಾಡಿ. 5 ನಿಮಿಷಗಳ ನಂತರ ಬಡಿಸಿ. 


ಶನಿವಾರ, ಜುಲೈ 23, 2016

Pathrode recipe in Kannada | ಪತ್ರೊಡೆ ಮಾಡುವ ವಿಧಾನ

Pathrode recipe in Kannada

Pathrode recipe in Kannada | ಪತ್ರೊಡೆ ಮಾಡುವ ವಿಧಾನ

ಪತ್ರೊಡೆ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 16 ಮಾಧ್ಯಮ ಗಾತ್ರದ ಕೆಸುವಿನ ಎಲೆಗಳು
  2. 2 ಕಪ್ ದೋಸೆ ಅಕ್ಕಿ
  3. 6 - 8 ಒಣ ಮೆಣಸಿನಕಾಯಿ
  4. 4 ಟೀಸ್ಪೂನ್ ಕೊತ್ತಂಬರಿ ಬೀಜ
  5. 1 ಟೀಸ್ಪೂನ್ ಜೀರಿಗೆ
  6. 1/2 ಕಪ್ ತೆಂಗಿನ ತುರಿ
  7. 1 ನಿಂಬೆ ಗಾತ್ರದ ಬೆಲ್ಲ
  8. 1 ನಿಂಬೆ ಗಾತ್ರದ ಹುಣಸೆ ಹಣ್ಣು
  9. ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಟೀಸ್ಪೂನ್ ಸಾಸಿವೆ
  2. 1 ಟೀಸ್ಪೂನ್ ಉದ್ದಿನಬೇಳೆ
  3. 1 ಒಣ ಮೆಣಸಿನ ಕಾಯಿ
  4. 1/2 ಕಪ್ ತೆಂಗಿನ ತುರಿ
  5. 1/2 ಕಪ್ ಪುಡಿ ಮಾಡಿದ ಬೆಲ್ಲ
  6. 5 - 6 ಕರಿಬೇವಿನ ಎಲೆ
  7. 4 ಟೇಬಲ್ಸ್ಪೂನ್ ಅಡುಗೆ ಎಣ್ಣೆ

ಪತ್ರೊಡೆ ಮಾಡುವ ವಿಧಾನ:

  1. ಅಕ್ಕಿಯನ್ನು ಕನಿಷ್ಟ ನಾಲ್ಕು ಗಂಟೆ ನೆನೆಸಿಟ್ಟುಕೊಳ್ಳಬೇಕು. ನಂತರ ಅದನ್ನು ರುಬ್ಬುವಾಗ ಕೊತ್ತಂಬರಿ ಬೀಜ, ಒಣ ಮೆಣಸಿನಕಾಯಿ, ತೆಂಗಿನತುರಿ, ಜೀರಿಗೆ, ಹುಣಸೆ ಹಣ್ಣು ಮತ್ತು ಉಪ್ಪು ಹಾಕಿ ನುಣ್ಣಗೆ ರುಬ್ಬಬೇಕು. ಹಿಟ್ಟು ದೋಸೆ ಹಿಟ್ಟಿನಷ್ಟು ದಪ್ಪವಿರಲಿ.
  2. ಕೆಸುವಿನ ಎಲೆಗಳನ್ನು ಸ್ವಚ್ಛ ಮಾಡಿಕೊಳ್ಳಿ. ನಂತರ ಅರೆದ ಹಿಟ್ಟನ್ನು ಕೆಸುವಿನ ಎಲೆಗಳ ಮೇಲೆ ಹಚ್ಚಿ. ಒಂದರ ಮೇಲೊಂದರಂತೆ 4 ಎಲೆಗಳನ್ನಿಡುತ್ತಾ ಹಿಟ್ಟನ್ನು ಹಚ್ಚಿ. ಸುತ್ತಿ ಸೆಕೆಯಲ್ಲಿ ಒಂದು ಘಂಟೆ ಬೇಯಿಸಿ. 
  3. ಬೆಂದ ನಂತರ ಬಿಲ್ಲೆಗಳಾಗಿ ಕತ್ತರಿಸಿ. ಹೆಂಚು ಅಥವಾ ನಾನ್ ಸ್ಟಿಕ್ ಪ್ಯಾನ್ ನಲ್ಲಿ ಎಣ್ಣೆ ಹಾಕಿ ಎರಡು ಬದಿ ಕಾಯಿಸಿ. 
  4. ಅಥವಾ ಕೆಸುವಿನ ಎಲೆಗಳನ್ನು ಸಣ್ಣದಾಗಿ ಕತ್ತರಿಸಿ. ಹಿಟ್ಟಿನೊಂದಿಗೆ ಕಲಸಿ. ಇಡ್ಲಿ ತಟ್ಟೆಯಲ್ಲಿಟ್ಟು 45 ನಿಮಿಷಗಳ ಕಾಲ ಬೇಯಿಸಿ. 
  5. ಬೆಂದ ನಂತರ ಪುಡಿ ಮಾಡಿಕೊಳ್ಳಿ. 
  6. ಸಾಸಿವೆ, ಉದ್ದಿನಬೇಳೆ, ಮೆಣಸಿನ ಕಾಯಿ, ಕರಿಬೇವಿನ ಎಲೆ ಮತ್ತು ಎಣ್ಣೆಯ ಒಗ್ಗರಣೆ ಮಾಡಿಕೊಳ್ಳಿ. 
  7. ಪುಡಿಮಾಡಿದ ಪತ್ರೊಡೆ ಹಾಕಿ ಮಗುಚಿ. 
  8. ತೆಂಗಿನ ತುರಿ ಮತ್ತು ಪುಡಿ ಮಾಡಿದ ಬೆಲ್ಲ ಹಾಕಿ, ಚೆನ್ನಾಗಿ ಮಗುಚಿ ಬಡಿಸಿ.

ಶುಕ್ರವಾರ, ಜುಲೈ 22, 2016

Tharakari sagu recipe in Kannada | ತರಕಾರಿ ಸಾಗು ಮಾಡುವ ವಿಧಾನ

Tharakari sagu recipe in Kannada

Tharakari sagu recipe in Kannada | ತರಕಾರಿ ಸಾಗು ಮಾಡುವ ವಿಧಾನ 

 ತರಕಾರಿ ಸಾಗು ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ದೊಡ್ಡಕ್ಯಾರೆಟ್
  2. 1 ಆಲೂಗಡ್ಡೆ
  3. 8-10 ಬೀನ್ಸ್
  4. 1 ನವಿಲ್ ಕೋಸು / ಸ್ವಲ್ಪ ಕೋಸು
  5. 1/4 ಕಪ್ ನೆನೆಸಿದ ಬಟಾಣಿ
  6. 1 ದೊಡ್ಡ ಈರುಳ್ಳಿ
  7. 1  ಟೊಮ್ಯಾಟೋ
  8. 1/4 ಟೀಸ್ಪೂನ್ ಅರಶಿನ ಪುಡಿ (ಬೇಕಾದಲ್ಲಿ)
  9. 4 ಟೀಸ್ಪೂನ್ ಅಡುಗೆ ಎಣ್ಣೆ
  10. 1/4 ಟೀಸ್ಪೂನ್ ಸಾಸಿವೆ
  11. 1/2 ಟೀಸ್ಪೂನ್ ಉದ್ದಿನ ಬೇಳೆ
  12. 4 - 5 ಕರಿಬೇವಿನ ಎಲೆ
  13. ಉಪ್ಪು ರುಚಿಗೆ ತಕ್ಕಷ್ಟು

ಬೇಕಾಗುವ ಪದಾರ್ಥಗಳು (ಮಸಾಲೆಗೆ):

  1. 1/2 ಕಪ್ ತೆಂಗಿನತುರಿ
  2. 1 ಸೆಮೀ ಉದ್ದದ ಶುಂಠಿ
  3. 3 ಎಸಳು ಬೆಳ್ಳುಳ್ಳಿ
  4. 1 ಟೀಸ್ಪೂನ್ ಕೊತ್ತಂಬರಿ ಬೀಜ
  5. 1/2 ಟೀಸ್ಪೂನ್ ಜೀರಿಗೆ
  6. 2 ಟೇಬಲ್ ಸ್ಪೂನ್ ಹುರಿಗಡಲೆ 
  7. 1 ಟೀಸ್ಪೂನ್ ಗಸಗಸೆ 
  8. 1 - 2 ಹಸಿರುಮೆಣಸಿನಕಾಯಿ
  9. 1/2 ಬೆರಳುದ್ದ ಚಕ್ಕೆ
  10. 4 - 5 ಲವಂಗ
  11. 1 ಏಲಕ್ಕಿ
  12. 2 ಟೇಬಲ್ ಸ್ಪೂನ್ ಕತ್ತರಿಸಿದ ಕೊತ್ತಂಬರಿ ಸೊಪ್ಪು

ತರಕಾರಿ ಸಾಗು ಮಾಡುವ ವಿಧಾನ:

  1. ಎಲ್ಲ ತರಕಾರಿಗಳನ್ನು ತೊಳೆದು ಕತ್ತರಿಸಿಕೊಳ್ಳಿ. ಕತ್ತರಿಸಿದ ಕ್ಯಾರೆಟ್, ಆಲೂಗಡ್ಡೆ, ಬೀನ್ಸ್, ನವಿಲ್ ಕೋಸು, ಬಟಾಣಿಯನ್ನು ಕುಕ್ಕರ್ಗೆ ಹಾಕಿ ಬೇಯಿಸಿಕೊಳ್ಳಿ. 
  2. ಮಸಾಲೆಗೆ ಪಟ್ಟಿ ಮಾಡಿದ ಎಲ್ಲ ಪದಾರ್ಥಗಳನ್ನು ಒಂದು ಕಪ್ ನೀರು ಬಳಸಿಕೊಂಡು ಮಿಕ್ಸಿಯಲ್ಲಿ ಅರೆದು ಕೊಳ್ಳಿ.
  3. ಈಗ ಒಂದು ಬಾಣಲೆ ತೆಗೆದುಕೊಂಡು ಎಣ್ಣೆ ಹಾಕಿ ಬಿಸಿ ಮಾಡಿ. ಸಾಸಿವೆ, ಉದ್ದಿನ ಬೇಳೆ ಮತ್ತು ಕರಿಬೇವಿನ ಒಗ್ಗರಣೆ ಮಾಡಿ. 
  4.  ಸಾಸಿವೆ ಸಿಡಿದ ಕೂಡಲೇ ಕತ್ತರಿಸಿದ ಈರುಳ್ಳಿ ಹಾಕಿ.
  5. ಈರುಳ್ಳಿ ಮೆತ್ತಗಾದ ಕೂಡಲೇ ಟೊಮ್ಯಾಟೋ ಹಾಕಿ ಹುರಿಯಿರಿ.
  6. ಈಗ ಬೇಯಿಸಿದ ತರಕಾರಿಗಳನ್ನು ಹಾಕಿ. ಆಮೇಲೆ ಅರೆದ ಮಸಾಲೆ ಹಾಕಿ. 
  7. ಉಪ್ಪು ಮತ್ತು ಬೇಕಾದಷ್ಟು ನೀರು ಸೇರಿಸಿ. 
  8. ಚೆನ್ನಾಗಿ ಕುದಿಸಿ, ಸ್ಟವ್ ಆಫ್ ಮಾಡಿ. 


ಸೋಮವಾರ, ಜುಲೈ 18, 2016

Set dosa recipe in Kannada | ಸೆಟ್ ದೋಸೆ ಮಾಡುವ ವಿಧಾನ

Set dosa recipe in Kannada

Set dosa recipe in Kannada | ಸೆಟ್ ದೋಸೆ ಮಾಡುವ ವಿಧಾನ


ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ಕಪ್ ದೋಸೆ ಅಕ್ಕಿ
  2. 1/2 ಕಪ್ ಉದ್ದಿನ ಬೇಳೆ (ಮಿಕ್ಸಿ ಉಪಯೋಗಿಸುತ್ತೀರಾದಲ್ಲಿ 1/4 ಕಪ್ ಹೆಚ್ಚುವರಿ ಸೇರಿಸಿ)
  3. 1 ಕಪ್ ತೆಳು ಅವಲಕ್ಕಿ ಅಥವಾ 1/2 ಕಪ್ ಗಟ್ಟಿ ಅವಲಕ್ಕಿ 
  4. 1 ಟೀಸ್ಪೂನ್ ಮೆಂತ್ಯ
  5. 0 - 1/4 ಕಪ್ ಮೊಸರು (ಬೇಕಾದಲ್ಲಿ - ಚಳಿಗಾಲದಲ್ಲಿ ಮಾತ್ರ ಸೇರಿಸಿ)
  6. ಉಪ್ಪು ರುಚಿಗೆ ತಕ್ಕಷ್ಟು.

ಸೆಟ್ ದೋಸೆ ಮಾಡುವ ವಿಧಾನ :

  1. ಅಕ್ಕಿ, ಉದ್ದಿನ ಬೇಳೆ ಮತ್ತು ಮೆಂತೆಯನ್ನು ತೊಳೆದು ಒಳ್ಳೆಯ ಕುಡಿಯುವ ನೀರಿನಲ್ಲಿ 5-6 ಗಂಟೆಗಳ ಕಾಲ ನೆನೆಯಲು ಬಿಡಿ.
  2. ಅವಲಕ್ಕಿಯನ್ನು 30 ನಿಮಿಷಗಳ ಕಾಲ ನೆನೆಸಿ. 
  3. ಈಗ ಗ್ರೈಂಡರ್ ನಲ್ಲಿ, ನೆನೆಸಿ ನೀರು ಬಗ್ಗಿಸಿದ ಅಕ್ಕಿ, ಉದ್ದಿನ ಬೇಳೆ, ಮೆಂತೆ ಮತ್ತು ಅವಲಕ್ಕಿಯನ್ನು ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ ರುಬ್ಬಿರಿ. ಮಿಕ್ಸಿಯಲ್ಲೂ ರುಬ್ಬ ಬಹುದು. ಆದರೆ ಉದ್ದಿನಬೇಳೆ ೧/೪ ಕಪ್ ಹೆಚ್ಚುವರಿ ಸೇರಿಸಲು ಮರೆಯದಿರಿ. 
  4. ನಯವಾದ ದೋಸೆ ಹಿಟ್ಟು ತಯಾರಾಗುವವರೆಗೆ ರುಬ್ಬಿ. ಮೊಸರು ಸೇರಿಸುತ್ತೀರಾದಲ್ಲಿ ಕೊನೆಯಲ್ಲಿ ಸೇರಿಸಿ ನಾಲ್ಕು ಸುತ್ತು ಅರೆಯಿರಿ. ಹಿಟ್ಟನ್ನು ಒಂದು ದೊಡ್ಡ ಪಾತ್ರೆಗೆ ಬಗ್ಗಿಸಿ.
  5. ಮುಚ್ಚಳವನ್ನು ಮುಚ್ಚಿ, ಹಿಟ್ಟು ಹುದುಗಲು 7-8 ಘಂಟೆ ಕಾಲ ಬಿಡಿ. ಚಳಿಗಾಲವಾದಲ್ಲಿ 15 - 16 ಘಂಟೆಯವರೆಗೂ ಹಿಟ್ಟು ಹುದುಗಿಸಬೇಕಾಗಬಹುದು. 
  6. ದೋಸೆ ಕಲ್ಲನ್ನು ಬಿಸಿಮಾಡಿ ಕೊಳ್ಳಿ. ಒಂದು ಸೌಟು ಹಿಟ್ಟನ್ನು ಹಾಕಿ, ಸ್ವಲ್ಪ ತೆಳ್ಳಗೆ ಮಾಡಿ. ಮುಚ್ಚಳ ಮುಚ್ಚಿ. 
  7. ೫ - ೧೦ ಸೆಕೆಂಡ್ ಗಳ ನಂತರ ಮುಚ್ಚಳ ತೆರೆದು, ಮೇಲಿನಿಂದ ಎಣ್ಣೆ ಹಾಕಿ. 
  8. ಬೇಕಾದಲ್ಲಿ ಇನ್ನೊಂದು ಬದಿಯೂ ಬೇಯಿಸಿ. ತೆಂಗಿನಕಾಯಿ ಚಟ್ನಿ ಮತ್ತು ತರಕಾರಿ ಸಾಗುವಿನೊಂದಿಗೆ ಬಡಿಸಿ.


Baadaami poori recipe in Kannada | ಬಾದಾಮಿ ಪೂರಿ ಮಾಡುವ ವಿಧಾನ

Baadaami poori recipe in Kannada

Baadaami poori recipe in Kannada | ಬಾದಾಮಿ ಪೂರಿ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 3 ಕಪ್ ಮೈದಾ ಹಿಟ್ಟು 
  2. 1/2 ಕಪ್ ತುಪ್ಪ (1kg ಹಿಟ್ಟಿಗೆ 300gm) 
  3. 2 ಕಪ್ ಸಕ್ಕರೆ 
  4. 1/2 ಚಮಚ ನಿಂಬೆ ರಸ 
  5. ಚಿಟಿಕೆ ಏಲಕ್ಕಿ ಪುಡಿ 
  6. ಉಪ್ಪು ರುಚಿಗೆ ತಕ್ಕಷ್ಟು
  7. ಕರಿಯಲು ಎಣ್ಣೆ

ಬಾದಾಮಿ ಪೂರಿ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಮೈದಾ ಹಿಟ್ಟು, ಉಪ್ಪು ಮತ್ತು ತುಪ್ಪ ಹಾಕಿ ಕಲಸಿ. 
  2. ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಮೃದುವಾದ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ. 
  3. ೨ ಕಪ್ ಸಕ್ಕರೆಗೆ ೧ ಕಪ್ ನೀರು ಹಾಕಿ ಒಂದೆಳೆ ಪಾಕ ಮಾಡಿಟ್ಟು ಕೊಳ್ಳಿ. ಸಕ್ಕರೆ ಪಾಕಕ್ಕೆ ಏಲಕ್ಕಿ ಪುಡಿ, ನಿಂಬೆ ರಸ ಸೇರಿಸಿ. 
  4. ಈಗ ನಿಂಬೆ ಹಣ್ಣಿನ ಗಾತ್ರದ ಉಂಡೆ ತೆಗೆದು ಕೊಂಡು ಲಟ್ಟಿಸಿ, ತ್ರಿಕೋನಾಕಾರಕ್ಕೆ ಮಡಿಸಿ. ಪುನಃ ಸ್ವಲ್ಪ ಲಟ್ಟಿಸಿ. 
  5. ಬಿಸಿಯಾದ ಎಣ್ಣೆಯಲ್ಲಿ ಹಾಕಿ ಮಧ್ಯಮ ಉರಿಯಲ್ಲಿ ಕಾಯಿಸಿ. 
  6. ಸ್ವರ ಅಥವಾ ಗುಳ್ಳೆಗಳು ನಿಂತ ಮೇಲೆ ತೆಗೆದು ಸಕ್ಕರೆ ಪಾಕದಲ್ಲಿ ೩೦ ಸೆಕೆಂಡ್ ಗಳ ಕಾಲ ಅದ್ದಿ ತೆಗೆಯಿರಿ.

ಶುಕ್ರವಾರ, ಜುಲೈ 15, 2016

Kara kaddi recipe in Kannada | ಖಾರ ಕಡ್ಡಿ ಮಾಡುವ ವಿಧಾನ

Kara kaddi recipe in Kannada

Kara kaddi recipe in Kannada | ಖಾರ ಕಡ್ಡಿ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಕಡ್ಲೆಹಿಟ್ಟು
  2. 1/2 ಟೀಸ್ಪೂನ್ ಅಚ್ಚ ಖಾರದ ಪುಡಿ
  3. 1/4 ಟೀಸ್ಪೂನ್ ಓಮ ಕಾಳು ಅಥವಾ ಅಜವೈನ್
  4. 1/2 ಟೀಸ್ಪೂನ್ ಉಪ್ಪು 
  5. ದೊಡ್ಡ ಚಿಟಿಕೆ ಇಂಗು
  6. 2 ಟೇಬಲ್ ಚಮಚ ಬಿಸಿ ಎಣ್ಣೆ
  7. ಎಣ್ಣೆ ಖಾರ ಕಡ್ಡಿ ಕಾಯಿಸಲು

ಖಾರ ಕಡ್ಡಿ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಕಡ್ಲೆಹಿಟ್ಟು, ಅಚ್ಚಖಾರದ ಪುಡಿ, ಇಂಗು, ಓಮ ಕಾಳು ಮತ್ತು ಉಪ್ಪನ್ನು ಹಾಕಿ. 
  2. 2 ಟೇಬಲ್ ಚಮಚ ಬಿಸಿ ಎಣ್ಣೆ ಹಾಕಿ ಕಲಸಿ. 
  3. ನೀರು ಹಾಕಿ ದಪ್ಪ ಪೇಸ್ಟ್ ನಂತಹ ಹಿಟ್ಟು ಸಿದ್ಧಪಡಿಸಿಕೊಳ್ಳಿ. ಹಿಟ್ಟು ಚಪಾತಿ ಹಿಟ್ಟಿಗಿಂತ ಮೆತ್ತಗಿರಲಿ. 
  4. ಮೂರು ತೂತುಗಳಿರುವ ಖಾರ ಕಡ್ಡಿ ಅಚ್ಚಿಗೆ ಹಿಟ್ಟನ್ನು ಹಾಕಿ ಬಿಸಿ ಎಣ್ಣೆಗೆ ಒತ್ತಿ . 
  5. ಮಧ್ಯಮ ಉರಿಯಲ್ಲಿ ಕಾಯಿಸಿ. ಸ್ವರ ಅಥವಾ ಗುಳ್ಳೆಗಳು ನಿಂತ ಮೇಲೆ ತೆಗೆಯಿರಿ.

ಗುರುವಾರ, ಜುಲೈ 14, 2016

sabbasige soppu saru in Kannada | ಸಬ್ಬಸಿಗೆ ಸೊಪ್ಪು ಸಾರು ಮಾಡುವ ವಿಧಾನ

sabbasige soppu saru in Kannada

Sabbasige soppu saru in Kannada | ಸಬ್ಬಸಿಗೆ ಸೊಪ್ಪು ಸಾರು ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಕತ್ತರಿಸಿದ ಸಬ್ಬಸಿಗೆ ಸೊಪ್ಪು 
  2. 1 - 2 ಹಸಿರು ಮೆಣಸಿನಕಾಯಿ (ನಿಮ್ಮ ಖಾರಕ್ಕೆ ತಕ್ಕಂತೆ) 
  3. 1 ಟೀಸ್ಪೂನ್ ಕೊತ್ತಂಬರಿ ಬೀಜ 
  4. 1/4 ಟೀಸ್ಪೂನ್ ಜೀರಿಗೆ 
  5. 1/4 - 1/2 ಟೀಸ್ಪೂನ್ ಕರಿಮೆಣಸು (ನಿಮ್ಮ ಖಾರಕ್ಕೆ ತಕ್ಕಂತೆ) 
  6. 1/4 ಕಪ್ ತೆಂಗಿನ ತುರಿ 
  7. ಸಣ್ಣ ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು ( ನಿಮ್ಮ ರುಚಿಗೆ ತಕ್ಕಂತೆ ) 
  8. ಸಣ್ಣ ನೆಲ್ಲಿಕಾಯಿ ಗಾತ್ರದ ಬೆಲ್ಲ ( ಬೇಕಾದಲ್ಲಿ - ನಿಮ್ಮ ರುಚಿಗೆ ತಕ್ಕಂತೆ ) 
  9. ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/4 ಟೀಸ್ಪೂನ್ ಸಾಸಿವೆ
  2. 1 ಒಣ ಮೆಣಸಿನ ಕಾಯಿ
  3. 1 ಟೀಸ್ಪೂನ್ ಅಡುಗೆ ಎಣ್ಣೆ

ಸಬ್ಬಸಿಗೆ ಸೊಪ್ಪು ಸಾರು ಮಾಡುವ ವಿಧಾನ:

  1. ಒಂದು ಬಾಣಲೆಗೆ ೧/೨ ಚಮಚ ಎಣ್ಣೆ ಹಾಕಿ ಕೊತ್ತಂಬರಿ ಬೀಜ, ಜೀರಿಗೆ ಮತ್ತು ಕರಿಮೆಣಸು ಹಾಕಿ ಹುರಿಯಿರಿ. 
  2. ನಂತರ ಕತ್ತರಿಸಿದ ಸಬ್ಬಸಿಗೆ ಸೊಪ್ಪು ಮತ್ತು ಹಸಿರು ಮೆಣಸಿನಕಾಯಿ ಸೇರಿಸಿ ಹುರಿಯಿರಿ. 
  3. ಕೊನೆಯಲ್ಲಿ ತೆಂಗಿನ ತುರಿ ಹಾಕಿ, ಮಗುಚಿ ಸ್ಟೋವ್ ಆಫ್ ಮಾಡಿ. 
  4. ಬಿಸಿ ಆರಿದ ಮೇಲೆ ಮಿಕ್ಸಿ ಜಾರಿಗೆ ಹಾಕಿ, ಬೇಕಾದಷ್ಟು ನೀರು ಸೇರಿಸಿ ನುಣ್ಣನೆ ಅರೆಯಿರಿ. 
  5. ಒಂದು ಪಾತ್ರೆಗೆ ವರ್ಗಾಯಿಸಿ. ಹುಣಿಸೆ ರಸ, ಉಪ್ಪು ಮತ್ತು ಬೆಲ್ಲ ಹಾಕಿ. ಒಂದು ಲೀಟರ್ ನಷ್ಟು ನೀರು ಸೇರಿಸಿ, ಕುದಿಸಿ. 
  6. ಎಣ್ಣೆ, ಸಾಸಿವೆ ಮತ್ತು ಒಣ ಮೆಣಸಿನ ಒಗ್ಗರಣೆ ಕೊಡಿ. ಅನ್ನದೊಂದಿಗೆ ಬಡಿಸಿ ಅಥವಾ ಹಾಗೆ ಕುಡಿಯಲು ನೀಡಿ.

ಸೋಮವಾರ, ಜುಲೈ 11, 2016

Nuchinunde recipe in Kannada | ನುಚ್ಚಿನುಂಡೆ ಮಾಡುವ ವಿಧಾನ

Nuchinunde recipe in Kannada

Nuchinunde recipe in Kannada | ನುಚ್ಚಿನುಂಡೆ ಮಾಡುವ ವಿಧಾನ

ನುಚ್ಚಿನುಂಡೆ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ತೊಗರಿಬೇಳೆ 
  2. 1 ಸಣ್ಣಗೆ ಹೆಚ್ಚಿದ ಈರುಳ್ಳಿ 
  3. 1/4 ಕಪ್ ಕಡ್ಲೆಬೇಳೆ 
  4. 1 - 3 ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ 
  5. 1/2 " ಉದ್ದದ ಶುಂಠಿ ಸಣ್ಣಗೆ ಹೆಚ್ಚಿದ್ದು 
  6. 5 - 6 ಸಣ್ಣಗೆ ಹೆಚ್ಚಿದ ಕರಿಬೇವಿನ ಎಲೆ 
  7. 1 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು 
  8. 1/4 ಕಪ್ ತೆಂಗಿನತುರಿ 
  9. ಒಂದು ದೊಡ್ಡ ಚಿಟಿಕೆ ಇಂಗು 
  10. 1/4 ಕಪ್ ಸಬ್ಬಸಿಗೆ ಸೊಪ್ಪು (ಬೇಕಾದಲ್ಲಿ) 
  11. ನಿಮ್ಮ ರುಚಿ ಪ್ರಕಾರ ಉಪ್ಪು

ನುಚ್ಚಿನುಂಡೆ ಮಾಡುವ ವಿಧಾನ:

  1. ಬೇಳೆಗಳನ್ನು ತೊಳೆದು ೪ ಘಂಟೆಗಳ ಕಾಲ ನೆನೆಸಿಡಿ. 
  2. ನೆನೆದ ನಂತರ ನೀರು ಬಗ್ಗಿಸಿ, ನೀರು ಹಾಕದೆ ತರಿ ತರಿಯಾಗಿ ರುಬ್ಬಿ ಕೊಳ್ಳಿ. 
  3. ಅದಕ್ಕೆ ಹೆಚ್ಚಿದ ಈರುಳ್ಳಿ, ಹಸಿರುಮೆಣಸಿನಕಾಯಿ, ಕರಿಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು, ಸಬ್ಬಸಿಗೆ ಸೊಪ್ಪು, ತೆಂಗಿನತುರಿ, ಶುಂಠಿ, ಇಂಗು ಮತ್ತು ಉಪ್ಪು ಹಾಕಿ ಕಲಸಿ. 
  4. ಉಂಡೆಗಳನ್ನು ಮಾಡಿ, ಇಡ್ಲಿ ಪ್ಲೇಟ್ ನಲ್ಲಿಟ್ಟು ೧೫ ನಿಮಿಷಗಳ ಕಾಲ ಆವಿ ಅಥವಾ ಸೆಕೆಯಲ್ಲಿ ಬೇಯಿಸಿ. 
  5. ತುಪ್ಪ ಅಥವಾ ಹಸಿ ಮಜ್ಜಿಗೆ ಯೊಂದಿಗೆ ಬಡಿಸಿ.



Hasi majjige recipe in Kannada | ಹಸಿ ಮಜ್ಜಿಗೆ ಮಾಡುವ ವಿಧಾನ

Hasi majjige recipe in Kannada

Hasi majjige recipe in Kannada | ಹಸಿ ಮಜ್ಜಿಗೆ ಮಾಡುವ ವಿಧಾನ


ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಟೇಬಲ್ ಚಮಚ ಹುರಿಗಡಲೆ
  2. 1/2 ಚಮಚ ಸಾಸಿವೆ 
  3. 1 - 2 ಹಸಿರು ಮೆಣಸಿನಕಾಯಿ 
  4. 1/4 " ಉದ್ದ ಶುಂಠಿ 
  5. 1 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು 
  6. 1/4 ಕಪ್ ತೆಂಗಿನ ತುರಿ 
  7. 1 ಕಪ್ ಮೊಸರು
  8. ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಟೀಸ್ಪೂನ್ ಸಾಸಿವೆ
  2. 4 - 5 ಕರಿಬೇವಿನ ಎಲೆ
  3. ಒಂದು ಚಿಟಿಕೆ ಇಂಗು
  4. 1 ಟೀಸ್ಪೂನ್ ಅಡುಗೆ ಎಣ್ಣೆ

ಹಸಿ ಮಜ್ಜಿಗೆ ಮಾಡುವ ವಿಧಾನ:

  1. ಒಂದು ಮಿಕ್ಸಿ ಜಾರಿಗೆ ಹುರಿಗಡಲೆ, ಸಾಸಿವೆ, ಹಸಿರು ಮೆಣಸಿನಕಾಯಿ, ಶುಂಠಿ, ಕೊತ್ತಂಬರಿ ಸೊಪ್ಪು, ತೆಂಗಿನ ತುರಿ ಹಾಕಿ, ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ. 
  2. ಉಪ್ಪು ಮತ್ತು ಮೊಸರು ಸೇರಿಸಿ. 
  3. ಸಾಸಿವೆ, ಇಂಗು ಮತ್ತು ಕರಿಬೇವಿನ ಒಗ್ಗರಣೆ ಮಾಡಿ.

ಭಾನುವಾರ, ಜುಲೈ 10, 2016

Godhi dose recipe in Kannada | ಗೋಧಿ ದೋಸೆ ಮಾಡುವ ವಿಧಾನ

Godhi dose recipe in Kannada

Godhi dose recipe in Kannada | ಗೋಧಿ ದೋಸೆ ಮಾಡುವ ವಿಧಾನ 



ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ಕಪ್ ಇಡೀ ಗೋಧಿ
  2. 1/2 ಕಪ್ ತೆಂಗಿನಕಾಯಿ ತುರಿ
  3. 2 ಟೀಸ್ಪೂನ್ ಕೊತ್ತಂಬರಿ ಬೀಜ
  4. 1/2 ಟೀಸ್ಪೂನ್ ಜೀರಿಗೆ
  5. 3 - 4 ಕೆಂಪು ಮೆಣಸಿನಕಾಯಿ
  6. 1 ಟೀ ಚಮಚ ಹೆಚ್ಚಿದ ಕರಿಬೇವು
  7. ನಿಮ್ಮ ರುಚಿ ಪ್ರಕಾರ ಉಪ್ಪು


ಗೋಧಿ ದೋಸೆ ಮಾಡುವ ವಿಧಾನ :

  1. ಗೋಧಿಯನ್ನು ತೊಳೆದು ೫ - ೬ ಘಂಟೆಗಳ ಕಾಲ ನೆನೆಸಿಡಿ. 
  2. ನೆನೆದ ನಂತರ ನೀರು ಬಗ್ಗಿಸಿ, ತೆಂಗಿನಕಾಯಿ ತುರಿ, ಕೊತ್ತಂಬರಿ ಬೀಜ, ಜೀರಿಗೆ, ಕೆಂಪು ಮೆಣಸಿನಕಾಯಿ ಮತ್ತು ಉಪ್ಪು ಹಾಕಿ ಅರೆಯಿರಿ.
  3. ಕೊನೆಯಲ್ಲಿ ಹೆಚ್ಚಿದ ಕರಿಬೇವಿನ ಸೊಪ್ಪು ಹಾಕಿ. ಬೇಕಾದಲ್ಲಿ ಹೆಚ್ಚಿದ ಹಸಿರು ಮೆಣಸಿನ ಕಾಯಿಯನ್ನು ಹಾಕಬಹುದು.  
  4. ದೋಸೆ ಕಾವಲಿಯನ್ನು ಬಿಸಿ ಮಾಡಿ ತೆಳ್ಳನೆ ದೋಸೆ ಮಾಡಿ. 
  5. ಮೇಲಿನಿಂದ ತುಪ್ಪ ಅಥವಾ ಎಣ್ಣೆ ಹಾಕಿ ಬೇಯಿಸಿ. ಚಟ್ನಿ ಅಥವಾ ಬೆಣ್ಣೆಯೊಂದಿಗೆ ಬಡಿಸಿ. 


ಮಂಗಳವಾರ, ಜುಲೈ 5, 2016

Uddina bele chutney recipe in Kannada | ಉದ್ದಿನಬೇಳೆ ಚಟ್ನಿ ಮಾಡುವ ವಿಧಾನ

Uddina bele chutney recipe in Kannada

Uddina bele chutney recipe in Kannada | ಉದ್ದಿನಬೇಳೆ ಚಟ್ನಿ ಮಾಡುವ ವಿಧಾನ

ಉದ್ದಿನಬೇಳೆ ಚಟ್ನಿ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ತೆಂಗಿನ ತುರಿ
  2. 1 - 2 ಒಣ ಮೆಣಸಿನಕಾಯಿ
  3. 4 ಟೀಸ್ಪೂನ್ ಉದ್ದಿನ ಬೇಳೆ
  4. 4 - 5 ಕರಿ ಬೇವಿನ ಎಲೆ ಅಥವಾ 1/4 ಟೀಸ್ಪೂನ್ ಕೊತ್ತಂಬರಿ ಬೀಜ
  5. ಸಣ್ಣ ಗೋಲಿ ಗಾತ್ರದ ಹುಣಿಸೇಹಣ್ಣು 
  6. 1/2 ಟೀಸ್ಪೂನ್ ಅಡುಗೆ ಎಣ್ಣೆ
  7. ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಒಣ ಮೆಣಸಿನಕಾಯಿ
  2. 1/4 ಟೀಸ್ಪೂನ್ ಸಾಸಿವೆ
  3. 2 ಟೀಸ್ಪೂನ್ ಅಡುಗೆ ಎಣ್ಣೆ

ಉದ್ದಿನಬೇಳೆ ಚಟ್ನಿ ಮಾಡುವ ವಿಧಾನ:

  1. ಒಂದು ಬಾಣಲೆಗೆ ಎಣ್ಣೆ, ಒಣ ಮೆಣಸಿನಕಾಯಿ ಮತ್ತು ಉದ್ದಿನಬೇಳೆ ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ.
  2. ಕೊನೆಯಲ್ಲಿ ಕರಿಬೇವಿನ ಸೊಪ್ಪು ಅಥವಾ ಕೊತ್ತಂಬರಿ ಬೀಜ ಹಾಕಿ ಹುರಿಯಿರಿ. 
  3. ತೆಂಗಿನ ತುರಿ, ಹುರಿದ ಒಣ ಮೆಣಸು, ಕೊತ್ತಂಬರಿ ಬೀಜ ಅಥವಾ ಕರಿಬೇವಿನ ಸೊಪ್ಪು, ಹುರಿದ ಉದ್ದಿನಬೇಳೆ, ಉಪ್ಪು ಮತ್ತು ಹುಣಿಸೇಹಣ್ಣು ಹಾಕಿ, ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ. 
  4. ಒಣಮೆಣಸಿನಕಾಯಿ ಮತ್ತು ಸಾಸಿವೆಯ ಒಗ್ಗರಣೆ ಮಾಡಿ.

ಸೋಮವಾರ, ಜುಲೈ 4, 2016

mixed veg palya recipe in Kannada | ಬೆರಕೆ ತರಕಾರಿ ಪಲ್ಯ

mixed veg curry recipe in Kannada

mixed veg palya recipe in Kannada | ಬೆರಕೆ ತರಕಾರಿ ಪಲ್ಯ 

ಮಿಕ್ಸ್ ತರಕಾರಿ ಪಲ್ಯ ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ 240 ಎಂ ಎಲ್ ): 

  1. 1 ಕ್ಯಾರೆಟ್ 
  2. 10 - 12 ಬೀನ್ಸ್ 
  3. 1 ಬದನೆ ಕಾಯಿ  
  4. 1 ಆಲೂಗೆಡ್ಡೆ 
  5. 1 ದೊಡ್ಡ ಟೊಮೆಟೊ 
  6. 1 ಸಣ್ಣ ಕ್ಯಾಪ್ಸಿಕಂ 
  7. 1/2 ಚಮಚ ಸಾಸಿವೆ 
  8. 1 ಟೀಸ್ಪೂನ್ ಕಡ್ಲೆಬೇಳೆ  
  9. 1 ಟೀಸ್ಪೂನ್ ಉದ್ದಿನ ಬೇಳೆ 
  10. 2 ಟೀಸ್ಪೂನ್ ವಾಂಗಿ ಬಾತ್ ಪುಡಿ ಅಥವಾ ಪಲ್ಯದ ಪುಡಿ
  11. 1/4 ಟೀಸ್ಪೂನ್ ಅರಿಶಿನ ಪುಡಿ
  12. ಒಂದು ದೊಡ್ಡ ಚಿಟಿಕೆ ಇಂಗು
  13. 5 - 6 ಕರಿಬೇವಿನ ಎಲೆ 
  14. 1 ಹಸಿರು ಮೆಣಸಿನಕಾಯಿ 
  15. 1/2 ನೆಲ್ಲಿಕಾಯಿ ಗಾತ್ರದ ಬೆಲ್ಲ (ಬೇಕಾದಲ್ಲಿ) 
  16. ನಿಮ್ಮ ರುಚಿ ಪ್ರಕಾರ ಉಪ್ಪು 
  17. 4 ಟೀಸ್ಪೂನ್ ಅಡುಗೆ ಎಣ್ಣೆ


ಬೆರಕೆ ತರಕಾರಿ ಪಲ್ಯ ಮಾಡುವ ವಿಧಾನ:

  1. ಮೊದಲಿಗೆ ಎಲ್ಲ ತರಕಾರಿಗಳನ್ನು ಕತ್ತರಿಸಿಟ್ಟು ಕೊಳ್ಳಿ. 
  2. ಎಣ್ಣೆ, ಸಾಸಿವೆ, ಉದ್ದಿನ ಬೇಳೆ, ಕಡ್ಲೆಬೇಳೆ, ಹಸಿರು ಮೆಣಸಿನ ಕಾಯಿ, ಕರಿಬೇವು, ಅರಶಿನ ಪುಡಿ ಮತ್ತು ಇಂಗಿನ ಒಗ್ಗರಣೆ ಮಾಡಿಕೊಳ್ಳಿ. 
  3. ಕತ್ತರಿಸಿಟ್ಟ ತರಕಾರಿಗಳನ್ನು ಹಾಕಿ, ಒಂದೆರಡು ನಿಮಿಷ ಹುರಿಯಿರಿ. 
  4. ಪಲ್ಯದ ಪುಡಿ, ಉಪ್ಪು, ಬೆಲ್ಲ ಮತ್ತು ೧/೪ ಕಪ್ ನೀರು ಹಾಕಿ. 
  5. ಒಮ್ಮೆ ಮಗುಚಿ, ಮುಚ್ಚಳ ಮುಚ್ಚಿ, ಸಣ್ಣ ಉರಿಯಲ್ಲಿ ಬೇಯಿಸಿ. ಚಪಾತಿ ಅಥವಾ ಅನ್ನದೊಂದಿಗೆ ಬಡಿಸಿ. 

ಶುಕ್ರವಾರ, ಜುಲೈ 1, 2016

Upsaaru recipe in kannada | ಉಪ್ಸಾರು ಮಾಡುವ ವಿಧಾನ

Upsaaru recipe in kannada

Upsaaru recipe in kannada | ಉಪ್ಸಾರು ಮಾಡುವ ವಿಧಾನ

ಮುಖ್ಯ ಪದಾರ್ಥಗಳು: (ಅಳತೆ ಕಪ್ = 240ml) 

  1. 1 ಕಟ್ಟು ಸೊಪ್ಪು ಅಥವಾ  250gm ತರಕಾರಿ (ಮೆಂತೆ ಸೊಪ್ಪು ಹೊರತುಪಡಿಸಿ ಯಾವುದೇ ಸೊಪ್ಪ ಮತ್ತು ಎಲೆಕೋಸು, ಬೀನ್ಸ್ ಅಥವಾ ಹೀರೇಕಾಯಿಯಂತಹ ತರಕಾರಿ)
  2. 1/4 ಕಪ್ ತೊಗರಿಬೇಳೆ
  3. 1/4 ಕಪ್ ಹೆಸರುಕಾಳು ಅಥವಾ ಇನ್ನಾವುದೇ ಕಾಳು (ಬೇಕಾದಲ್ಲಿ -  ಇಲ್ಲವಾದಲ್ಲಿ 1/4 ಕಪ್ ನಷ್ಟು ತೊಗರಿಬೇಳೆ ಹೆಚ್ಚಿಸಿ) 
  4. 2 - 4 ಹಸಿರು ಮೆಣಸಿನಕಾಯಿ (ಈ ಸಾರು ಸ್ವಲ್ಪ ಜಾಸ್ತಿ ಖಾರ ಇರುತ್ತದೆ)
  5. ನಿಮ್ಮ ರುಚಿ ಪ್ರಕಾರ ಉಪ್ಪು

ಉಪ್ಸಾರಿಗೆ  ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ml)

  1. 1 ಕತ್ತರಿಸಿದ ಈರುಳ್ಳಿ
  2. 10 ಬೇಳೆ ಸುಲಿದು ಮತ್ತು ಕತ್ತರಿಸಿದ ಬೆಳ್ಳುಳ್ಳಿ
  3. 1 ಕತ್ತರಿಸಿದ ಟೊಮೆಟೊ
  4. 1/2 ನೆಲ್ಲಿಕಾಯಿ ಗಾತ್ರದ ಹುಣಸೆಹಣ್ಣು 
  5. 1/4 ಕಪ್ ತೆಂಗಿನ ತುರಿ
  6. 1 ಟೀಸ್ಪೂನ್ ಜೀರಿಗೆ 
  7. 4 - 5 ಕರಿಮೆಣಸು
  8. ಸ್ವಲ್ಪ ಕೊತ್ತುಂಬರಿ ಸೊಪ್ಪು 
  9. ನಿಮ್ಮ ರುಚಿ ಪ್ರಕಾರ ಉಪ್ಪು

 ಉಪ್ಸಾರು ಒಗ್ಗರಣೆಗೆ ಬೇಕಾಗುವ ಪದಾರ್ಥಗಳು: 

  1. 1 ಕೆಂಪು ಮೆಣಸಿನಕಾಯಿ 
  2. 5 - 6 ಕರಿಬೇವಿನ 
  3. 1/2 ಚಮಚ ಸಾಸಿವೆ 
  4. 2 ಟೀಸ್ಪೂನ್ ಅಡುಗೆ ಎಣ್ಣೆ 

ಉಪ್ಸಾರು ಪಲ್ಯಕ್ಕೆ ಬೇಕಾಗುವ ಪದಾರ್ಥಗಳು: 

  1. 1 ಕೆಂಪು ಮೆಣಸಿನಕಾಯಿ 
  2. 1 ಟೀಸ್ಪೂನ್ ಉದ್ದಿನ ಬೇಳೆ 
  3. 1 ಟೀಸ್ಪೂನ್ ಕಡಲೆಬೇಳೆ 
  4. 5 - 6 ಕರಿಬೇವಿನ ಎಲೆ  
  5. 1/2 ಚಮಚ ಸಾಸಿವೆ 
  6. 1 ಕತ್ತರಿಸಿದ ಈರುಳ್ಳಿ 
  7. 1 - 2 ಹಸಿಮೆಣಸು (ಬೇಕಾದಲ್ಲಿ) 
  8. 2 ಟೇಬಲ್ ಸ್ಪೂನ್  ತೆಂಗಿನ ತುರಿ
  9. 2 ಟೇಬಲ್ ಸ್ಪೂನ್ ಹೆಚ್ಚಿದ ಕೊತ್ತಂಬರಿ ಸೊಪ್ಪು
  10. 2 ಟೀಸ್ಪೂನ್ ಅಡುಗೆ ಎಣ್ಣೆ

ಉಪ್ಸಾರು ಮಾಡುವ ವಿಧಾನ:

  1. ಸೊಪ್ಪು, ಬೇಳೆ, ಕಾಳು ಮತ್ತು ಹಸಿರುಮೆಣಸಿನ ಕಾಯಿಯನ್ನು, ಉಪ್ಪು ಮತ್ತು ನೀರಿನೊಂದಿಗೆ ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಿ. 
  2. ಕತ್ತರಿಸಿದ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ೧ ಚಮಚ ಎಣ್ಣೆಯಲ್ಲಿ ಹುರಿದಿಟ್ಟು ಕೊಳ್ಳಿ. 
  3. ಮಿಕ್ಸಿಯಲ್ಲಿ ಹುರಿದ ಈರುಳ್ಳಿ, ಬೆಳ್ಳುಳ್ಳಿ, ಟೊಮ್ಯಾಟೋ, ಕೊತ್ತಂಬರಿ ಸೊಪ್ಪು, ಜೀರಿಗೆ, ಕರಿಮೆಣಸು, ಹುಣಿಸೆ ಹಣ್ಣು, ಬೇಯಿಸಿದ ಹಸಿರು ಮೆಣಸಿನಕಾಯಿ, ಬೇಯಿಸಿದ ಸೊಪ್ಪು+ಕಾಳು+ಬೇಳೆಯ ಮಿಶ್ರಣ ೨ ಟೇಬಲ್ ಚಮಚದಷ್ಟು ಹಾಕಿ ನುಣ್ಣನೆ ಅರೆದುಕೊಳ್ಳಿ. 
  4. ಒಂದು ಬಾಣಲೆಯಲ್ಲಿ ಎಣ್ಣೆ, ಕೆಂಪು ಮೆಣಸಿನಕಾಯಿ, ಕರಿಬೇವು, ಸಾಸಿವೆಯ ಒಗ್ಗರಣೆ ಮಾಡಿ. 
  5. ಅದಕ್ಕೆ ಅರೆದ ಮಸಾಲೆ ಅಥವಾ ಖಾರ ಹಾಕಿ ಒಂದೆರಡು ನಿಮಿಷ ಮಗುಚಿ.
  6. ಈಗ ಬೇಯಿಸಿದ ಸೊಪ್ಪು+ಕಾಳು+ಬೇಳೆಯ ನೀರು ಬಸಿದು ಸೇರಿಸಿ. ಸಾರಿನ ಹದಕ್ಕೆ ಬೇಕಾದಷ್ಟು ನೀರು ಸೇರಿಸಿ. ಉಪ್ಪು ಹಾಕಿ. ಕುದಿಸಿದರೆ ಉಪ್ಸಾರು ತಯಾರಾಯಿತು. 
  7. ಇನ್ನೊಂದು ಬಾಣಲೆಯಲ್ಲಿ ಎಣ್ಣೆ, ಸಾಸಿವೆ, ಕೆಂಪು ಮೆಣಸಿನಕಾಯಿ, ಹಸಿರು ಮೆಣಸಿನಕಾಯಿ, ಉದ್ದಿನ ಬೇಳೆ, ಕಡಲೆಬೇಳೆ ಮತ್ತು ಕರಿಬೇವಿನ ಎಲೆಯ ಒಗ್ಗರಣೆ ಮಾಡಿ. 
  8. ಕತ್ತರಿಸಿದ ಈರುಳ್ಳಿ ಹಾಕಿ ಬಾಡಿಸಿ. 
  9. ನೀರು ಬಸಿದು ಉಳಿದ ಸೊಪ್ಪು+ಕಾಳು+ಬೇಳೆಯ ಮಿಶ್ರಣವನ್ನು ಸೇರಿಸಿ ಮಗುಚಿ. ಬೇಕಾದಲ್ಲಿ ಉಪ್ಪು ಸೇರಿಸಿ. 
  10. ತೆಂಗಿನ ತುರಿ, ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ ಮಗುಚಿ ಸ್ಟೋವ್ ಆಫ್ ಮಾಡಿ. 
  11. ಅನ್ನ ಅಥವಾ ರಾಗಿ ಮುದ್ದೆಯೊಂದಿಗೆ ಉಪ್ಸಾರು ಮತ್ತು ಪಲ್ಯವನ್ನು ಬಡಿಸಿ. 




Related Posts Plugin for WordPress, Blogger...